ಮನೆ ಗುಡಿಸಲು, ಒರೆಸಲು ಡ್ರೀಮ್‌ ಎಫ್‌10

Published : Mar 03, 2026, 01:34 PM IST
robo

ಸಾರಾಂಶ

ರೋಬೋ ವ್ಯಾಕ್ಯೂಮ್ ಕ್ಲೀನರ್ ಅವಶ್ಯಕತೆ ಹೆಚ್ಚುತ್ತಿರುವ ದಿನಗಳಲ್ಲಿ ಚೀನಾದ ಸ್ಮಾರ್ಟ್‌ ಹೋಮ್ ಬ್ರಾಂಡ್ ಡ್ರೀಮ್ ಟೆಕ್ನಾಲಜಿ ಹೊರತಂದಿರುವ ಎಂಟ್ರಿ ಲೆವೆಲ್ ರೋಬೋ ವ್ಯಾಕ್ಯೂಮ್ ಕ್ಲೀನರ್ ವೈಶಿಷ್ಟ್ಯ ಎಂದರೆ 13000ಪಿಎ ವರ್ಮ್ಯಾಕ್ಸ್‌ ಸಕ್ಷನ್ ಪವರ್‌.

 ರೋಬೋ ವ್ಯಾಕ್ಯೂಮ್ ಕ್ಲೀನರ್ ಅವಶ್ಯಕತೆ ಹೆಚ್ಚುತ್ತಿರುವ ದಿನಗಳಲ್ಲಿ ಚೀನಾದ ಸ್ಮಾರ್ಟ್‌ ಹೋಮ್ ಬ್ರಾಂಡ್ ಡ್ರೀಮ್ ಟೆಕ್ನಾಲಜಿ ಹೊರತಂದಿರುವ ಎಂಟ್ರಿ ಲೆವೆಲ್ ರೋಬೋ ವ್ಯಾಕ್ಯೂಮ್ ಕ್ಲೀನರ್ ವೈಶಿಷ್ಟ್ಯ ಎಂದರೆ 13000ಪಿಎ ವರ್ಮ್ಯಾಕ್ಸ್‌ ಸಕ್ಷನ್ ಪವರ್‌. ಸಾಮಾನ್ಯವಾಗಿ ಎಂಟ್ರಿ ಲೆವೆಲ್‌ ರೋಬೋಗಳ ಸಕ್ಷನ್ ಪವರ್ 5000-6000ಪಿಎ ಇರುತ್ತದೆ. ಹೀಗಾಗಿ ಇದು ಮನೆಯನ್ನು ಡೀಪ್‌ ಕ್ಲೀನಿಂಗ್‌ ಮಾಡುತ್ತದೆ. ಸಣ್ಣಪುಟ್ಟ ಧೂಳನ್ನೂ ಹೀರಿಕೊಳ್ಳುತ್ತದೆ.

ನೆಲದಲ್ಲಿ ಬಿದ್ದ ಕಾಫಿಪುಡಿ, ನೆನೆದ ಅಕ್ಕಿಕಾಳು, ಸಾಸಿವೆ, ನಾಯಿಯ ಕೂದಲು, ಕಾಲಲ್ಲಿ ಒಳಗೆ ಬರುವ ಸೂಕ್ಷ್ಮ ಧೂಳು, ಕಾರ್ಪೆಟ್ಟಿನ ಕೂದಲೊಳಗೆ ಅಡಗಿರುವ ಧೂಳು ಇವೆಲ್ಲವನ್ನೂ ಈ ಡ್ರೀಮ್‌ ಎಫ್‌10 ತಕ್ಷಣ ಒಳಗೆಳೆದುಕೊಂಡು ಮನೆಯನ್ನು ಸ್ವಚ್ಛಗೊಳಿಸುತ್ತದೆ. ಇದರಲ್ಲಿ ಕಾರ್ಪೆಟ್‌ ಬೂಸ್ಟ್ ತಂತ್ರಜ್ಞಾನವಿದೆ. ಹೀಗಾಗಿ ಕಾರ್ಪೆಟ್ ಮೇಲೇರುತ್ತಿದ್ದಂತೆಯೇ ಸ್ವಯಂಚಾಲಿತವಾಗಿ ಇದರ ಒಳಗೆಳೆದುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಬೇರೆ ರೋಬೋಗಳಲ್ಲಿ ಈ ಕೆಲಸ ಮಾಡುವುದಕ್ಕೆ ಮತ್ತೊಂದು ಸ್ವಿಚ್ ಇರುತ್ತದೆ. ಇದು ಆ ಮಟ್ಟಿಗೆ ಬುದ್ಧಿವಂತ ರೋಬೋ.

ಇದು 2 ಇನ್ 1 ರೋಬೋ

ಇದು 2 ಇನ್ 1 ರೋಬೋ. ಗುಡಿಸುತ್ತದೆ ಮತ್ತು ನೆಲ ಒರೆಸುತ್ತದೆ. ಗುಡಿಸಿದ ನಂತರ ಒಂದು ಮಾಪಿಂಗ್ ಸಿಸ್ಟಮ್ ಅಳವಡಿಸಿದರೆ ನೆಲ ಒರೆಸುವ ಇದು ಕೇವಲ 235 ಎಂಎಲ್ ನೀರನ್ನಷ್ಟೇ ಬಳಸುತ್ತದೆ. ಸುಮಾರು 570 ಎಂಎಲ್‌ ಗಾತ್ರದ ಡಸ್ಟ್‌ ಬಾಕ್ಸ್‌ನಲ್ಲಿ ಧೂಳು ಕಸಕಡ್ಡಿ ಸಂಗ್ರಹವಾಗುತ್ತದೆ. ಅದನ್ನು ತೆಗೆದು ಚೆಲ್ಲಿದ ನಂತರ ಡಸ್ಟ್‌ ಬಾಕ್ಸನ್ನು ನೀರಲ್ಲಿ ತೊಳೆಯಬಹುದು. ಎಲ್ಲ ರೋಬೋನಂತೆ ಇದು ಕೂಡ ತನ್ನ ಕೆಲಸ ಮುಗಿಸಿದ ನಂತರ ಚಾರ್ಜಿಂಗ್ ಸ್ಟೇಷನ್ ಸೇರಿಕೊಳ್ಳುತ್ತದೆ. ನೀವಿದನ್ನು ಫೋನಿನ ಮೂಲಕವೂ ಆಪರೇಟ್ ಮಾಡಬಹುದು. ಆಫೀಸಿನಲ್ಲಿ ಕುಳಿತೇ ಮನೆಯ ಕ್ಲೀನಿಂಗ್ ಮಾಡುವಂತೆ ಆದೇಶ ನೀಡಬಹುದು.

ಜಾಗದ ಅಳತೆ ತೆಗೆದುಕೊಳ್ಳುತ್ತದೆ

ಇದು ಮೊದಲಿಗೆ ಮನೆಯನ್ನೊಮ್ಮೆ ಸುತ್ತಿ, ತಾನು ಕ್ಲೀನ್ ಮಾಡಬೇಕಾದ ಜಾಗದ ಅಳತೆ ತೆಗೆದುಕೊಳ್ಳುತ್ತದೆ. ತನ್ನ ದಾರಿ ಕಂಡುಕೊಳ್ಳುತ್ತದೆ. ತನ್ನ ದಾರಿಯಲ್ಲಿ ಬರುವ 20ಎಂಎಂ ಹೊಸಿಲನ್ನು ಇದು ದಾಟಬಲ್ಲದು. ಆದರೆ ಅಂಚಿಗೆ ಹೋಗಿ ಕೆಳಗೆ ಬೀಳದಂತೆ ತಡೆಯಲು ಕ್ಲಿಫ್ ಸೆನ್ಸರ್ ತಂತ್ರಜ್ಞಾನವಿದೆ. ಅಲೆಕ್ಸಾ, ಸಿರಿ, ಗೂಗಲ್ ಅಸಿಸ್ಟೆಂಟ್ ಮೂಲಕವೂ ನೀವಿದಕ್ಕೆ ಆರ್ಡರ್ ಕೊಡಬಹುದು. ನಿಮಗೆ ಬೇಕಾದ ಹೆಸರಿಟ್ಟು ಕರೆಯಬಹುದು.

ಅಪಾರ್ಟ್‌ಮೆಂಟು, ಪುಟ್ಟ ಮನೆ, ನೆಲದಲ್ಲಿ ಜಾಸ್ತಿ ಹರಡಿಕೊಳ್ಳದೇ ಇರುವ ಕೋಣೆಗಳಿದ್ದವರಿಗೆ ಇದು ಹೇಳಿಮಾಡಿಸಿದ ರೋಬೋ ಕ್ಲೀನರ್. ಮೊದಲ ಸಲ ರೋಬೋ ಕ್ಲೀನರ್ ಕೊಳ್ಳುವವರಿಗೆ ಸೂಕ್ತ ಆಯ್ಕೆ. ಕಪ್ಪು ಮತ್ತು ಬಿಳಿ, ಎರಡು ಬಣ್ಣಗಳಲ್ಲಿ ದೊರೆಯುವ ಇದರ ಬೆಲೆ ಆನ್‌ಲೈನ್ ಅಂಗಡಿಯಲ್ಲಿ ₹18, 998.

PREV
Read more Articles on

Recommended Stories

ಸಂಚಾರ ದಟ್ಟಣೆ ನಿವಾರಣೆಗೆ ₹25 ಕೋಟಿ ವೆಚ್ಚದಲ್ಲಿ ‘ಮೊಬೈಲಿಟಿ ಡಿಜಿಟಲ್ ಟ್ವೀನ್‌’ ಯೋಜನೆ
ಕಿದ್ವಾಯಿ ಆಸ್ಪತ್ರೆ ರೋಗಿಗಳಿಗೆ ಔಷಧಿ ಪೂರೈಸಲು ಲೋಕಾಯುಕ್ತ ಬಿ.ಎಸ್‌.ಪಾಟೀಲ್‌ ಸೂಚನೆ