;Resize=(412,232))
ನವದೆಹಲಿ: ವಿಧಾನಸಭೆ ಚುನಾವಣೆಯ ಹೊಸ್ತಿನಲ್ಲಿರುವ ಉತ್ತರಪ್ರದೇಶದಲ್ಲಿ ಒಂದು ವೇಳೆ ತಕ್ಷಣಕ್ಕೆ ಎಲೆಕ್ಷನ್ ನಡೆದರೆ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸಮಾಜವಾದಿ ಪಕ್ಷ ಭಾರೀ ಪೈಪೋಟಿ ನೀಡುವ ಸಾಧ್ಯತೆ ಇದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
‘ಸ್ಕೋರ್ ಜನಾಭಿಪ್ರಾಯ’ ಸಂಗ್ರಹದ ಪ್ರಕಾರ 403 ಸಂಖ್ಯಾಬಲದ ಯುಪಿ ವಿಧಾನಸಭೆಗೆ ಈಗಲೇ ಚುನಾವಣೆ ನಡೆದರೆ ಬಿಜೆಪಿ 177-215, ಎಸ್ಪಿ 160-202, ಬಿಜೆಪಿ ಮಿತ್ರಪಕ್ಷ ರಾಷ್ಟ್ರೀಯ ಲೋಕದಳ(ಆರ್‌ಎಲ್‌ಡಿ) 10, ಎಡಿ (ಎಸ್)5, ಎಸ್‌ಬಿಎಸ್‌ಪಿ-3 ರಿಂದ 5, ನಿಷಾದ್ 1ರಿಂದ 3, ಕಾಂಗ್ರೆಸ್ 2, ಜೆಡಿಎಲ್-2, ಬಿಎಸ್ಪಿ-1 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಉಳಿದ 42 ಸ್ಥಾನಗಳ ಕುರಿತು ನಿರ್ಧರಿಸುವುದು ಕಷ್ಟ. ಒಂದು ವೇಳೆ ಎಸ್ಪಿ-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸ್ಪರ್ಧೆಗಿಳಿದರೆ 174-219, ಎನ್‌ಡಿಎ 181-226, ಜೆಡಿಎಲ್-2, ಬಿಎಸ್ಪಿ-1 ಸ್ಥಾನ ಗೆಲ್ಲಲಿದೆ. 45 ಸ್ಥಾನಗಳಲ್ಲಿ ಸೋಲು-ಗೆಲುವು ನಿರ್ಧಾರ ಕಷ್ಟ ಎಂದು ಸಮೀಕ್ಷೆ ಹೇಳಿದೆ.
ಈ ಜನಾಭಿಪ್ರಾಯದ ಪ್ರಕಾರ ಬಿಜೆಪಿ ಮತ ಪ್ರಮಾಣ ಶೇ.36.69, ಎಸ್ಪಿ ಮತಗಳಿಕೆ ಪ್ರಮಾಣ ಶೇ.36.98ರಷ್ಟು ಇರಲಿದೆ. ಬಿಎಸ್ಪಿ ಶೇ.11.45ರಷ್ಟು ಮತಗಳಿಸಲಿದೆ.
ಒಂದು ವೇಳೆ ಎಸ್ಪಿ- ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಿದರೆ, ಎಸ್‌ಪಿ 160- 202, ಕಾಂಗ್ರೆಸ್ ಕೇವಲ 2 ಸ್ಥಾನಕ್ಕೆ ಸೀಮಿತವಾಗಬಹುದು ಎಂದು ಸಮೀಕ್ಷೆ ಹೇಳಿದೆ.
ಆದರೆ ಸಿಎಂ ಆಗಿ ಯೋಗಿ ಆದಿತ್ಯನಾಥ್ ಅವರಿಗೇ ಬೆಸ್ಟ್ ಎಂದಿದ್ದಾರೆ ಸಮೀಕ್ಷೆಯಲ್ಲಿ ಪಾಲ್ಗೊಂಡವರು. ಶೇ.35.29ರಷ್ಟು ಮಂದಿ ಯೋಗಿ ಬೆಂಬಲಿಸಿದರೆ, ಶೇ.26.50ರಷ್ಟು ಮಂದಿ ಅಖಿಲೇಶ್, ಶೇ.8.59 ಮಂದಿ ಮಾಯಾವತಿ ಬೆಂಬಲಿಸಿದ್ದಾರೆ.
2022ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯು 255 ಸ್ಥಾನ ಗೆದ್ದಿದ್ದರೆ, ಎಸ್ಪಿ 111, ಕಾಂಗ್ರೆಸ್ 2 ಸ್ಥಾನ ಗೆದ್ದಿತ್ತು.