ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕಿದರೆ ಭಾರೀ ದಂಡ

KannadaprabhaNewsNetwork | Published : Nov 4, 2023 12:30 AM

ಸಾರಾಂಶ

ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಮಾಲಿನ್ಯ ಎಲ್ಲೆ ಮೀರುತ್ತಿದ್ದು, ಇದನ್ನು ಹತ್ತಿಕ್ಕುವ ಕ್ರಮವಾಗಿ ಹರ್ಯಾಣ ಸರ್ಕಾರ ಕೃಷಿ ತ್ಯಾಜ್ಯ ಸುಡುವುದಕ್ಕೆ ಭಾರಿ ದಂಡ ವಿಧಿಸುತ್ತಿದೆ.
ಮಾಲಿನ್ಯ ನಿಯಂತ್ರಣಕ್ಕೆ ಹರ್ಯಾಣ ಕ್ರಮ ಚಂಡೀಗಢ: ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಮಾಲಿನ್ಯ ಎಲ್ಲೆ ಮೀರುತ್ತಿದ್ದು, ಇದನ್ನು ಹತ್ತಿಕ್ಕುವ ಕ್ರಮವಾಗಿ ಹರ್ಯಾಣ ಸರ್ಕಾರ ಕೃಷಿ ತ್ಯಾಜ್ಯ ಸುಡುವುದಕ್ಕೆ ಭಾರಿ ದಂಡ ವಿಧಿಸುತ್ತಿದೆ. ಈವರೆಗೂ 939 ಮಂದಿಗೆ ದಂಡ ವಿಧಿಸಿದೆ. ಪ್ರತಿ ವ್ಯಕ್ತಿಗೆ 2675 ರು. ದಂಡ ವಿಧಿಸಿ ಈವರೆಗೂ 25.12 ಲಕ್ಷ ರು. ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article