ಫೆಬ್ರವರಿ 18 ರಿಂದ 24ರವರೆಗಿನ ವಾರ ಭವಿಷ್ಯ ಇಲ್ಲಿದೆ ನೋಡಿ.
(18-02-14 ರಿಂದ 24-02-24)
ಮೇಷ ರಾಶಿ: ಕೆಲಸಕಾರ್ಯಗಳಲ್ಲಿ ಜಯ ಸಿಗಲಿದೆ. ವಾರದ ಮಧ್ಯಭಾಗದಲ್ಲಿ ಕೊಂಚ ಅಪನಿಂದೆ ಎದುರಿಸಬೇಕಾದೀತು, ಜಾಗ್ರತೆಯಿಂದ ಇರಿ. ಕೆಲಸ ಕಾರ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸಿ. ಅಪಾರ ಧನಲಾಭ ನಿಮ್ಮನ್ನು ಭವಿಷ್ಯದ ಬಗ್ಗೆ ನಿರಾಳವಾಗಿಸುತ್ತದೆ.
ಕೇಂದ್ರ ತ್ರಿಕೋಣಾಧಿಪತಿ ಯೋಗದಿಂದ ಧನಲಾಭದ ಜೊತೆಗೆ ಈ ವಾರ ನಿಮಗೆ ಯಶಸ್ಸು ಸಹ ಸಿಗಲಿದೆ. ಅಡೆತಡೆಗಳನ್ನು ದಾಟಿ ಮುಂದಕ್ಕೆ ಸಾಗುವ ಸಾಹಸ ಮನೋವೃತ್ತಿ ಬೆಳೆಯುತ್ತದೆ.
ಇದರ ಜೊತೆಗೆ ಗ್ರಹಗತಿಗಳು ನಿಮಗೆ ಪೂರಕವಾಗಿರುವ ಕಾರಣ ವೃತ್ತಿಯಲ್ಲಿ ಏಳಿಗೆ ಸಿಗುತ್ತದೆ. ಯಶಸ್ಸು ಸಿಕ್ಕಾಕ್ಷಣ ಅಹಂ ಅನ್ನು ತಂದುಕೊಳ್ಳಬೇಡಿ. ಇದು ನಿಮ್ಮನ್ನು ಕ್ರಮೇಣ ಅಧಃಪತನಕ್ಕೆ ತಳ್ಳಬಹುದು.
ವೃಷಭ ರಾಶಿ: ಸಂಬಂಧ ಮತ್ತು ನಿಮ್ಮ ಸಂವಹನ ಮಾರ್ಗಗಳ ಬಗ್ಗೆ ಕೊಂಚ ಯೋಚಿಸಿ. ಸದಾ ಭವಿಷ್ಯದ ಬಗ್ಗೆ, ವೃತ್ತಿಯ ಬಗ್ಗೆ ಚಿಂತಿಸುವ ಜೊತೆಗೆ ನಿಮ್ಮೊಂದಿಗೆ ನೀವು ಸ್ವಲ್ಪ ಗುಣಮಟ್ಟದ ಸಮಯವನ್ನು ಕಳೆಯಿರಿ.
ಪ್ರೇಮ ಪ್ರಣಯದ ವಿಚಾರದಲ್ಲಿ ಮನಸ್ಸಿಗೆ ಹಿತದ ಅನುಭವ ಉಂಟಾಗುತ್ತದೆ. ಮನಸ್ಸಿಗೆ ಖುಷಿಯಾಗುವ ಅನೇಕ ಸಂಗತಿಗಳು ನಿಮ್ಮ ಬದುಕಿನಲ್ಲಿ ನಡೆಯುತ್ತದೆ. ಗೃಹಗತಿಗಳ ಬಲದಿಂದ ನಿಮಗೆ ವೃತ್ತಿಯಲ್ಲಿ ಯಶಸ್ಸು, ಹಿರಿಯರಿಂದ ಪ್ರಶಂಸೆ ವ್ಯಕ್ತವಾಗಬಹುದು.
ರಾಹುವಿನ ದಯದಿಂದ ನಿಮಗ ಧನಲಾಭದ ಸಿಗುತ್ತದೆ, ಮಾತ್ರವಲ್ಲದೇ ಎದುರಾಗುವ ಅಡೆತಡೆಗಳನ್ನು ನಿವಾರಿಸಿಕೊಂಡು ಮುಂದೆ ಸಾಗುವ ಸಾಹಸ ಪ್ರವೃತ್ತಿ ನಿಮ್ಮದಾಗುವುದು.
ಮಿಥುನ ರಾಶಿ: ನಿಮ್ಮ ಕೆಲಸ ಮತ್ತು ವೈಯಕ್ತಿಕ ಜೀವನ ಎರಡರಲ್ಲೂ ಈ ವಾರ ಕೊಂಚ ಏರಿಳಿತ ಉಂಟಾಗಬಹುದು. ಕೆಲಸ ಮತ್ತು ಜವಾಬ್ದಾರಿಗಳ ಮೇಲೆ ನಿಮ್ಮ ಗಮನವನ್ನು ಇರಿಸಿ. ಉಳಿದಂತೆ ಈ ವಾರ ಅತ್ಯುತ್ತಮವಾಗಿರುತ್ತದೆ.
ನಿಮ್ಮ ಸಂಗಾತಿಗೆ ಆದಷ್ಟು ಸಮಯ ನೀಡಲು ಪ್ರಯತ್ನಿಸಬೇಕು.ತಾಯಿಯ ಅನಾರೋಗ್ಯ ಕಳೆದು ಆರೋಗ್ಯ ಸುಧಾರಿಸುತ್ತದೆ. ಸೂರ್ಯ ಮನೋಬಲವನ್ನು ನೀಡುತ್ತಾನೆ.
ಈ ಅವಧಿಯಲ್ಲಿ ಏಕ್‌ದಂಬಾತಂಕ ಹೆಚ್ಚಿಸುವ ದೊಡ್ಡ ಸಮಸ್ಯೆ ಎದುರಾಗಬಹುದು. ಆದರೆ ಗ್ರಹಗತಿಗಳು ಪೂರಕವಾಗಿರುವ ಕಾರಣ ಆಪತ್ತಿನಿಂದ ಪಾರಾಗುವಿರಿ. ನಾಲ್ಕನೇ ಮನೆಯ ಅಧಿಪತಿ ಭಾಗ್ಯ ಸ್ಥಾನದಲ್ಲಿ ಇರುವುದು ನಿಮ್ಮ ಭಾಗ್ಯವನ್ನು ಹೆಚ್ಚಿಸುತ್ತದೆ.
ಕಟಕ ರಾಶಿ: ಅಷ್ಟಮ ಶನಿಯಿಂದ ಕೆಲಸ ಕಾರ್ಯಗಳು ನಿಧಾನ ಗತಿಯಲ್ಲಿ ನಡೆಯುತ್ತವೆ. ಚಂದ್ರನ ಸಂಚಾರ ನಿಮಗೆ ಲಾಭ ತಂದುಕೊಡುತ್ತದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಬಗ್ಗೆ ಸಕಾರಾತ್ಮಕ ಅನಿಸಿಕೆ ಮೂಡಬಹುದು. ಆದರೆ ಅಜ್ಞಾನದಿಂದ ನಷ್ಟವಾಗದಂತೆ ಎಚ್ಚರವಹಿಸಿ.
ಹಿಂದಿನ ಕೆಲವು ಆರ್ಥಿಕ ಸಮಸ್ಯೆಗಳು ಈ ವಾರ ಮತ್ತೆ ಕಾಣಿಸಿಕೊಳ್ಳಬಹುದು. ಈಗ ವಿವಾಹಕ್ಕೆ ಪ್ರಶಸ್ತ ಕಾಲ ಅಲ್ಲ. ಮೂರನೇ ಮನೆಯಲ್ಲಿ ಕೇತು ಮನೋಬಲ ದೈಹಿಕ ಬಲ ಹೆಚ್ವು ಮಾಡುತ್ತಾನೆ.
ಈಗ ಕೊಂಚ ಗಂಭೀರ ಸಮಯ. ಯಾವುದೇ ಮುಖ್ಯ ನಿರ್ಧಾರ ತೆಗೆದುಕೊಳ್ಳುವ ಮುನ್ನ ನಾಲ್ಕು ಬಾರಿ ಯೋಚಿಸಿ. ಸದ್ಯಕ್ಕೆ ಪ್ರಯಾಣ ಯೋಜಿಸಿದ್ದರೆ ಮುಂದೂಡುವುದು ಉತ್ತಮ.
ಸಿಂಹರಾಶಿ: ಕೆಲಸದ ಒತ್ತಡ ಕೆಲವೊಮ್ಮೆ ಹೈರಾಣು ಮಾಡಬಹುದು. ಧ್ಯಾನ ಮಾಡುವ ಮೂಲಕ ಮತ್ತು ಪೋಷಕರೊಂದಿಗೆ ಮಾತನಾಡುವ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಕಂಪನಿಯಲ್ಲಿ ಇತ್ತೀಚಿನ ಹೂಡಿಕೆಯಿಂದ ಗಮನಾರ್ಹ ಆರ್ಥಿಕ ಬೆಳವಣಿಗೆ ಇರುತ್ತದೆ.
ದೈವಕಾರ್ಯ ಧರ್ಮಕಾರ್ಯ ಮಾಡುವಿರಿ. ಮನೆಯಲ್ಲಿ ದೇವರ ಪೂಜೆ, ಆರಾಧನೆಗಳನ್ನು ಯೋಜಿಸಿದರೆ ಉತ್ತಮ. ಗುರುಬಲ ಇರುವುದರಿಂದ ಯಾವುದಕ್ಕೂ ಭಯವಿಲ್ಲ.
ಆದರೂ ಆರೋಗ್ಯದ ಕಡೆ ಗಮನ ಇರಲಿ. ಕೌಟುಂಬಿಕವಾಗಿ ಕೊಂಚ ಕಿರಿಕಿರಿ ಇದೆ. ಆದರೆ ಹಣದ ವಿಚಾರಕ್ಕೆ ಚಿಂತೆ ಮಾಡಬೇಕಾಗಿಲ್ಲ. ಗುರುವಿನ ದಯೆಯಿಂದ ಆರ್ಥಿಕತೆ ಚೆನ್ನಾಗಿರುತ್ತದೆ.
ಕನ್ಯಾರಾಶಿ: ವೃತ್ತಿಪರ ಜೀವನದಲ್ಲಿ ಅದೃಷ್ಟ ಕೈ ಹಿಡಿಯಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಇದು ನಿಮ್ಮನ್ನು ಹೆಚ್ಚು ಆರಾಮವಾಗಿ ಇರುವಂತೆ ಮಾಡುತ್ತದೆ. ವಿಶ್ರಾಂತಿಯನ್ನು ಅನುಭವಿಸಿ. ಪ್ರೀತಿ, ಪ್ರಣಯ ಭಾವ ಇರುತ್ತದೆ.
ನಿಮ್ಮ ಇಷ್ಟದ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯಲು ಪ್ರಯತ್ನಿಸಿದರೆ ಉತ್ತಮ ಫಲವಿದೆ. ಉತ್ತಮ ಧನಲಾಭದ ಸಾಧ್ಯತೆ ಇದೆ. ಅಂದುಕೊಂಡ ಕಾರ್ಯಗಳಲ್ಲಿ ಸಫಲತೆ ಇದೆ.
ಐಸ್ ಕ್ರೀಂ, ಹಾಲಿನ ಉತ್ಪನ್ನಗಳ ವ್ಯಾಪಾರಿಗಳಿಗೆ ಲಾಭ ಇದೆ. ಸೂರ್ಯನ ದಯೆಯಿಂದ ಸರ್ಕಾರಿ ಕೆಲಸಗಳು ಸುಸೂತ್ರವಾಗಿ ನಡೆಯುತ್ತವೆ. ಆದರೆ ಸಿಕ್ಕ ಸಿಕ್ಕ ಆಹಾರ ಸೇವನೆ ಮಾಡಿ ನಿಮ್ಮ ಆರೋಗ್ಯ ಕೆಡಿಸಿಕೊಳ್ಳಬೇಡಿ.
ತುಲಾರಾಶಿ: ಪತಿ ಪತ್ನಿಯರಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಇರಬಹುದು. ವಾರದ ದ್ವಿತೀಯಾರ್ಧವು ಲವಲವಿಕೆಯ ಮತ್ತು ಶಕ್ತಿಯುತವಾಗಿರಬಹುದು. ಈ ವಾರ ಶೈಕ್ಷಣಿಕ ಪ್ರಗತಿಯು ಹೆಚ್ಚಾಗಬಹುದು.
ಉಳಿದಂತೆ ಈ ವಾರ ನಿಮ್ಮ ಸಮಯ ಚೆನ್ನಾಗಿದೆ. ವಾರದ ಮಧ್ಯಭಾಗದಲ್ಲಿ ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು, ಜಯ ನಿಮ್ಮದು. ಅವಿವಾಹಿತರಿಗೆ ವಿವಾಹಯೋಗ ಇದೆ.
ವಿದೇಶ ಪ್ರಯಾಣ ಯೋಗ ಇದೆ. ವಾಹನದಿಂದ ಭೂಮಿಯಿಂದ ಲಾಭ ಇದೆ. ವ್ಯವಸಾಯಗಾರರಿಗೆ ಒಳ್ಳೆಯ ಲಾಭ ಇದೆ. ಬೆಳೆಗಳಿಗೆ ನ್ಯಾಯವಾದ ಬೆಲೆ ಸಿಗುತ್ತದೆ. ಕೃಷಿ ಸಂಬಂಧಿ ಉತ್ಪನ್ನಗಳ ವ್ಯಾಪಾರಿಗಳಿಗೆ ಉತ್ತಮ ಲಾಭವಿದೆ.
ವೃಶ್ಚಿಕ ರಾಶಿ: ನಿಮ್ಮ ಯೋಚನೆಗಳು ಎಂದಿನಂತೆ ಈ ವಾರವೂ ನಿಮ್ಮನ್ನು ಕೊಂಚ ಬಳಲಿಸಬಹುದು. ಮನಸ್ಸಿಗೆ ವಿನಾಕಾರಷ ಕಳವಳ, ಭಾವೋದ್ವೇಗ ಇರುತ್ತದೆ. ನಿಮ್ಮ ಆಪ್ತರಿಂದಲೇ ಮನಸ್ಸಿಗೆ ದುಃಖ ಬರುವ ಸಂಭವ ಇದೆ.
ನಾಲ್ಕನೇ ಮನೆಯಲ್ಲಿ ಶನಿ ಸೂರ್ಯ ಇರುವುದು ವಾಹನದಿಂದ ನಷ್ಡ. ಯೋಚಿಸಿ ಮುಂದಡಿ ಇಡುವುದು ಉತ್ತಮ. ಜ್ಞಾನ ದಾಹ ನಿಮ್ಮನ್ನು ಸಕಾರಾತ್ಮಕತೆಯತ್ತ ಕರೆದೊಯ್ಯಲಿದೆ. ಮನೆಯ ವಿಚಾರದಲ್ಲಿ ಕೊಂಚ ಘರ್ಷಣೆಗಳು ಕಂಡುಬರಬಹುದು.
ಸಂಗಾತಿ ಹಣದ ಬಗ್ಗೆ ವಾದ ಮಾಡಬಹುದು. ಗಾಯನ ಕ್ಷೇತ್ರದಲ್ಲಿರುವವರಿಗೆ ಈ ವಾರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ. ತಲೆನೋವು ಕಾಡಬಹುದು.
ಧನಸ್ಸುರಾಶಿ: ಯಾವುದೇ ವ್ಯಾಪಾರ-ಸಂಬಂಧಿತ ಡೀಲ್‌ಗಳನ್ನು ಪೂರ್ಣಗೊಳಿಸುವಾಗ ತಪ್ಪುಗಳನ್ನು ಮಾಡದಂತೆ ತಾಳ್ಮೆಯಿಂದಿರಿ. ವ್ಯಾಪಾರ ಉದ್ದೇಶಗಳಿಗಾಗಿ ವಿದೇಶ ಪ್ರವಾಸ ಇರಬಹುದು. ನಿಮ್ಮ ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯ ಉಂಟಾಗಬಹುದು.
ಗ್ರಹಗತಿಗಳು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಕಗ್ಗಂಟಾಗಿರುವ ಸಮಸ್ಯೆಗಳು ಬೇಗ ಪರಿಹಾರವಾಗುತ್ತವೆ. ಎರಡನೇ ಮನೆಯಲ್ಲಿ ಶುಕ್ರ ಕುಜ ಗ್ರಹಗಳು ನಿಮ್ಮ ಪರವಾಗಿವೆ.
ಹಣದ ಹರಿವು ಉತ್ತಮವಾಗಿದೆ. ಭೂಮಿಯಿಂದ ವಾಹನದಿಂದ ಲಾಭ ಇದೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಮಾಡುವುದು ಅತ್ಯಗತ್ಯ. ವಿದ್ಯಾರ್ಥಿಗಳಿಗೆ ಯಶಸ್ಸು.
ಮಕರ ರಾಶಿ:ಪ್ರಣಯ ಜೀವನವು ಬದುಕಿನಲ್ಲಿ ಹೊಸ ಭರವಸೆ ಮೂಡಿಸಬಹುದು. ಸಂಗಾತಿ ನಿಮಗೆ ಇನ್ನಷ್ಟು ಹತ್ತಿರವಾಗಬಹುದು. ಹೊಸ ಆರ್ಥಿಕ ಅವಕಾಶಗಳು ಇರಬಹುದು. ನಿಮ್ಮ ಸಾಮರ್ಥ್ಯಗಳನ್ನು ಸುಧಾರಿಸಲು ಇದು ಒಂದು ಅವಕಾಶ.
ಆದರೆ ನಿಮ್ಮ ಆಲೋಚನೆ ನಿರ್ಧಾರಗಳೇ ನಿಮ್ಮನ್ನು ಗೊಂದಲದಲ್ಲಿ ಕೆಡವುತ್ತದೆ. ವಾರದ ಮಧ್ಯ ಭಾಗದಲ್ಲಿ ಶನಿ ಸೂರ್ಯರು ಕೌಟುಂಬಿಕ ಅಶಾಂತಿ ಉಂಟು ಮಾಡು ಮಾಡಬಹುದು.
ಧನಲಾಭ ತಕ್ಕಮಟ್ಟಿಗೆ ಇದೆ. ರಾಹು ನಿಮಗೆ ಧೈರ್ಯ ಸಾಹಸಗಳನ್ನುಕೊಟ್ಟು ಸಮಸ್ಯೆಗಳಿಂದ ಪಾರಾಗುವಂತೆ ಮಾಡುತ್ತಾನೆ. ಕೆಲವೇ ದಿನಗಳಲ್ಲಿ ಬದುಕು ಬದಲಾಗುತ್ತದೆ.
ಕುಂಭರಾಶಿ: ಉದ್ವಿಗ್ನ ಸಂದರ್ಭಗಳಲ್ಲಿ, ನಿಮ್ಮ ಉದ್ವೇಗವನ್ನು ನಿಯಂತ್ರಿಸಿ ಮತ್ತು ಸಂಯಮವನ್ನು ಕಾಪಾಡಿಕೊಳ್ಳಿ. ನೀವು ಕೆಲಸದಲ್ಲಿ ಬದಲಾವಣೆಗಳನ್ನು ಗಮನಿಸಬಹುದು. ಇದು ಅನುಕೂಲಕರ ಪರಿಣಾಮಗಳನ್ನು ಉಂಟುಮಾಡಬಹುದು.
ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳೊಂದಿಗೆ ನಿಮ್ಮ ಸಂವಹನ ಸ್ನೇಹಪರವಾಗಿರಬೇಕು. ಈ ವಾರ ಖರ್ಚುಗಳು ಹೆಚ್ಚಾಗಬಹುದು. ಪವರ್ ಗೆ ಸಂಬಂಧಪಟ್ಟ ಹಾಗೂ ಭೂಮಿಗೆ ಸಂಬಂಧಪಟ್ಟ ವಿಷಯದಲ್ಲಿ ಖರ್ಚುಗಳು ಇವೆ.
ಅಲಂಕಾರ ವಸ್ತುಗಳು ಚಿನ್ನ ಬೆಳ್ಳಿ ಗೃಹೋಪಯೋಗಿ ಉಪಕರಣಗಳಿಗಾಗಿ ಖರ್ಚು ಮಾಡುತ್ತೀರಿ. ಮಾತಿನ ಬಗ್ಗೆ ಹಿಡಿತವಿರಲಿ. ಉತ್ತಮವಾದದ್ದನ್ನೇ ಚಿಂತಿಸಿ.
ಮೀನರಾಶಿ: ವ್ಯಾಪಾರದಲ್ಲಿ ಅಪಾಯವನ್ನು ಎದುರಿಸಬೇಕಾದ ಸಂದರ್ಭ ಬರಬಹುದು. ಆದರೆ ಉತ್ತಮ ನಿರ್ಧಾರಗಳಿಂದ ಅಪಾಯದಿಂದ ಪಾರಾಗುವಿರಿ. ವಾಣಿಜ್ಯ ಮತ್ತು ಪಾಲುದಾರಿಕೆ ವ್ಯವಹಾರಗಳಲ್ಲಿ ಹೊಸ ಅವಕಾಶಗಳನ್ನು ಸಿಗಬಹುದು.
ಏಕಕಾಲಕ್ಕೆ ಹೆಚ್ಚೆಚ್ಚು ಸಮಸ್ಯೆ ಕಾಣಿಸಿಕೊಂಡು ಚಿಂತೆಗೀಡು ಮಾಡಬಹುದು. ವಿವಿಧ ಗ್ರಹಗಳು ನಿಮ್ಮನ್ನು ಯಶಸ್ಸಿನಿಂದ ಹಿಂದೆ ಸರಿಯುವಂತೆ ಮಾಡಬಹುದು. ಆದರೆ ಈಗ ಗುರುಬಲ ಇದೆ.
ಹೀಗಾಗಿ ಸಮಸ್ಯೆಗಳು ಹೆಚ್ಚಿದ್ದರೂ ಪರಿಹಾರವೂ ಆವಾಗಾವ ಸಿಗುತ್ತಾ ನೀವು ಹೆಚ್ಚು ಒದ್ದಾಟ ಪಡದಂತೆ ಮಾಡುತ್ತವೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ವಿದ್ಯಾರ್ಥಿಗಳಿಗೆ ಶುಭ ಫಲ ಇದೆ. ಕೆಲಸದಲ್ಲಿ ಬಡ್ತಿ ಯಶಸ್ಸು ಇದೆ.