ಮಹಾತ್ಮ ಗಾಂಧೀಜಿ ಭಾರತ ಸೇರಿದಂತೆ ಇಡೀ ಪ್ರಪಂಚಕ್ಕೆ ಆದರ್ಶ ವ್ಯಕ್ತಿಯಾಗಿದ್ದರು ಎಂದು ವಿದ್ಯಾ ಭಾರತೀಯ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಉಮೇಶ್ ಜೀ ಹೇಳಿದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ ಮಹಾತ್ಮ ಗಾಂಧೀಜಿ ಭಾರತ ಸೇರಿದಂತೆ ಇಡೀ ಪ್ರಪಂಚಕ್ಕೆ ಆದರ್ಶ ವ್ಯಕ್ತಿಯಾಗಿದ್ದರು ಎಂದು ವಿದ್ಯಾ ಭಾರತೀಯ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಉಮೇಶ್ ಜೀ ಹೇಳಿದರು. ಪಟ್ಟಣದ ಹೊರವಲಯದ ವಿದ್ಯಾ ಭಾರತಿ ಶಾಲೆಯ ಆವರಣದಲ್ಲಿ ಮಹಾತ್ಮಗಾಂಧಿ ಹಾಗೂ ಲಾಲ್ ಬಹುದೂಶಾಸ್ತ್ರಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಾತ್ಮಾ ಗಾಂಧೀಜಿ ಇಡೀ ಪ್ರಪಂಚಕ್ಕೆ ಆದರ್ಶ ಪ್ರಾಯವಾಗಿ ಸತ್ಯ, ಅಹಿಂಸೆ, ನ್ಯಾಯ, ಶುದ್ಧ ಚಾರಿತ್ಯ, ಶಾಂತಿಯ ಮೂಲಕ ಜೀವನವನ್ನು ಹೇಗೆ ನಡೆಸಬೇಕು ಎಂದು ನಮಗೆಲ್ಲ ಉದಾಹರಣೆಯಾಗಿದ್ದಾರೆ.
ದೇಶದ ಪ್ರಧಾನಿಯಾಗಿದ್ದ ಲಾಲ್ ಬಹುದೂರ್ ಶಾಸ್ತ್ರೀ ಸ್ವಾಭಿಮಾನದ ಪ್ರತೀಕವಾಗಿರುವ ಸರಳ ಜೀವನ ನಡೆಸಿದ ಹೊರಗಿನ ಶತ್ರುಗಳ ಸೊಕ್ಕಿಗೆ ತಕ್ಕ ಉತ್ತರ ನೀಡಲು ಇಡೀ ದೇಶವನ್ನು ಒಂದು ಮಾಡಿ ಭಾರತವೆಂದರೆ ಒಂದೇ ಎಂಬುದಾಗಿ ತೋರಿಸದ ಶಾಸ್ತ್ರೀಜಿ ಇವರೆಲ್ಲ ನಮಗೆ ಮಾದರಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಂಗಣ್ಣ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಸ್ಥರಾದ ಸುಧೀಂದ್ರ, ಲಕ್ಷ್ಮೀಶ್ ಸೇರಿದಂತೆ ಇತರ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಸುತ್ತಮುತ್ತಲಿನ ಸ್ಥಳಗಳ ಸ್ವಚ್ಛತೆ ಮಾಡುವುದು ಮತ್ತು ಗಿಡ ನೆಡುವ ಕಾರ್ಯಕ್ರಮ ಮಾಡುವುದರ ಮೂಲಕ ಗಾಂಧಿ ಜಯಂತಿಯನ್ನು ನೆರವೇರಿಸಲಾಯಿತು.