ಕಾರ್ಪೊರೇಟ್‌ಗಳಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್‌ನಿಂದ ಇನ್‌ಸ್ಟಂಟ್ ವರ್ಕಿಂಗ್ ಕ್ಯಾಪಿಟಲ್ ಲೋನ್

KannadaprabhaNewsNetwork |  
Published : Apr 24, 2026, 12:15 AM IST
ಕೋಟಕ್ ಮಹೀಂದ್ರಾ | Kannada Prabha

ಸಾರಾಂಶ

ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಅಲ್ಪಾವಧಿಯ ಹಣಕಾಸಿನ ಅಗತ್ಯಗಳನ್ನು ನಿರ್ವಹಿಸುವ ವಿಧಾನದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಕೋಟಕ್ ಮಹೀಂದ್ರಾ ‘ಇನ್‌ ಸ್ಟಂಟ್ ವರ್ಕಿಂಗ್ ಕ್ಯಾಪಿಟಲ್ ಲೋನ್’ ಸೌಲಭ್ಯ ಒದಗಿಸುತ್ತಿದೆ.

ಕನ್ನಡಪ್ರಭವಾರ್ತೆ ಬೆಂಗಳೂರು

ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಅಲ್ಪಾವಧಿಯ ಹಣಕಾಸಿನ ಅಗತ್ಯಗಳನ್ನು ನಿರ್ವಹಿಸುವ ವಿಧಾನದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ‘ಇನ್‌ ಸ್ಟಂಟ್ ವರ್ಕಿಂಗ್ ಕ್ಯಾಪಿಟಲ್ ಲೋನ್’ ಸಹಕಾರಿಯಾಗಲಿದೆ ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್ ಅಭಿಪ್ರಾಯಪಟ್ಟಿದೆ. ಪ್ರಾಯೋಗಿಕ ಹಂತದಲ್ಲಿ ಯಶಸ್ವಿಯಾಗಿ ₹9,000 ಕೋಟಿಗೂ ಅಧಿಕ ಮೊತ್ತವನ್ನು ವಿತರಿಸಿದ ನಂತರ, ಬ್ಯಾಂಕ್ ಈಗ ಈ ಸೌಲಭ್ಯವನ್ನು ತನ್ನ ಎಲ್ಲಾ ಕಾರ್ಪೊರೇಟ್ ಗ್ರಾಹಕರಿಗಾಗಿ ಒದಗಿಸುತ್ತಿದೆ.

ಅಲ್ಪಾವಧಿ ಸಾಲಗಳು ಅತ್ಯಂತ ವೇಗವಾಗಿ ಲಭ್ಯವಾಗುತ್ತಿರುವುದು, ಕಂಪನಿಗಳು ತಮ್ಮ ದೈನಂದಿನ ಬಂಡವಾಳ ಅಗತ್ಯಗಳನ್ನು ನಿರ್ವಹಿಸುವ ಕ್ರಮದ ಮೇಲೆ ದೊಡ್ಡ ಪ್ರಭಾವ ಬೀರುತ್ತಿದೆ ಎಂದು ಬ್ಯಾಂಕ್ ತಿಳಿಸಿದೆ.

ಈ ಸೌಲಭ್ಯದ ಅಡಿಯಲ್ಲಿ ಅರ್ಹ ಕಾರ್ಪೊರೇಟ್ ಸಂಸ್ಥೆಗಳು ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಯ ಮೂಲಕ ಕೇವಲ ಕೆಲವೇ ಸೆಕೆಂಡುಗಳಲ್ಲಿ ವರ್ಕಿಂಗ್ ಕ್ಯಾಪಿಟಲ್ (ಕಾರ್ಯ ನಿರ್ವಹಣಾ ಬಂಡವಾಳ) ಸಾಲವನ್ನು ಪಡೆಯಬಹುದಾಗಿದೆ. ಸಾಮಾನ್ಯವಾಗಿ ಸಾಲದ ಮಿತಿಗಳು ಮೊದಲೇ ಮಂಜೂರಾಗಿದ್ದರೂ ಸಹ, ಬ್ಯಾಂಕಿಂಗ್ ಸಮಯದ ಮಿತಿ ಮತ್ತು ಮ್ಯಾನುಯಲ್ ಹಂತಗಳಿಂದಾಗಿ ಸಾಲದ ಹಣ ಕೈ ಸೇರಲು ವಿಳಂಬವಾಗುತ್ತಿತ್ತು. ಆದರೆ, ಈ ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯು ಅಂತಹ ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ಹಣಕಾಸಿನ ತುರ್ತು ಅಗತ್ಯಗಳನ್ನು ಕ್ಷಣಾರ್ಧದಲ್ಲಿ ಪೂರೈಸಲಿದೆ.

ಈ ಕುರಿತು ಕೋಟಕ್ ಮಹೀಂದ್ರಾ ಬ್ಯಾಂಕ್‌ ನ ಕಾರ್ಪೊರೇಟ್ ಮತ್ತು ಟ್ರಾನ್ಸಾಕ್ಷನ್ ಬ್ಯಾಂಕಿಂಗ್ ವಿಭಾಗದ ಅಧ್ಯಕ್ಷೆ ಅನು ಅಗರ್ವಾಲ್ ಮಾತನಾಡಿ , ‘ಬ್ಯಾಂಕಿಂಗ್ ಸಮಯಕ್ಕೆ ಅನುಗುಣವಾಗಿ ಹಣಕಾಸಿನ ಯೋಜನೆ ರೂಪಿಸುವ ಬದಲು, ಗ್ರಾಹಕರು ಈಗ ತಮಗೆ ಅಗತ್ಯವಿದ್ದ ತಕ್ಷಣವೇ ವರ್ಕಿಂಗ್ ಕ್ಯಾಪಿಟಲ್ ಅನ್ನು ಪಡೆಯುತ್ತಿದ್ದಾರೆ’ ಎಂದು ಹೇಳಿದರು.

ದಾಸ್ತಾನು ಖರೀದಿ, ವೆಂಡರ್ ಪಾವತಿಗಳು ಮತ್ತು ವೇತನ ವಿತರಣೆಯಂತಹ ದೈನಂದಿನ ಅಗತ್ಯಗಳನ್ನು ಪೂರೈಸಲು ಕಾರ್ಪೊರೇಟ್ ಸಂಸ್ಥೆಗಳು ಹೆಚ್ಚಾಗಿ ಕಾರ್ಯನಿರ್ವಹಣಾ ಬಂಡವಾಳ ಸಾಲಗಳನ್ನು ಅವಲಂಬಿಸಿರುತ್ತವೆ. ಈ ಸಾಲಗಳು ಮೊದಲೇ ಮಂಜೂರಾಗಿದ್ದರೂ, ಹಣ ಪಡೆಯಲು ನಿಗದಿತ ಕೆಲಸದ ಸಮಯ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಈ ಹಿಂದೆ ಇತ್ತು.

ಆದರೆ ಈಗ ಈ ಸಂಪ್ರದಾಯ ಬದಲಾಗುತ್ತಿದೆ. ಕೋಟಕ್ ಬ್ಯಾಂಕ್ ತನ್ನ ಕಾರ್ಪೊರೇಟ್ ಡಿಜಿಟಲ್ ಪ್ಲಾಟ್‌ ಫಾರ್ಮ್ ‘ಎಫ್ ವೈ ಎನ್’ (ಫಾರ್ ಯುವರ್ ನೀಡ್ಸ್) ಮೂಲಕ ಗ್ರಾಹಕರು ಕೇವಲ ಕೆಲವೇ ಸೆಕೆಂಡುಗಳಲ್ಲಿ ಈ ಸಾಲವನ್ನು ಪಡೆಯಲು ಅನುವು ಮಾಡಿಕೊಟ್ಟಿದೆ. ಕಂಪನಿಗಳು ಸಾಲದ ಮೊತ್ತ ಮತ್ತು ಅವಧಿಯಂತಹ ಮೂಲಭೂತ ವಿವರಗಳನ್ನು ನಮೂದಿಸಿದ ತಕ್ಷಣವೇ, ಡಿಜಿಟಲ್ ತಪಾಸಣೆಗಳು ಪೂರ್ಣಗೊಂಡು ಹಣವು ಅವರ ಖಾತೆಗೆ ತಕ್ಷಣವೇ ಜಮೆಯಾಗುತ್ತದೆ.

ಈ ಕುರಿತು ಮಾಹಿತಿ ನೀಡಿದ ಅನು ಅಗರ್ವಾಲ್ ಅವರು, ‘ಸಾಲ ವಿತರಣೆಯ ಸಮಯವನ್ನು ನಾವು ಹಲವು ಗಂಟೆಗಳಿಂದ ಕೇವಲ ಕೆಲವೇ ಸೆಕೆಂಡುಗಳಿಗೆ ಇಳಿಸಿದ್ದೇವೆ. ಇದರಿಂದಾಗಿ ಕಂಪನಿಗಳು ಕೇವಲ ಬ್ಯಾಂಕಿಂಗ್ ವಿಳಂಬವನ್ನು ಸರಿಹೊಂದಿಸಲು ಹಣವನ್ನು ಕಾಯ್ದಿರಿಸುವ ಬದಲು, ಅಗತ್ಯಬಿದ್ದ ತಕ್ಷಣವೇ ತಮ್ಮ ದೈನಂದಿನ ವಹಿವಾಟಿನ ಅಗತ್ಯಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿದೆ’ ಎಂದು ಹೇಳಿದರು.

ಭಾರತದ ರಿಟೇಲ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ‘ಇನ್‌ ಸ್ಟಂಟ್ ಪೇಮೆಂಟ್’ ಸೌಲಭ್ಯಗಳು ಹಲವು ವರ್ಷಗಳ ಹಿಂದೆಯೇ ಬಂದಿದ್ದರೂ, ಕಾರ್ಪೊರೇಟ್ ಸಾಲದ ಪ್ರಕ್ರಿಯೆಗಳು ಅವುಗಳ ಸಂಕೀರ್ಣತೆಯಿಂದಾಗಿ ನಿಧಾನಗತಿಯಲ್ಲಿ ಬೆಳವಣಿಗೆ ಹೊಂದಿದ್ದವು ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇತ್ತೀಚಿನ ಈ ಬದಲಾವಣೆಯು ಕೇವಲ ಹೊರಗಿನ ಸೇವೆಗಳಿಗಷ್ಟೇ ಅಲ್ಲದೆ, ಆಂತರಿಕ ವಹಿವಾಟಿನ ಪ್ರಕ್ರಿಯೆಗಳಿಗೂ ಈಗ ಆಟೊಮೇಷನ್ ಅಳವಡಿಸಲಾಗುತ್ತಿದೆ ಎಂಬುದನ್ನು ಸಾಬೀತುಪಡಿಸಿದೆ.

ಕೋಟಕ್ ಬ್ಯಾಂಕ್‌ನ ‘ಎಫ್ ವೈ ಎನ್’ ವ್ಯವಸ್ಥೆಯ ಮೂಲಕ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದು ಪಾವತಿಗಳು, ಕಲೆಕ್ಷನ್ಸ್ ಮತ್ತು ಟ್ರೇಡ್ ಸರ್ವಿಸಸ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒಂದೇ ಸೂರಿನಡಿ ತಂದಿದೆ. ಇದರ ಜೊತೆಗೆ ಅಕೌಂಟ್ ಸ್ಟೇಟ್‌ ಮೆಂಟ್, ಟ್ಯಾಕ್ಸ್ ಸರ್ಟಿಫಿಕೇಟ್‌ ನಂತಹ ದೈನಂದಿನ ಸೇವೆಗಳನ್ನೂ ಬ್ಯಾಂಕ್ ಡಿಜಿಟಲೀಕರಣಗೊಳಿಸುತ್ತಿದೆ.

PREV

Recommended Stories

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೋಕಾ-ಕೋಲಾ ವಿನೂತನ ಯೋಜನೆ: ಪಲ್ಸ್ ಆಪ್ ಮೂಲಕ ಕೋಕ್ ವಿತರಣೆ
ಬೆಂಗಳೂರು ನಗರದಲ್ಲಿ ಹೀಟ್ ಸ್ಟ್ರೋಕ್‌ : ಅಂಗಾಂಗ ವೈಫಲ್ಯ ಭೀತಿ! ಮುನ್ನೆಚ್ಚರಿಕೆ ಮತ್ತು ಪರಿಹಾರಗಳು