;Resize=(412,232))
ಡಾಲಿ ಧನಂಜಯ ಅವರ ಪುತ್ರನಿಗೆ ‘ಎರೆಯ’ ಎಂದು ನಾಮಕರಣ ಮಾಡಲಾಗಿದೆ.
ಚಿನ್ನದಿಂದ ಮಾಡಲಾಗಿರುವ ಚೈನು ಹಾಗೂ ಕರ್ನಾಟಕ ಭೂಪಟದ ಚಿತ್ರದ ಮೇಲೆ ಎರೆಯ ಎಂದು ಬರೆಸಿರುವ ಸರವನ್ನು ಮಗನ ಕೊರಳಿಗೆ ಹಾಕುವ ಮೂಲಕ ಧನಂಜಯ ಹಾಗೂ ಡಾ ಧನ್ಯತಾ ದಂಪತಿ ತಮ್ಮ ಪುತ್ರನ ನಾಮಕರಣ ಕಾರ್ಯವನ್ನು ಮಾಡಿಕೊಂಡಿದ್ದಾರೆ.
ಅಂದಹಾಗೆ ಎರೆಯ ಎಂಬುದು ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿಯ ಬಾಲ್ಯದ ಹೆಸರು. ಕನ್ನಡದ ಇತಿಹಾಸ ಪುರುಷನ ಹೆಸರನ್ನು ಇಡುವ ಮೂಲಕ ಡಾಲಿ ದಂಪತಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಎರೆಯ ಎಂದರೆ ಒಡೆಯ, ಸ್ವಾಮಿ, ಅಧಿಪತಿ ಎಂದರ್ಥ