ಆಧುನಿಕ ಕನ್ನಡ ಸಾಹಿತ್ಯ ಹಾಗೂ ವಿಮರ್ಶೆ: ಜಿ.ಎಸ್. ಭಟ್ಟ ಸಂಪಾದಿತ ಕೃತಿ

KannadaprabhaNewsNetwork |  
Published : Mar 15, 2024, 01:19 AM ISTUpdated : Mar 15, 2024, 03:59 PM IST
30 | Kannada Prabha

ಸಾರಾಂಶ

ಜಿ.ಎಸ್‌. ಭಟ್ಟ ಅವರು ಆಧುನಿಕ ಕನ್ನಡ ಸಾಹಿತ್ಯ ಹಾಗೂ ವಿಮರ್ಶೆ ಕೃತಿಯನ್ನು ಸಂಪಾದಿಸಿದ್ದಾರೆ. ಪಿ. ಲಂಕೇಶರ ಅಕ್ಷರ ಹೊಸಕಾವ್ಯ ಕುರಿತು ಡಾ.ಜಿ.ಎಂ. ಹೆಗಡೆ, ಜಿ.ಎಚ್. ನಾಯಕ ಸಂಪಾದಿತ ಸಣ್ಣಕತೆಗಳು ಕುರಿತು ಡಾ.ಗೀತಾ ನಾವಲ್ ಅವಲೋಕಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಜಿ.ಎಸ್‌. ಭಟ್ಟ ಅವರು ಆಧುನಿಕ ಕನ್ನಡ ಸಾಹಿತ್ಯ ಹಾಗೂ ವಿಮರ್ಶೆ ಕೃತಿಯನ್ನು ಸಂಪಾದಿಸಿದ್ದಾರೆ. ಪಿ. ಲಂಕೇಶರ ಅಕ್ಷರ ಹೊಸಕಾವ್ಯ ಕುರಿತು ಡಾ.ಜಿ.ಎಂ. ಹೆಗಡೆ, ಜಿ.ಎಚ್. ನಾಯಕ ಸಂಪಾದಿತ ಸಣ್ಣಕತೆಗಳು ಕುರಿತು ಡಾ.ಗೀತಾ ನಾವಲ್ ಅವಲೋಕಿಸಿದ್ದಾರೆ. 

ಶಿವರಾಮ ಕಾರಂತರ ಚೋಮನದುಡಿ ಕಾದಂಬರಿಯನ್ನು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು ದಲಿತ ಚಿಂತನೆಯ ಪಲ್ಲವಿ ಎಂದಿದ್ದಾರೆ.

ಯಶವಂತ ಚಿತ್ತಾಲರ ಮೂರು ದಾರಿಗಳು ಕುರಿತು ಶ್ರೀರಂಗ ಅವರು ಹೆಮ್ಮೆಯ ಮೊದಲ ಹೆಜ್ಜೆ ಎಂದರೇ ಇದೇ ಕೃತಿಯನ್ನು ಕುರಿತು ಟಿ.ಪಿ. ಅಶೋಕ ಅವರು ಮಧ್ಯಮವರ್ಗದ ಸಂಸ್ಕೃತಿಯ ಪ್ರತಿಬಿಂಬ ಎಂದು ವ್ಯಾಖ್ಯಾನಿಸಿದ್ದಾರೆ.

ದೇವನೂರ ಮಹಾದೇವರ ಕುಸುಮಬಾಲೆ ಕುರಿತು ರಾಜೇಂದ್ರ ಚೆನ್ನಿ, ಸಂಸರ ವಿಗಡ ವಿಕ್ರಮರಾಯ ನಾಟಕ ಕುರಿತು ಜಿ.ಪಿ. ರಾಜರತ್ನಂ ವಿಮರ್ಶಿಸಿದ್ದಾರೆ. 

ಪಿ. ಲಂಕೇಶರ ಗುಣಮುಖ ನಾಟಕ ಎಲ್ಲಾ ಕಾಲಕ್ಕೂ ಪ್ರಸ್ತುತ ಎಂಬುದು ಎಂ.ಕೆ. ದಿವ್ಯಜ್ಯೋತಿ ಅವರ ಅಭಿಮತ. ಚಂದ್ರಶೇಖರ ಕಂಬಾರರ ಶಿವರಾತ್ರಿ ನಾಟಕ ಕುರಿತು ಎಸ್.ಆರ್‌. ವಿಜಯಶಂಕರ ಅವರು ವಚನ ಚಳವಳಿಯ ಜೊತೆಗಿನ ಅನುಸಂಧಾನ ಎಂದು ಬಣ್ಣಿಸಿದ್ದಾರೆ.

ಎಚ್. ನರಸಿಂಹಯ್ಯ ಅವರ ತೆರೆದ ಮನೆ ಆತ್ಮಕಥೆ ಕುರಿತು ಡಾ.ಜಿ.ಆನಂದ, ಓ.ಎಲ್. ನಾಗಭೂಷಣ ಸ್ವಾಮಿ ಅವರ ನನ್ನ ಹಿಮಾಲಯ ಪ್ರವಾಸ ಕಥನ ಕುರಿತು ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ವಿಮರ್ಶಿಸಿದ್ದಾರೆ. 

ಎಂ. ಚಿದಾನಂದಮೂರ್ತಿ ಅವರ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಕನ್ನಡ ವಿದ್ವತ್ತಿನ ಶಿಖರಪ್ರಾಯ ಎಂದು ಡಾ.ಜಿ.ಎಂ. ಹೆಗಡೆ ಬಣ್ಣಿಸಿದ್ದಾರೆ.

ಜೀ.ಶಂ. ಪರಮಶಿವಯ್ಯ ಅವರ ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳು ಕುರಿತು ಡಾ.ಬಿ.ಎಸ್.ಸ್ವಾಮಿ, ಕೆರೆಗೆ ಹಾರ ಕುರಿತು ತೀ.ನಂ. ಶ್ರೀಕಂಠಯ್ಯ, ಸಂಸ್ಕೃತಿ ಕಹಳೆಗೆ ನಾಂದಿ ಕುರಿತು ಕುವೆಂಪು, ಸಾಹಿತ್ಯದಲ್ಲಿ ಬ್ರಾಹ್ಮಣ ಮತ್ತು ಶೂದ್ರ ಕುರಿತು ಯು.ಆರ್. ಅನಂತಮೂರ್ತಿ, ಜನಪದ ಮತ್ತು ಆಧುನಿಕ ಸಾಹಿತ್ಯ ಕುರಿತು ಕಿ.ರಂ. ನಾಗರಾಜ, ಸ್ತ್ರೀವಾದ ಮತ್ತು ಸ್ತ್ರೀವಾದಿ ವಿಮರ್ಶೆ ಕುರಿತು ಡಾ.ವಿಜಯಾ ದಬ್ಬೆ, ವಾಗ್ವಾದ ಮತ್ತು ಸಂವಾದ ಮತ್ತು ಆತ್ಮಕಥನ ಕುರಿತು ಡಾ. ಬಸವರಾಜ ಕಲ್ಗುಡಿ ಅವರು ವಿಮರ್ಶಾತ್ಮಕ ಲೇಖನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಈ ಕೃತಿಯನ್ನು ತನು ಮನು ಪ್ರಕಾಶನ ಪ್ರಕಟಿಸಿದೆ. ಆಸಕ್ತರು ಜಿ.ಎಸ್. ಭಟ್ಟ, ಮೊ. 94483 54541 ಸಂಪರ್ಕಿಸಬಹುದು.

PREV

Recommended Stories

ತಾತ ನೆಟ್ಟ ಕರದಂಟಿನ ಗಿಡವನು ಆಲದ ಮರವಾಗಿ ಬೆಳೆಸಿದ ಮೊಮ್ಮಗ
ಬೆರಳ ತುದಿಗೆ ರೆಕಾರ್ಡ್‌ ರೂಮ್‌ ತಲುಪಿಸುವ ‘ಭೂ ಸುರಕ್ಷಾ’ ಯೋಜನೆಗೆ ಸಚಿವ ಕೃಷ್ಣ ಬೈರೇಗೌಡ ಚಾಲನೆ