ನವದೆಹಲಿ: ದೇಶದ ಹೆಸರನ್ನು ಇಂಡಿಯಾ ಎಂಬುದರ ಬದಲಾಗಿ ಭಾರತ ಎಂದು ಎಲ್ಲಾ ಭಾಷೆಯಲ್ಲೂ ಕರೆಯುವಂತೆ ಕೇಂದ್ರ ಸರ್ಕಾರ ಉತ್ತೇಜಿಸುತ್ತಿರುವ ನಡುವೆಯೇ ಪ್ರಖ್ಯಾತ ಸುದ್ದಿ ವೀಕ್ಷಣಾ ತಾಣ ಗೂಗಲ್ ಕೂಡ ನಮ್ಮ ದೇಶಕ್ಕೆ ಇಂಡಿಯಾ ಎಂಬುದರ ಜೊತೆಗೆ ಆಂಗ್ಲ ಭಾಷೆಯಲ್ಲೂ ಭಾರತ ಎಂಬ ಪದವನ್ನು ಉಲ್ಲೇಖಿಸುತ್ತಿದ್ದು, ಅದರ ಜೊತೆಗೆ ದೇಶದ ಅಧಿಕೃತ ಧ್ವಜವನ್ನೂ ಕೂಡ ತೋರ್ಪಡಿಸುತ್ತಿದೆ. ಈ ವಿಚಾರವಾಗಿ ಗೂಗಲ್‌ನಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲವಾದರೂ ಬಳಕೆದಾರರು ಹೆಸರು ಬದಲಾಗಿರುವುದನ್ನು ಜಾಲತಾಣದಲ್ಲಿ ಗಮನಿಸಬಹುದಾಗಿದೆ.