ಕನ್ನಡಪ್ರಭವಾರ್ತೆ ಬೆಂಗಳೂರು
ಯಮಹಾ ಬ್ಲೂ ಸ್ಕ್ವೇರ್ ಶೋರೂಮ್‌ಗಳ ಮೂಲಕ ತನ್ನ ಬೈಕ್‌ಗಳ ಮಾರಾಟ, ಸರ್ವೀಸ್ ಸೌಲಭ್ಯಗಳನ್ನು ಮಾತ್ರವೇ ಒದಗಿಸುವುದಿಲ್ಲ, ಜೊತಗೆ ಯಮಹಾ ರೈಡರ್‌ಗಳ ಸಮೂಹವನ್ನು ಜೊತೆಗೂಡಿಸುತ್ತದೆ. ಯಮಹಾದ ರೇಸ್ ಪರಂಪರೆಯನ್ನು ಹೊಸ ಪೀಳಿಗೆಗೆ ಸಾರುವ ಕೆಲಸ ಮಾಡುತ್ತದೆ.
ಇದೀಗ ಕರ್ನಾಟಕದಲ್ಲಿರುವ ಯಮಹಾ ಬ್ಲೂ ಸ್ಕ್ವೇರ್ ಶೋರೂಮ್‌ಗಳ ಸಂಖ್ಯೆ 33ಕ್ಕೆ ಏರಿದೆ. ಬೆಂಗಳೂರಿನಲ್ಲಿಯೇ ಒಟ್ಟು 19 ಬ್ಲೂಸ್ಕ್ವೇರ್ ಶೋರೂಮ್‌ಗಳಿರುವುದು ಗಮನಾರ್ಹ.ಯಮಹಾದ ಪ್ರೀಮಿಯಂ ಮೋಟಾರ್ ಸೈಕಲ್ ಗಳು, ಸ್ಕೂಟರ್‌ಗಳು, ಯಮಹಾದ ಒರಿಜಿನಲ್ ಪರಿಕರಗಳು, ರೈಡಿಂಗ್ ಗೇರ್‌ಗಳನ್ನು ಇಲ್ಲಿ ಪಡೆಯಬಹುದು.