ಕಲ್ಲಿಕೋಟೆಯಲ್ಲಿ ಕನ್ನಡ ಕಲರವ । ಮರ್ಕಝ್‌ ಕನ್ನಡಿಗ ವಿದ್ಯಾರ್ಥಿಗಳ ಇಝ್ದಿಹಾರ್ 7.0 ಸಮಾರೋಪ

KannadaprabhaNewsNetwork |  
Published : Dec 22, 2024, 01:33 AM ISTUpdated : Dec 22, 2024, 04:52 AM IST
Belagavi Kannada Flag

ಸಾರಾಂಶ

ನಾಲ್ಕು ದಿವಸಗಳ ಕಾಲ ಆರು ಭಾಷೆಗಳಲ್ಲಿ ಕಾರ್ಯಕ್ರಮ ನಡೆಯಿತು. ಮರ್ಕಝ್ ಸಂಸ್ಥೆಯ ಶಿಲ್ಪಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನೆರವೇರಿತು.

ಕಲ್ಲಿಕೋಟೆ: ಕಾರಂದೂರ್ ಮರ್ಕಝುಸ್ಸಖಾಫತಿಸುನ್ನಿಯಾ ವಿದ್ಯಾಸಂಸ್ಥೆಯ ಕನ್ನಡಿಗರ ಕಲಾ ಕಾರ್ಯಕ್ರಮ‌ ''ಇಝ್ದಿಹಾರ್ 7.0'' ಸಮಾರೋಪಗೊಂಡಿತು.‌‌ ''ಕಾಲಾತೀತ ಜ್ಞಾನದಾಳಕ್ಕೆ'' ಎಂಬ ಪ್ರಮೇಯದಲ್ಲಿ ನಾಲ್ಕು ದಿವಸಗಳ ಕಾಲ ಆರು ಭಾಷೆಗಳಲ್ಲಿ ಕಾರ್ಯಕ್ರಮ ನಡೆಯಿತು. ಮರ್ಕಝ್ ಸಂಸ್ಥೆಯ ಶಿಲ್ಪಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನೆರವೇರಿತು.

 ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಮಾಣಿ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.‌ ಝೈನುದ್ದೀನ್ ಅಹ್ಸನಿ ಮಲಯಮ್ಮ, ಇಸ್ಮಾಯೀಲ್ ಸಅದಿ ಮಾಚಾರ್ ಥೀಂ ಟಾಕ್ ನಡೆಸಿದರು.‌ ತೀರ್ಪುಗಾರರಾಗಿ ಸಾಜಿದ್ ಸಖಾಫಿ, ಮಸ್ರೂರ್ ಸುರೈಜಿ, ಸ್ವಾದಿಖ್ ಮಾಸ್ಟರ್ ಉಪಸ್ಥಿತರಿದ್ದರು. ಶಹೀರ್ ಇರಾ ನೇತೃತ್ವದ ಕಶಫ್ ಶೇಪ್ ತಂಡ ಚಾಂಪಿಯನ್ ಆಗಿಯೂ, ಇರ್ಶಾದ್ ರೆಂಜಲಾಡಿ ನೇತೃತ್ವದ ಫಹಸ್ ಸ್ಕೋಪ್ ರನ್ನರ್ ಆಫ್ ಪ್ರಶಸ್ತಿ ಪಡೆಯಿತು. ಫಲಾಹ್ ಕೊಂಡಂಗೇರಿ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು. 

ಮರ್ಕಝ್ ಸಂಸ್ಥೆಯ ಪ್ರಧಾನ ಮುದರ್ರಿಸರಾದ ಡಾ. ಹುಸೈನ್ ಸಖಾಫಿ ಚುಳ್ಳಿಕ್ಕೋಡ್, ಗಫೂರ್ ಅಝ್ಹರಿ, ಮಲಯಮ್ಮ‌ ಸಖಾಫಿ, ಜಝೀಲ್ ಶಾಮಿಲ್ ಇರ್ಫಾನಿ ಸೇರಿದ ಗಣ್ಯರು ಉಪಸ್ಥಿತರಿದ್ದರು. ಕೆ.ಎಸ್.ಓ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿ ಸಲಾಮ್ ಬೊಳ್ಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

PREV

Recommended Stories

ಮಸೂದೆಯನ್ನೇ ಓದದೆ ಕುರುಡಾಗಿ ಪ್ರತಿಪಕ್ಷಗಳಿಂದ ಕ್ಷುಲ್ಲಕ ವಿರೋಧ
ವಿರೋಧಿಗಳ ಹತ್ತಿಕ್ಕಲು ಸರ್ಕಾರಕ್ಕೆ ದ್ವೇಷ ಮಸೂದೆ ಮುಕ್ತ ಪರವಾನಗಿ!