(5-5-24 ರಿಂದ 11-5-24)ಮೇಷರಾಶಿ:
ವೃಷಭರಾಶಿ:
ವೃತ್ತಿ ಹಾಗೂ ಕೌಟುಂಬಿಕ ಬದುಕಿನ ಒತ್ತಡ ನಿಮ್ಮನ್ನು ಹೈರಾಣಾಗಿಸಬಹುದು. ಕಷ್ಟಪಟ್ಟರೆ ನಿಮಗೆ ಅದನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ವಾರದ ಆರಂಭದಲ್ಲಿ ನಿಮ್ಮ ವೃತ್ತಿಜೀವನವನ್ನು ಸಮತೋಲನಗೊಳಿಸಲು ಮತ್ತು ಜೀವನವನ್ನು ಪ್ರೀತಿಸಲು ಪ್ರಯತ್ನಿಸುತ್ತೀರಿ. ಪ್ರೇಮಿಯೊಂದಿಗೆ ಸಮಯ ಕಳೆಯುವಿರಿ. ಹಣದ ಹರಿವು ಉತ್ತಮವಾಗಿದೆ. ಶನಿ ಹತ್ತನೇ ಮನೆಯಲ್ಲಿ ಇರುವುದು ವೃತ್ತಿಭದ್ರತೆಯನ್ನು ಕೊಡುತ್ತದೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಹಿನ್ನಡೆ ಇದೆ. ಪ್ರವಾಸ ಹೋಗುವ ಯೋಗವಿದೆ. ಆದರೆ ಡ್ರೈವಿಂಗ್‌ನಲ್ಲಿ ಜಾಗ್ರತೆ ವಹಿಸಿ.ಮಿಥುನರಾಶಿ:
ಕಟಕರಾಶಿ:
ಸಿಂಹರಾಶಿ:
ಕನ್ಯಾರಾಶಿ:
ಕೆಲಸ ಬದಲಿಸಬೇಕೆಂದರೆ ಈಗ ಸಕಾಲ. ವಿವಾಹಕ್ಕೂ ಈಗ ಒಳ್ಳೆಯ ಸಮಯ. ಹಣಕಾಸಿನ ಹರಿವು ಬಹಳ ಉತ್ತಮವಾಗಿದೆ. ಅಧಿಕ ಗೌರವ ದೊರೆಯುವ ಸಮಯ.
ಈ ವಾರ ಒತ್ತಡದಿಂದ ಕೂಡಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಇದು ಭವಿಷ್ಯದಲ್ಲಿ ನಿಮಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆರಂಭದಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಇರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮಾಡಿ. ಸಣ್ಣ ಕಾರಣವೇ ನೆಪವಾಗಿ ದೊಡ್ಡ ಸಮಸ್ಯೆ ಬರಬಹುದು. ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ. ಹಣದ ಹರಿವು ಉತ್ತಮವಾಗಿದೆ. ಬಂಧುಗಳಲ್ಲಿ ಮನಸ್ತಾಪ, ವೃಥಾ ಮನಸ್ಸಿಗೆ ಕಿರಿಕಿರಿ ಇರುತ್ತದೆ.
ಬದುಕಿನಲ್ಲಿ ಒಳ್ಳೆಯ ಸಮಯವಿದು. ಒಳ್ಳೆಯ ಸಂಗತಿಗಳೇ ನಡೆಯುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಅನಿರೀಕ್ಷಿತವಾಗಿ ನೌಕರಿಗೆ ಆಹ್ವಾನ ಸಿಗುತ್ತದೆ. ಮನೆಯಲ್ಲಿ ಸಂತೋಷ ಸಂಭ್ರಮ ಇರುತ್ತದೆ. ಬಂಧು ಬಳಗದೊಂದಿಗೆ ಭೇಟಿ ಸಂಭ್ರಮ ಎಲ್ಲವೂ ಇದೆ. ಯಾವುದೇ ಅಡ್ಡಿ ಆತಂಕ ಇಲ್ಲದೆ ಕೆಲಸ ಮುಂದೆ ಸಾಗುತ್ತದೆ. ಒಡವೆ ವಸ್ತ್ರ ಖರೀದಿ ಯೋಗ ಇದೆ. ಹೊಸ ವಾಹನ ಕೊಳ್ಳುವಿರಿ. ನೀವು ಹೂಡಿಕೆಯಿಂದ ಲಾಭವನ್ನು ಪಡೆಯುತ್ತೀರಿ, ಆದರೆ ಸ್ವಲ್ಪ ಯೋಚಿಸಿದ ನಂತರವೇ ಹೂಡಿಕೆ ಮಾಡಿ.
ಧನಸ್ಸುರಾಶಿ: ಧಾರ್ಮಿಕ ಸ್ಥಳಗಳಿಗೆ ಪ್ರಯಾಣಿಸುವ ಸಾಧ್ಯತೆಗಳಿವೆ. ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ ಗೌರವ ಲಭಿಸಲಿದೆ. ಪ್ರೇಮ ಸಂಬಂಧವು ಬಲವಾಗಿರುತ್ತದೆ. ಯಾರೊಂದಿಗಾದರೂ ಸಂಬಂಧದಲ್ಲಿರುವವರು ಈ ವಾರ ತಮ್ಮ ಸಂಗಾತಿಯಿಂದ ಉಡುಗೊರೆಯನ್ನು ಪಡೆಯಬಹುದು. ವೈವಾಹಿಕ ಜೀವನವು ನೆಮ್ಮದಿಯಿಂದಿರುತ್ತದೆ. ಆದರೆ ಹತ್ತಿರದವರಿಂದಲೇ ಮುಖಭಂಗ ಆಗಬಹುದು. ಜಾಗ್ರತೆಯಿಂದ ಇರಿ. ಗುರುವನ್ನು ಪ್ರಾರ್ಥಿಸಿ. ಹಣಕಾಸಿನ ಸಮಸ್ಯೆ ಕೊಂಚ ಮಟ್ಟಿಗೆ ಕಾಡಬಹುದು. ಸುಖ ಸಂತೋಷಕ್ಕೆ ರಾಹುವಿನಿಂದ ಅಡ್ಡಿ.ಮಕರರಾಶಿ:ಸಾಡೆಸಾತಿ ಶನಿ ಪ್ರಭಾವದಿಂದ ಕಂಗೆಟ್ಟಿದ್ದ ನಿಮಗೆ ಎಲ್ಲ ಸಂಕಷ್ಟಗಳೂ ಕಳೆದು ಈಗ ಜೀವನದಲ್ಲಿ ಹರ್ಷ ಸಂಭ್ರಮ ಹೆಚ್ಚುತ್ತದೆ. ಇದು ಅದೃಷ್ಟ, ಭಾಗ್ಯಗಳ ಬಾಗಿಲು ತೆರೆಯುವ ಸಮಯ. ಎಲ್ಲೆಲ್ಲೂ ಶುಭ ಸುದ್ದಿ ಕಿವಿಗೆ ಬೀಳುತ್ತದೆ. ಭದ್ರವಾದ ನೆಲೆ ಸಿಗುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ವಾರದ ಮಧ್ಯದಲ್ಲಿ, ನೀವು ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ. ಇದರಿಂದ ಯಾವುದೇ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ವೃತ್ತಿ ಜೀವನದಲ್ಲಿ ಶುಭ ಸುದ್ದಿಯಿದೆ.
ಕುಂಭರಾಶಿ: ಇದ್ದಕ್ಕಿದ್ದಂತೆ ದೊಡ್ಡ ಸಮಸ್ಯೆ ಉದ್ಭವಿಸಬಹುದು. ರಹಸ್ಯ ಶತ್ರುಗಳ ಬಗ್ಗೆ ಜಾಗರೂಕರಾಗಿರಬೇಕು. ಸಣ್ಣ ವಿಷಯಗಳಿಗೆ ಪ್ರಾಮುಖ್ಯತೆ ನೀಡದಿರುವುದು ಉತ್ತಮ. ವ್ಯವಹಾರದಲ್ಲಿ ಬುದ್ಧಿವಂತಿಕೆಯಿಂದ ಹಣವನ್ನು ಹೂಡಿಕೆ ಮಾಡಿ. ಆರ್ಥಿಕ ನಷ್ಟವಾಗುವ ಸಂಭವವಿದೆ. ಪ್ರೇಮ ಸಂಬಂಧದಲ್ಲಿ ತಪ್ಪು ತಿಳುವಳಿಕೆ ಇರಬಹುದು. ಪದವಿ ಭ್ರಷ್ಟತೆ, ಮಾನಸಿಕ ಕಿರುಕುಳ ಉಂಟಾಗಬಹುದು. ಆದರೆ ಇಂಥದ್ದನ್ನೆಲ್ಲ ಈಗಾಗಲೇ ಸಾಕಷ್ಟು ಅನುಭವಿಸಿರುವ ನಿಮಗೆ ಇದೇನು ದೊಡ್ಡ ಸವಾಲು ಎಂದೆನಿಸದು. ಬದುಕಿನ ಉತ್ಸಾಹ ಕಳೆದುಕೊಳ್ಳಬೇಡಿ.ಮೀನರಾಶಿ:
ಸಂಗಾತಿಯೊಂದಿಗೆ ಉತ್ತಮ ಹೊಂದಾಣಿಕೆ ಇರುತ್ತದೆ. ನೀವು ಕೆಲಸದ ಮೇಲೆ ಗಮನ ಕೇಂದ್ರೀಕರಿಸುತ್ತೀರಿ. ಸಹೋದ್ಯೋಗಿಗಳು ನಿಮ್ಮ ನಿರ್ಧಾರಗಳನ್ನು ಬೆಂಬಲಿಸುತ್ತಾರೆ. ಆದರೆ ಅನಿರೀಕ್ಷಿತ ಸಷ್ಟ, ಸಮಸ್ಯೆಗಳು ಎದುರಾಗುತ್ತದೆ. ಬಂಧುಗಳ ನಡುವೆ ಕೆಟ್ಟ ಹೆಸರು ಅವಮಾನ ಮುಂತಾದವನ್ನು ಎದುರಿಸಬೇಕಾಗುತ್ತದೆ. ಹಣದ ಹರಿವು ಕ್ಷೀಣವಾಗಿದೆ. ರಾಜಕೀಯ ನಾಯಕರಿಗೆ ಪದವಿ ಕಳೆದುಕೊಳ್ಳುವ ಯೋಗ. ಎಚ್ಚರಿಕೆಯಿಂದ ಮುಂದಡಿ ಇಡಿ. ಮನಸ್ಸು ಕಹಿ ಮಾಡುಕೊಳ್ಳುವುದರಿಂದ ನಷ್ಟ ಹೆಚ್ಚಾಗುತ್ತದೆ.