‘ಕಲಾ ಸೌರಭ-2025’ : ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್‌ನಿಂದ ಪ್ರತಿಭಾ ಪುರಸ್ಕಾರ

KannadaprabhaNewsNetwork |  
Published : Jan 12, 2025, 01:17 AM ISTUpdated : Jan 12, 2025, 04:50 AM IST
ಗುರುಕುಲ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶನಿವಾರ ಜರುಗಿದ ‘ಕಲಾ ಸೌರಭ-2025’ ಕಾರ್ಯಕ್ರಮದಲ್ಲಿ 22 ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕನ್ನಡಪ್ರಭ - ಸುವರ್ಣ ನ್ಯೂಸ್ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಕನ್ನಡಪ್ರಭ ವಿಶೇಷ ಮುಖ್ಯ ಸಮನ್ವಯ ಸಂಪಾದಕ ಬಿ.ವಿ ಮಲ್ಲಿಕಾರ್ಜುನಯ್ಯ, ಸುವರ್ಣ ನ್ಯೂಸ್ ಔಟ್‌ಪುಟ್ ಸಂಪಾದಕರಾದ ಶೋಭಾ ಮಳವಳ್ಳಿ, ನಟಿ ಸಿಂಧೂ ಲೋಕನಾಥ್, ಶಾಲೆಯ ಸ್ಥಾಪಕ ಕಾರ್ಯದರ್ಶಿ ನಂಜುಂಡಯ್ಯ, ಪ್ರಾಂಶುಪಾಲರಾದ ನಟೇಶ್, ಕನ್ನಡಪ್ರಭ ಜನರಲ್ ಮ್ಯಾನೇಜರ್ ಮಂಜುನಾಥ ದ್ಯಾವನಗೌಡ್ರ, ಚಿತ್ರ ನಿರ್ದೇಶಕ ಎಸ್. ಮಹೇಶ್ ಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ನಗರದ ಮಾಗಡಿ ರಸ್ತೆಯಲ್ಲಿರುವ ಗುರುಕುಲ ಇಂಟರ್‌ನ್ಯಾಷನಲ್ ಶಾಲೆಯು ಶನಿವಾರ ಆಯೋಜಿಸಿದ್ದ ‘ಕಲಾ ಸೌರಭ-2025’ ಕಾರ್ಯಕ್ರಮದಲ್ಲಿ 22 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕನ್ನಡಪ್ರಭ - ಸುವರ್ಣ ನ್ಯೂಸ್ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

 ಬೆಂಗಳೂರು : ನಗರದ ಮಾಗಡಿ ರಸ್ತೆಯಲ್ಲಿರುವ ಗುರುಕುಲ ಇಂಟರ್‌ನ್ಯಾಷನಲ್ ಶಾಲೆಯು ಶನಿವಾರ ಆಯೋಜಿಸಿದ್ದ ‘ಕಲಾ ಸೌರಭ-2025’ ಕಾರ್ಯಕ್ರಮದಲ್ಲಿ 22 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕನ್ನಡಪ್ರಭ - ಸುವರ್ಣ ನ್ಯೂಸ್ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಕಾರಣರಾದ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪಾಲಕರನ್ನು ಇದೇ ವೇಳೆ ಸನ್ಮಾನಿಸಲಾಯಿತು. ವಿವಿಧ ತರಗತಿಗಳಲ್ಲಿ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ಅತ್ಯುತ್ತಮ ವಿದ್ಯಾರ್ಥಿಗಳಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡಪ್ರಭ ವಿಶೇಷ ಮುಖ್ಯ ಸಮನ್ವಯ ಸಂಪಾದಕ ಬಿ.ವಿ ಮಲ್ಲಿಕಾರ್ಜುನಯ್ಯ ಅವರು ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರು ಇರುವ ಪ್ರದೇಶದಲ್ಲಿ ಉತ್ತಮ ಶಾಲೆಯನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ನೆರವಾಗುತ್ತಿರುವುದು ಶ್ಲಾಘನೀಯ. ವಿದ್ಯೆ ತಪಸ್ಸು ಇದ್ದಂತೆ. ಶ್ರದ್ದೆಯಿಂದ ವ್ಯಾಸಂಗ ಮಾಡಿದರೆ ಯಶಸ್ಸು ಸಾಧ್ಯ. ಅದರಿಂದ ಜೀವನದಲ್ಲೂ ಯಶಸ್ಸು ಸಾಧಿಸಬಹುದು. ಎಲ್ಲ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಭಾಜನವಾಗುವಂತೆ ಬೆಳೆಯಬೇಕು. ದಿನಪತ್ರಿಕೆಗಳನ್ನು ಓದುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ನಗರದ ಅತ್ಯುತ್ತಮ ಶಾಲೆಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಮಾಡುತ್ತವೆ ಎಂದರು.

ಸುವರ್ಣ ನ್ಯೂಸ್ ಔಟ್‌ಪುಟ್ ಸಂಪಾದಕರಾದ ಶೋಭಾ ಮಳವಳ್ಳಿ ಮಾತನಾಡಿ, ಸಾಧಕ ಮಕ್ಕಳ ಜೊತೆಗೆ ಸಾಧನೆಗೆ ಕಾರಣವಾದ ಶಿಕ್ಷಕರಿಗೂ ಸನ್ಮಾನಿಸಿರುವುದು ಗಮನಾರ್ಹ ಸಂಗತಿ. ಮಕ್ಕಳನ್ನು ನಿಭಾಯಿಸುವುದು ಸಾಮಾನ್ಯ ಕೆಲಸವಲ್ಲ. ಹೀಗಾಗಿ, ಶಿಕ್ಷಕರ ಶ್ರಮವನ್ನು ಗುರುತಿಸುವ ಕೆಲಸ ಮುಂದುವರೆಯಲಿ ಎಂದರು.

ನಟಿ ಸಿಂಧೂ ಲೋಕನಾಥ್ ಮಾತನಾಡಿ, ಶಿಕ್ಷಣ ಮಾತ್ರವಲ್ಲದೇ ಎಲ್ಲ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸುವ ಕೆಲಸ ಆಗಲಿ ಎಂದರು.

ಶಾಲೆಯ ಸ್ಥಾಪಕ ಕಾರ್ಯದರ್ಶಿ ನಂಜುಂಡಯ್ಯ, ಪ್ರಾಂಶುಪಾಲರಾದ ನಟೇಶ್, ಕನ್ನಡಪ್ರಭ ಜನರಲ್ ಮ್ಯಾನೇಜರ್ ಮಂಜುನಾಥ್ ದ್ಯಾವನಗೌಡ್ರ, ಚಿತ್ರ ನಿರ್ದೇಶಕ ಎಸ್. ಮಹೇಶ್ ಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಮಕ್ಕಳಿಂದ ಆಕರ್ಷಕ ಕಾರ್ಯಕ್ರಮ: ಕಲಾ ಸೌರಭ ಕಾರ್ಯಕ್ರಮದಲ್ಲಿ ಶಾಲೆಯ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

PREV

Recommended Stories

ಜಾಲತಾಣ ದುರ್ಬಳಕೆ ಮಾಡಿದ್ರೆ ಕ್ರಮ - ಸುಳ್ಳು ಸುದ್ದಿ ಹರಡುವ ಯೂಟ್ಯೂಬರ್ಸ್‌ ಮೇಲೂ ಕೇಸ್‌ : ಸಲೀಂ
ಬೆಂಗಳೂರು ಬೀದಿನಾಯಿಗಳಿಗೆ ಈಗ ಪೊಲೀಸ್‌ ಶ್ವಾನಗಳ ರೀತಿ ಟ್ರೈನಿಂಗ್ ಭಾಗ್ಯ !