ಕೆಎಸ್ ಆರ್ ಟಿಸಿ ಬಸ್ ಹರಿದು ವ್ಯಕ್ತಿ ಸಾವು

KannadaprabhaNewsNetwork |  
Published : Oct 25, 2023, 01:15 AM IST
24ಸಿಎಚ್‌ಎನ್‌52ಹನೂರು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಕರ್ನಾಟಕ ರಾಜ್ಯ ಸಾರಿಗೆ ವಾಹನ ಮೇಲೆ ಹರಿದ ಪರಿಣಾಮೃತಪಟ್ಟ ಚಿನ್ನಸ್ವಾಮಿ. | Kannada Prabha

ಸಾರಾಂಶ

ಹನೂರು:ಕರ್ನಾಟಕ ರಾಜ್ಯ ಸಾರಿಗೆ ಬಸ್ ಹರಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಪಟ್ಟಣದಲ್ಲಿ ಜರುಗಿದೆ. ಹನೂರು ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಚಂಗಡಿ ಗ್ರಾಮದ ಚಿನ್ನಸ್ವಾಮಿ(29) ಮೃತ ದುರ್ದೈವಿ.

ಹನೂರು:ಕರ್ನಾಟಕ ರಾಜ್ಯ ಸಾರಿಗೆ ಬಸ್ ಹರಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಪಟ್ಟಣದಲ್ಲಿ ಜರುಗಿದೆ. ಹನೂರು ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಚಂಗಡಿ ಗ್ರಾಮದ ಚಿನ್ನಸ್ವಾಮಿ(29) ಮೃತ ದುರ್ದೈವಿ. ಘಟನೆಯ ವಿವರ:ಮೃತ ಚಿನ್ನಸ್ವಾಮಿ ದ್ವಿಚಕ್ರ ವಾಹನದಲ್ಲಿ ಹನೂರು ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ, ಚಾಲಕನ ಅಜಾರುಕತೆಯಿಂದ ಸಾರಿಗೆ ಬಸ್ ದ್ವಿಚಕ್ರ ವಾಹನ ಸವಾರನ ಮೇಲೆ ಹರಿದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ದ್ವಿಚಕ್ರ ವಾಹನ ಸವಾರನನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಜರುಗಿದೆ. ಕುಟುಂಬದವರ ಅಕ್ರಂದನ:ಸರ್ಕಾರಿ ಆಸ್ಪತ್ರೆಯ ಮುಂಭಾಗ ಜಮಾಯಿಸಿದ್ದ ಮೃತ ಚಿನ್ನಸ್ವಾಮಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಕೆಎಸ್ ಆರ್ ಟಿಸಿ ಬಸ್ ಚಾಲಕನನ್ನು ಹನೂರು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. --------- 24ಸಿಎಚ್‌ಎನ್‌52 ಹನೂರಿನಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಕೆಎಸ್ ಆರ್ ಟಿಸಿ ಬಸ್ ಮೈ ಮೇಲೆ ಹರಿದು ಮೃತಪಟ್ಟ ಚಿನ್ನಸ್ವಾಮಿ. -------------

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಹಳದಿ ಮಾರ್ಗ ಮೆಟ್ರೋಗೆ ಆ.10ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ