ಕನ್ನಡ ಭಾಷೆಗೆ 2000 ವರ್ಷ ಇತಿಹಾಸವಿದೆ - ತನ್ನದೇ ಅಸ್ಮಿತೆಯನ್ನು ಒಳಗೊಂಡಿದೆ : ಮುನಿರಾಜು

KannadaprabhaNewsNetwork |  
Published : Nov 11, 2024, 12:47 AM ISTUpdated : Nov 11, 2024, 05:14 AM IST
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆಯಲ್ಲಿರುವ ವಾಯು ವಿಹಾರಿಗಳ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.   | Kannada Prabha

ಸಾರಾಂಶ

ಕನ್ನಡ ಭಾಷೆಗೆ ಸುಮಾರು 2000ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಭಾಷೆ, ಬದುಕು, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯಲ್ಲಿ ಕನ್ನಡ ಭಾಷೆಯು ತನ್ನದೇ ಅಸ್ಮಿತೆಯನ್ನು ಒಳಗೊಂಡಿದೆ. ಪ್ರಾಚೀನ ಕಾಲದಿಂದಲೂ ಶಾಸನಗಳಲ್ಲಿ ಕನ್ನಡ ಭಾಷೆ ಬಳಕೆಯಾಗಿರುವುದು ಕಂಡು ಬರುತ್ತದೆ ಎಂದು ಶಾಸಕ ಎಸ್‌.ಮುನಿರಾಜು ತಿಳಿಸಿದರು.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿಕನ್ನಡ ಭಾಷೆಗೆ ಸುಮಾರು 2000ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಭಾಷೆ, ಬದುಕು, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯಲ್ಲಿ ಕನ್ನಡ ಭಾಷೆಯು ತನ್ನದೇ ಅಸ್ಮಿತೆಯನ್ನು ಒಳಗೊಂಡಿದೆ. 

ಪ್ರಾಚೀನ ಕಾಲದಿಂದಲೂ ಶಾಸನಗಳಲ್ಲಿ ಕನ್ನಡ ಭಾಷೆ ಬಳಕೆಯಾಗಿರುವುದು ಕಂಡು ಬರುತ್ತದೆ ಎಂದು ಶಾಸಕ ಎಸ್‌.ಮುನಿರಾಜು ತಿಳಿಸಿದರು.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆಯಲ್ಲಿರುವ ವಾಯು ವಿಹಾರಿಗಳ ಸಂಘದ ವತಿಯಿಂದ ಆಯೋಜನೆ ಮಾಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎಸ್‌.ಮುನಿರಾಜು ಅವರು ಧ್ವಜಾರೋಹಣ ಮಾಡಿದರು. 

ಬಳಿಕ ವಾಯು ವಿಹಾರಿಗಳ ಸಂಘದ ಪಧಾಧಿಕಾರಿಗಳು ಹಾಗೂ ದಾನಿಗಳು ನೀಡಿದ್ದ ಸೋಲಾರ್ ಲೈಟ್ ಅನ್ನುಉದ್ಘಾಟಿಸಿದರು.

ಬಳಿಕ ಮಾತನಾಡಿ, ಕನ್ನಡ ಮಾತನಾಡುವವರು ಕಾವೇರಿಯಿಂದ ಗೋದಾವರಿಯವರೆಗೆ ಇರುವುದನ್ನು ಕಾಣುತ್ತೇವೆ. ಇಂದು ಕರ್ನಾಟಕ ಏಕೀಕರಣಗೊಂಡ ದಿನ. ಇದು ಕನ್ನಡಿಗರಾದ ನಮ್ಮೆಲ್ಲರಿಗೂ ಬಹಳ ವಿಶೇಷವಾದ ದಿನ. ಕನ್ನಡದ ಕಾರಣಕ್ಕೆ ಒಗ್ಗೂಡಿರುವ ಜನ ನಾವು. ಸ್ವಾತಂತ್ರ್ಯ ಪೂರ್ವದಲ್ಲಿ ಹಲವು ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರ ಹಲವು ಪ್ರದೇಶಗಳನ್ನು ಒಂದುಗೂಡಿಸಿ, 1956ರ ನವೆಂಬರ್ 1ರಂದು ಕರ್ನಾಟಕ ಏಕೀಕರಣ ಮಾಡಲಾಯಿತು. ಅಂದಿನಿoದ ಪ್ರತಿ ವರ್ಷ ನವೆಂಬರ್ ತಿಂಗಳನ್ನು ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.ಸಾಹಿತಿ ಹಾಗೂ ವಾಗ್ಮಿಗಳಾದ ಶಶಿಕಾಂತರಾವ್‌ ಕರ್ನಕ್ಕದ ಏಕೀಕರಣದ ಹೋರಾಟದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಧ್ವನಿ ಎತ್ತಿದವರು ಸಾಹಿತಿಗಳು ಹಾಗೂ ರಾಜಕಾರಣಿಗಳು. 

ರಾಷ್ಟ್ರಕವಿ ಕುವೆಂಪು ಅವರು ಸಹ ಕರ್ನಾಟಕ ಏಕೀಕರಣಕ್ಕೆ ಒತ್ತಾಸೆಯಾಗಿ ನಿಂತಿದ್ದರು. ಕವೆಂಪು ಅವರ ಜೈ ಭಾರತ ಜನನಿನಿಯ ತನುಜಾತೆ'''''''' ಗೀತೆಯು ನಮ್ಮ ರಾಜ್ಯದ ನಾಡಗೀತೆಯಾಗಿದೆ ಎಂದು ತಿಳಿಸಿದರು.ಎಸ್‌ಆರ್‌ಎಸ್‌ ಎಂಟರ್‌ಪ್ರೈಸಸ್‌ ಮಾಲೀಕ ಟಿ.ಎಸ್.ಬಸವರಾಜು,ವಿಸ್ತಾರ ಡೆವಲಪರ್ಸ್ ಮಾಲೀಕ ಕಾಂತರಾಜು, ಶ್ರೀನಿವಾಸ ಮಂಜುನಾಥ ಪೌಂಡೇಶನ್ ಸಂಸ್ಥಾಪಕ ಡಾ.ಎಸ್ ಮಂಜುನಾಥ (ಎಬಿಬಿ) ಸಮಾಜ ಸೇವಕರಾದ ಹನುಮಂತರಾಜು , ಚಂದ್ರಶೇಖರ್ , ಮಾರಮ್ಮ ದೇವಸ್ಥಾನ ಅರ್ಚಕ ರಮೇಶ್, ವಾಯುವಿಹಾರಿಗಳ ಸಂಘದ ಆಧ್ಯಕ್ಷ ಗೋವಿಂದರಾಜು ಉಪಾಧ್ಯಕ್ಷ ಮುನಿರಾಜು .ವಿ, ಕಾರ್ಯದರ್ಶಿ ಲೋಕೇಶ್ ಬಿ.ಕೆ ,ಖಜಾಂಚಿ ಶಿವಶಂಕರ್ ಎಲ್ ವಾಯು ವಿಹಾರಿಗಳ ಸಂಘದ ಸದಸ್ಯರು ಪದಾಧಿಕಾರಿಗಳು ಹಾಜರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಹಳದಿ ಮಾರ್ಗ ಮೆಟ್ರೋಗೆ ಆ.10ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ