ದೇಶದ ಮೊದಲ ಆರ್‌ಆರ್‌ಟಿಎಸ್‌ ರೈಲು ಮಾರ್ಗಕ್ಕೆ ನಾಳೆ ಚಾಲನೆ

KannadaprabhaNewsNetwork |  
Published : Oct 19, 2023, 12:45 AM IST

ಸಾರಾಂಶ

ದೆಹಲಿ, ಮೇರಠ್‌ ಮತ್ತು ಗಾಜಿಯಾಬಾದ್‌ ನಡುವೆ ನಿರ್ಮಾಣ ಮಾಡಲಾಗುತ್ತಿರುವ ಆರ್‌ಆರ್‌ಟಿಎಸ್‌ ರೈಲು ಸೇವೆಯ ಮೊದಲ 17 ಕಿ.ಮೀ. ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅ.20ರಂದು ಚಾಲನೆ ನೀಡಲಿದ್ದಾರೆ.

- 17 ಕಿ.ಮೀ. ಮಾರ್ಗ ಉದ್ಘಾಟಿಸಲಿರುವ ಪ್ರಧಾನಿ ಮೋದಿ ನವದೆಹಲಿ: ದೆಹಲಿ, ಮೇರಠ್‌ ಮತ್ತು ಗಾಜಿಯಾಬಾದ್‌ ನಡುವೆ ನಿರ್ಮಾಣ ಮಾಡಲಾಗುತ್ತಿರುವ ಆರ್‌ಆರ್‌ಟಿಎಸ್‌ ರೈಲು ಸೇವೆಯ ಮೊದಲ 17 ಕಿ.ಮೀ. ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅ.20ರಂದು ಚಾಲನೆ ನೀಡಲಿದ್ದಾರೆ. ಇದು ಪ್ರಮುಖ ನಗರಗಳನ್ನು ಸೇರಿಸುವ ರೈಲು ಯೋಜನೆಯಾಗಿದ್ದು, ಇಲ್ಲಿ ರೈಲುಗಳು ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಮೂಲಕ ತ್ವರಿತವಾಗಿ ಪ್ರಯಾಣಿಕರನ್ನು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕೊಂಡೊಯ್ಯಲಿವೆ. ದೆಹಲಿ ಮತ್ತು ಗಾಜಿಯಾಬಾದ್‌ ನಡುವಿನ 17 ಕಿ.ಮೀ. ಮಾರ್ಗವನ್ನು ಉದ್ಘಾಟಿಸಲಾಗುತ್ತಿದ್ದು, ಇದರಲ್ಲಿ ಶಹೀಬಾಬಾದ್‌, ಗಾಜಿಯಾಬಾದ್‌, ಗುಲ್ದಾರ್‌, ದುಹೈ ಮತ್ತು ದುಹೈ ಡಿಪೋದಲ್ಲಿ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗಿದೆ. ಈ ರೈಲು ಮೆಟ್ರೋ ವ್ಯವಸ್ಥೆಗೆ ಪರ್ಯಾಯವಾಗಲಿದ್ದು, ಅದಕ್ಕಿಂತಲೂ ಹೆಚ್ಚಿನ ಗ್ರಾಹಕ ಸ್ನೇಹಿ ಸೌಕರ್ಯಗಳನ್ನು ಒಳಗೊಂಡಿರಲಿದೆ. ರೈಲಿನಲ್ಲಿ ದಿವ್ಯಾಂಗರಿಗೆ, ರೋಗಿಗಳಿಗೆ ಅನುಕೂಲವಾಗುವಂತೆ ಸ್ಟ್ರೆಚರ್ ಇಡಲು ಸ್ಥಳಾವಕಾಶ, ವೈಫೈ, ಲ್ಯಾಪ್‌ಟಾಪ್‌ ಚಾರ್ಜಿಂಗ್‌ ವ್ಯವಸ್ಥೆ, ಅಗಲವಾದ ಆಸನಗಳು, ಕಾಲುಗಳನ್ನು ನೀಡಿಕೊಳ್ಳಲು ವಿಶಾಲ ಸ್ಥಳಾವಕಾಶ, ಲಗೇಜ್‌ ಕ್ಯಾರಿಯರ್‌ಗಳು ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟದ ಭದ್ರತಾ ಸೌಕರ್ಯಗಳನ್ನು ಒಳಗೊಂಡಿರಲಿದೆ. ಅಂದಾಜು 82 ಕಿ.ಮೀ ಉದ್ದದ ಮಾರ್ಗವನ್ನು 2025ರ ಜೂನ್‌ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತ ಮಾಡುವ ನಿರೀಕ್ಷೆಯಿದೆ.

PREV

Recommended Stories

ರೋಬೋಟಿಕ್ ತಂತ್ರಜ್ಞಾನ ಬಳಸಿ ಯಶಸ್ವಿ ಡಬಲ್ ವಾಲ್ವ್ ಬದಲಿ ಶಸ್ತ್ರಚಿಕಿತ್ಸೆ ನಡೆಸಿದ ಅಪೋಲೋ
ಭಗವದ್ಗೀತೆ ಬೋಧನೆ ಪ್ರಸ್ತಾಪ ಹಿಂದೆ ಎಚ್ಜಿಕೆ ಅಜೆಂಡಾ : ಮಧು ಬಂಗಾರಪ್ಪ