ಜೆನ್‌ ಜೀಗಳ ಫೈರ್ ಹಣಕಾಸು ಚಳವಳಿ

Published : Feb 24, 2026, 12:38 PM IST
Gen Z

ಸಾರಾಂಶ

ಜೆನ್‌ ಜೀಗಳಲ್ಲಿ ಈಗ ಫೈರ್ (Financial Independence, Retire Early) ಎಂಬ ಹೊಸ ಟ್ರೆಂಡ್ ಜನಪ್ರಿಯವಾಗುತ್ತಿದೆ. 50 ಅಥವಾ ಅದಕ್ಕಿಂತ ಮುಂಚೆಯೇ ನಿವೃತ್ತಿ ಪಡೆಯುವುದು ಇವರ ಗುರಿ. ಈ ಕುರಿತ ಲೇಖನ.

ಆರ್ಥಿಕ ಅಸ್ಥಿರತೆಯ ನಡುವೆಯೇ ಬೆಳೆದಿರುವ ಜೆನ್ ಜೀ ಹುಡುಗರು ರಿಸ್ಕ್ ಅನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಉಳಿತಾಯ ಮತ್ತು ಹೂಡಿಕೆಯಲ್ಲಿ ಹೊಸ ಹಾದಿ ತುಳಿಯುತ್ತಿದ್ದಾರೆ. ಫೈರ್‌ (FIRE) ಎಂಬ ಮೂವ್‌ಮೆಂಟ್‌ ಅವರ ಸ್ವತಂತ್ರ ಮತ್ತು ಆರಾಮ ಬಯಸುವ ಗುಣಕ್ಕೆ ಪೂರಕವಾಗಿ ಮೂಡಿಬಂದಿದೆ.

*

ಜೆನ್-ಜಿ ಎದುರಿಸುತ್ತಿರುವ ಆರ್ಥಿಕ ಸವಾಲುಗಳು

- ಹೆಚ್ಚುತ್ತಿರುವ ಸಾಲ ಮತ್ತು ಶಿಕ್ಷಣ ಸಾಲ

- ಏರುತ್ತಿರುವ ಮನೆ ಬಾಡಿಗೆ ಮತ್ತು ಜೀವನ ವೆಚ್ಚ.

- ಹೆಚ್ಚುತ್ತಿರುವ ರಿಯಲ್‌ ಎಸ್ಟೇಟ್‌, ಬಡ್ಡಿದರಗಳಿಂದ ಹೊಸ ಮನೆ ಖರೀದಿಸಲಾಗದ ಸ್ಥಿತಿ.

*

ಹಳೇ ಜನರೇಶನ್‌ ಇವರ ಬಗ್ಗೆ ಮಾಡುವ ಕಂಪ್ಲೇಂಟ್

-ಈ ಕಾಲದ ಹುಡುಗರಿಗೆ ಹಸಿವು ಅಂದರೇನು ಅಂತ ಗೊತ್ತಿಲ್ಲ, ಹಣಕಾಸಿನ ಅರಿವು ಮೊದಲೇ ಇಲ್ಲ

-ರಿಸ್ಕ್‌ ತೆಗೆದುಕೊಂಡು ಹೂಡಿಕೆ ಮಾಡುತ್ತಾರೆ, ಇದರಿಂದ ಬೇಗ ಕೈ ಖಾಲಿ ಆಗಬಹುದು.

-ಆರ್ಥಿಕ ಶಿಸ್ತು, ಆಕ್ಟಿವ್‌ನೆಸ್‌ ಕಡಿಮೆ. ಎಲ್ಲದರಲ್ಲೂ ಉಡಾಫೆ ಧೋರಣೆ.

*

ಸವಾಲಿಗೇ ಸವಾಲೆಸೆಯೋ ಜನಾಂಗ

- ತಮ್ಮ ಬಗ್ಗೆ ಜೆನ್ ಎಕ್ಸ್‌ ಅಥವಾ ಮಿಲೇನಿಯಲ್ಸ್‌ನವರಲ್ಲಿ ಇರುವ ಪೂರ್ವಾಗ್ರಹಗಳ ಬಗ್ಗೆ ಈ ಹುಡುಗರು ತಲೆ ಕೆಡಿಸಿಕೊಳ್ಳುವುದಿಲ್ಲ. ಬದಲಿಗೆ ಹಣಕಾಸಿನಲ್ಲಿ ಸ್ಮಾರ್ಟ್‌ ಮೂವ್‌ಗಳ ಮೂಲಕ ನಾವು ನಿಮಗಿಂತ ಜಾಣರು ಅನ್ನೋದನ್ನು ಸಾಬೀತು ಮಾಡುತ್ತ ಬರುತ್ತಿದ್ದಾರೆ.

- ಬಹಳ ಚಿಕ್ಕ ವಯಸ್ಸಿನಲ್ಲೇ (ಕೆಲವರು 10 ವರ್ಷಕ್ಕೆ) ಉಳಿತಾಯ ಖಾತೆ ತೆರೆದು ಹಣ ಉಳಿಸಲು ಆರಂಭಿಸಿರುತ್ತಾರೆ.

- ಕಾಲೇಜಿಗೆ ಹೋಗುವ ಹೊತ್ತಿಗೇ ಷೇರು ಮಾರುಕಟ್ಟೆ ಮತ್ತು ಹೂಡಿಕೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಅಪ್‌ಡೇಟ್‌ ಆಗಿರುತ್ತಾರೆ. ಉದ್ಯೋಗಕ್ಕೆ ಸೇರಿದ ಕೆಲವೇ ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಸಕ್ರಿಯವಾಗಿ ಹೂಡಿಕೆ ಮಾಡುತ್ತಿದ್ದಾರೆ.

*

ಫೈರ್‌ ಪ್ಲೇ: ಉಳಿತಾಯಕ್ಕೇ ಸಿಂಹಪಾಲು

ಫೈರ್‌ ಯೋಜನೆ ಪ್ರಕಾರ ಜೆನ್‌ ಜೀಗಳು ತಮ್ಮ ಆದಾಯದ 50% ರಿಂದ 75% ರಷ್ಟು ಭಾಗವನ್ನು ಉಳಿಸಲು ಪ್ರಯತ್ನಿಸುತ್ತಾರೆ. ಇತರರು ತಮ್ಮ ಸಂಬಳದಲ್ಲಿ ಶೇ. 10 ರಿಂದ ಶೇ.15ರಷ್ಟು ಉಳಿತಾಯ ಮಾಡಲೂ ಒದ್ದಾಡುತ್ತಾರೆ.

ಫೈರ್‌ ನಂಬರ್‌

ನಿಮ್ಮ ವಾರ್ಷಿಕ ಖರ್ಚನ್ನು 25 ರಿಂದ ಗುಣಿಸಿದರೆ ಬರುವ ಮೊತ್ತವೇ ನಿಮ್ಮ ‘ಫೈರ್ ನಂಬರ್’. ನಿವೃತ್ತಿಯ ನಂತರ ಪ್ರತೀ ವರ್ಷ ಉಳಿತಾಯದ ಶೇ.3 ರಿಂದ ಶೇ.4ರಷ್ಟು ಭಾಗವನ್ನು ಮಾತ್ರ ಖರ್ಚಿಗೆ ಬಳಸುವ ಯೋಜನೆ ಇವರದು.

ಉಳಿದವರಿಗೆ ಇದು ಸಾಧ್ಯವೇ?

ಇದು ನಿಮ್ಮ ಕಂಟ್ರೋಲಿಂಗ್‌ ಪವರ್‌ ಮೇಲೆ ಅವಲಂಬಿತವಾಗಿದೆ.

- ಅನವಶ್ಯಕ ಖರ್ಚಿಗೆ ನಿರ್ದಾಕ್ಷಿಣ್ಯ ಬ್ರೇಕ್ ಹಾಕಲೇಬೇಕು. ಸರಳವಾಗಿ ಬದುಕಲು ಆರಂಭಿಸಿ.

- ಆದಾಯದಲ್ಲಿ ಸಾಧ್ಯವಾದಷ್ಟು ಉಳಿಕೆ ಮಾಡಿ.

- ಕರೆಕ್ಟಾಗಿ ಹಣದ ಪ್ಲಾನಿಂಗ್‌ ಮಾಡಿಕೊಳ್ಳಿ. ಹೂಡಿಕೆಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಸಕ್ರಿಯರಾಗಿ.

- ಎಷ್ಟು ಬೇಗ ಹೂಡಿಕೆ ಆರಂಭಿಸುತ್ತೀರೋ, ಅಷ್ಟು ಹೆಚ್ಚು ಲಾಭ ಪಡೆಯಬಹುದು. ಕಡಿಮೆ ವೆಚ್ಚದ ಇಂಡೆಕ್ಸ್ ಫಂಡ್‌ಗಳಿಂದ ಇನ್‌ವೆಸ್ಟ್‌ಮೆಂಟ್‌ ಶುರು ಮಾಡಿ.

PREV
Read more Articles on

Recommended Stories

ಕನ್ನಡ ಮುದ್ರಣೋದ್ಯಮಕ್ಕೆ ದ್ವಿಶತಕ ಸಂಭ್ರಮ
ಸ್ಲಮ್‌ ಪ್ರಿನ್ಸೆಸ್‌ ಟು ಸೂಪರ್‌ ಮಾಡೆಲ್‌ - ಮನೆಯೇ ಇರದಿದ್ದ ಮಲೀಶಾ ಖಾರ್ವಾ ಈಗ ವರ್ಲ್ಡ್ ಫೇಮಸ್ಸು