;Resize=(412,232))
ಪ್ರಜಾವಾಣಿ ಪತ್ರಿಕೆಯ ಸಹ ಸಂಪಾದಕರಾಗಿದ್ದ ಪದ್ಮರಾಜ ದಂಡಾವತಿಯವರು ತಾವು ಪತ್ರಕರ್ತರಾಗಿದ್ದ ದಿನಗಳ ನೆನಪುಗಳನ್ನು ‘ಉಳಿದಾವ ನೆನಪು’ ಕೃತಿಯಲ್ಲಿ ದಾಖಲಿಸಿದ್ದಾರೆ. ಅಂಕಿತ ಪುಸ್ತಕ ಪ್ರಕಟಿಸಿರುವ ಆ ಕೃತಿಯು ಇಂದು ಬಿಡುಗಡೆಯಾಗುತ್ತಿದೆ. ಕೃತಿಯಲ್ಲಿರುವ ಎರಡು ನೆನಪುಗಳು ಇಲ್ಲಿ ನೀಡಲಾಗಿದೆ.
ಅವರಿಗೆ ಮಧ್ಯ ಪ್ರದೇಶ ಸರ್ಕಾರ ‘ತುಳಸಿ ಸಮ್ಮಾನ್’ ಪ್ರಶಸ್ತಿ ಪ್ರಕಟಿಸಿತು. ಆಗ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಸ್ಪೆಕ್ಟ್ರಂ ವಿಭಾಗವನ್ನು ರಘುನಾಥ ಪೆನುಮಳೆಯವರು ನೋಡಿಕೊಳ್ಳುತ್ತಿದ್ದರು. ಅವರು ಜಿಲ್ಲಾ ವರದಿಗಾರರನ್ನು ಬಳಸಿಕೊಂಡ ಹಾಗೆ ಮತ್ತೆ ಯಾರಾದರೂ ಬಳಸಿಕೊಂಡುದು ನನಗೆ ಗೊತ್ತಿಲ್ಲ.
ಅವರು ನಮಗೆ ಕರೆ ಮಾಡಿ, ಇಂಥ ಲೇಖನ ಬರೆದು ಕೊಡಿ, ಈ ವರದಿ ಬರೆದುಕೊಡಿ ಎಂದು ಕೇಳುತ್ತಿದ್ದರು. ‘ಪ್ರಜಾವಾಣಿ’ಗಿಂತ ಅವರು ಹೆಚ್ಚಿನ ಸಂಭಾವನೆ ಕೊಡುತ್ತಿದ್ದರು. ಆಗ ‘ಪ್ರಜಾವಾಣಿ’ಯಲ್ಲಿ ಒಂದು ಲೇಖನಕ್ಕೆ 150 ರೂಪಾಯಿ ಸಂಭಾವನೆ ಇತ್ತು. ಅದೇ ಲೇಖನ ‘ಡೆಕ್ಕನ್ ಹೆರಾಲ್ಡ್’ನಲ್ಲಿ ಪ್ರಕಟವಾದರೆ 1000 ರೂಪಾಯಿ ಸಂಭಾವನೆ ಸಿಗುತ್ತಿತ್ತು. ಇಂಗ್ಲಿಷ್‌ನಲ್ಲಿ ಲೇಖನ ಪ್ರಕಟವಾದರೆ ಆ ವರದಿಗಾರನಿಗೆ ಜಿಲ್ಲಾ ಆಡಳಿತದ ಮಟ್ಟದಲ್ಲಿ ಒಳ್ಳೆಯ ಹೆಸರೂ ಬರುತ್ತಿತ್ತು.ಪೆನುಮಳೆಯವರು ಒಂದು ದಿನ ನನಗೆ ಕರೆ ಮಾಡಿ ಬಾಳಪ್ಪ ಹುಕ್ಕೇರಿ ಅವರನ್ನು ಭೇಟಿ ಮಾಡಿ ಅವರ ಕುರಿತು ಒಂದು ಲೇಖನ ಬರೆದುಕೊಡಿ ಎಂದು ಕೇಳಿದರು. ಬಾಳಪ್ಪನವರು ಸವದತ್ತಿ ತಾಲ್ಲೂಕಿನ ಮುರಗೋಡದಲ್ಲಿ ವಾಸವಾಗಿದ್ದರು. ಅವರ ಊರಿಗೆ ಅವರನ್ನು ಹುಡುಕಿಕೊಂಡು ಹೋದೆ. ಬಾಳಪ್ಪ ರಸಿಕ, ಅದ್ಭುತ ಮಾತುಗಾರ. ಮೂಲತಃ ಒಬ್ಬ ಸಾದಾ ಸೀದಾ ಮನುಷ್ಯ.
ಮುಂದೆ ಕೆಲವೇ ದಿನಗಳಲ್ಲಿ ಬಾಳಪ್ಪನವರು ತೀರಿಕೊಂಡರು. ತಮಗೆ ಯಾವು ದಾದರೂ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಕೊಡಬೇಕು ಎಂದು ಬಾಳಪ್ಪ ಬಯಸಿದ್ದರು. ಅವರ ಅಪೇಕ್ಷೆ ಈಡೇರಲಿಲ್ಲ. ಅವರ ಮಧುರ ಕಂಠಕ್ಕೆ ಡಾಕ್ಟರೇಟ್ ಪದವಿ ಭಾರವೇನೂ ಆಗುತ್ತಿರಲಿಲ್ಲ.2. ನೋಟಿಸ್ ಕಳುಹಿಸಿದ ಮಿರ್ಜಿ ಅಣ್ಣಾರಾಯರ ಪುತ್ರ
‘ನಾವು ‘ನಿಸರ್ಗ’ದ ಸಂಕ್ಷಿಪ್ತ ರೂಪವನ್ನು ಪ್ರಕಟಿಸಿದ್ದರಲ್ಲಿ ಯಾವುದೇ ದುರುದ್ದೇಶವಿಲ್ಲ. ನಿಮಗೆ ಒಂದಿಷ್ಟು ಪರಿಹಾರವನ್ನೂ ಕೊಡುತ್ತೇವೆ. ನೋಟಿಸ್ ವಾಪಸು ತೆಗೆದುಕೊಳ್ಳಿ ಎಂದು ಅವರಿಗೆ ಹೇಳಿ ಬನ್ನಿ’ ಎಂದು ಕಾರ್ಯನಿರ್ವಾಹಕ ಸಂಪಾದಕರು ನನಗೆ ಸಂಧಾನದ ಕಾರ್ಯ ವಹಿಸಿದರು. ಪತ್ರಿಕೆಯಿಂದ ಮಿರ್ಜಿ ಅಣ್ಣಾರಾಯರಿಗೆ ಅನುಕೂಲವೇ ಆಗಿದೆ. ಅವರ ಮಗ ನೋಟಿಸ್ ಜಾರಿ ಮಾಡಿ ತಪ್ಪು ಮಾಡಿದ್ದಾರೆ ಎನ್ನುವ ಧಾಟಿಯಲ್ಲಿ ಅವರು ಮಾತನಾಡಿದರು!
‘ನಮಗೆ ಯಾವ ದುರುದ್ದೇಶವೂ ಇಲ್ಲ. ನಿಮಗೆ ಆ ಸಂಕ್ಷಿಪ್ತ ಪುಸ್ತಕದ ಪ್ರಕಟಣೆಯ ಸಂಬಂಧ ಇಂತಿಷ್ಟು ಸಂಭಾವನೆ ಕಳಿಸುವುದಾಗಿ ಸಂಪಾದಕರು ತಿಳಿಸಿದ್ದಾರೆ. ಒಪ್ಪಿಕೊಳ್ಳಿ’ ಎಂದೆ. ಆ ಮೊತ್ತ ಐದು ಸಾವಿರ ರೂಪಾಯಿ ಇತ್ತು ಎಂದು ನೆನಪು. ಅವರು ನನ್ನ ಮಾತಿಗೆ ಒಪ್ಪಿದರು. ಮುಂದೆ ಅವರು ನೋಟಿಸ್ ಅನ್ನು persue ಮಾಡಲಿಲ್ಲ. ಮಿರ್ಜಿ ಅಣ್ಣಾರಾಯರು ಜೈನರಾದುದರಿಂದ ನಾನು ಬೆಳಗಾವಿ ಜಿಲ್ಲಾ ವರದಿಗಾರ ಮಾತ್ರವಾಗಿರದೇ ಜೈನನೂ ಆಗಿದ್ದುದರಿಂದ ಕಾರ್ಯನಿರ್ವಾಹಕ ಸಂಪಾದಕರು ನನ್ನನ್ನು ಈ ಕೆಲಸಕ್ಕೆ ಬಳಸಿಕೊಂಡರೇ ಎಂದು ನಂತರ ನನಗೆ ಅನುಮಾನವಾಯಿತು.