ಆಲತ್ತೂರು ಬಳಿ ಕಾಡಾನೆ ದಾಳಿಗೆ ಫಸಲು ನಾಶ

KannadaprabhaNewsNetwork |  
Published : Oct 23, 2023, 12:15 AM IST
ಆಲತ್ತೂರು ಬಳಿ ಕಾಡಾನೆ ದಾಳಿಗೆ ಫಸಲು ನಾಶ | Kannada Prabha

ಸಾರಾಂಶ

ಆಲತ್ತೂರು ಗ್ರಾಮದ ಮಹದೇವಸ್ವಾಮಿಗೆ ಸೇರಿದ ಜಮೀನಿಗೆ ನುಗ್ಗಿ ಅವರು ಬೆಳೆದಿದ್ದ ಟಮೇಟೋ,ಬಾಳೆ ಗಿಡಗಳು ಹಾಗೂ ತೆಂಗಿನ ಸಸಿಗಳನ್ನು ತುಳಿದು ಹಾಕಿವೆ. ಕಾಡಾನೆಗಳ ದಾಳಿ ಮಾಡಿದ ಸ್ಥಳಕ್ಕೆ ಬಂದ ಓಂಕಾರ ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಬರ ಒಂದೆಡೆ ಮತ್ತೊಂದೆಡೆ ವಿದ್ಯುತ್‌ ಸಮಸ್ಯೆ ನಡುವೆ ರೈತರು ಕಷ್ಟ ಪಟ್ಟು ಬೆಳೆದ ಫಸಲನ್ನು ಕಾಡಾನೆಗಳು ದಾಳಿ ಮಾಡಿ ನಾಶ ಮಾಡಿವೆ ಎಂದು ರೈತ ಮಹದೇವಸ್ವಾಮಿ ಅಳಲು ತೋಡಿಕೊಂಡಿದ್ದಾರೆ.

ಗುಂಡ್ಲುಪೇಟೆ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಂಚಿನ ಆಲತ್ತೂರು ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ರೈತನೋರ್ವನ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ನಾಶವಾಗಿವೆ. ಆಲತ್ತೂರು ಗ್ರಾಮದ ಮಹದೇವಸ್ವಾಮಿಗೆ ಸೇರಿದ ಜಮೀನಿಗೆ ನುಗ್ಗಿ ಅವರು ಬೆಳೆದಿದ್ದ ಟಮೇಟೋ,ಬಾಳೆ ಗಿಡಗಳು ಹಾಗೂ ತೆಂಗಿನ ಸಸಿಗಳನ್ನು ತುಳಿದು ಹಾಕಿವೆ. ಕಾಡಾನೆಗಳ ದಾಳಿ ಮಾಡಿದ ಸ್ಥಳಕ್ಕೆ ಬಂದ ಓಂಕಾರ ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಬರ ಒಂದೆಡೆ ಮತ್ತೊಂದೆಡೆ ವಿದ್ಯುತ್‌ ಸಮಸ್ಯೆ ನಡುವೆ ರೈತರು ಕಷ್ಟ ಪಟ್ಟು ಬೆಳೆದ ಫಸಲನ್ನು ಕಾಡಾನೆಗಳು ದಾಳಿ ಮಾಡಿ ನಾಶ ಮಾಡಿವೆ ಎಂದು ರೈತ ಮಹದೇವಸ್ವಾಮಿ ಅಳಲು ತೋಡಿಕೊಂಡಿದ್ದಾರೆ. ಬಂಡೀಪುರ ಅರಣ್ಯ ಇಲಾಖೆ ಕಾಡಾನೆಗಳ ಹಾವಳಿ ತಡೆಯಲು ಸಂಪೂರ್ಣ ವಿಫಲವಾಗಿದೆ.ಅಲ್ಲದೆ ಕಾಡಾನೆಗಳ ಹಾವಳಿ ತಡೆ ಸಂಬಂಧ ಆರ್‌ಎಫ್‌ಒ ವಿಚಾರಿಸಿದರೆ ಹಾರಿಕೆಯ ಉತ್ತರ ಸಿಗುತ್ತಿದೆ. ಇನ್ನೂ ಓಂಕಾರ ವಲಯದಲ್ಲಿ ಕಾಡಾನೆಗಳ ಕಾಟ ಮಿತಿ ಮೀರಿದೆ. ಆದರೂ ಬಂಡೀಪುರ ಅರಣ್ಯ ಇಲಾಖೆ ಕಾಡಾನೆ ಉಪಟಳ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ರೈತರು ದೂರಿದ್ದಾರೆ. - ೨೨ಜಿಪಿಟಿ೩ ಗುಂಡ್ಲುಪೇಟೆ ತಾಲೂಕಿನ ಆಲತ್ತೂರು ರೈತ ಮಹದೇವಸ್ವಾಮಿ ಸೇರಿದ ಜಮೀನಿನಲ್ಲಿ ಬೆಳೆದ ಟಮೇಟೋ ಹಾಗೂ ಬಾಳೆ ಬೆಳೆಯನ್ನು ಕಾಡಾನೆ ತುಳಿದು ಹಾಕಿವೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಹಳದಿ ಮಾರ್ಗ ಮೆಟ್ರೋಗೆ ಆ.10ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ