₹99,999ಕ್ಕೆ ಒಬೆನ್ ರೋರ್ ಇವೋ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

KannadaprabhaNewsNetwork |  
Published : May 12, 2026, 03:15 AM IST
Oben

ಸಾರಾಂಶ

ಒಬೆನ್‌ ಸಂಸ್ಥೆಯು ತನ್ನ ಮಹತ್ವಾಕಾಂಕ್ಷೆಯ ರೋರ್ ಇವೋ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. ಈ ಕುರಿತ ಮಾಹಿತಿ ಇಲ್ಲಿದೆ. ಆಧುನಿಕ ವಿನ್ಯಾಸ ಮತ್ತು ಅತ್ಯಾಧುನಿಕ ಎಐ ತಂತ್ರಜ್ಞಾನ ಹೊಂದಿರುವ ಈ ಬೈಕ್ ಅನ್ನು ಮೊದಲ 10,000 ಗ್ರಾಹಕರಿಗೆ ₹99,999ರ ವಿಶೇಷ ಪರಿಚಯಾತ್ಮಕ ಬೆಲೆಯಲ್ಲಿ ನೀಡಲಾಗುತ್ತಿದೆ.

 ಬೆಂಗಳೂರು: ಭಾರತದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆಯಾದ ಒಬೆನ್ ಎಲೆಕ್ಟ್ರಿಕ್ ತನ್ನ ಬಹುನಿರೀಕ್ಷಿತ ರೋರ್ ಇವೋ ಎಲೆಕ್ಟ್ರಿಕ್ ಮೋಟಾರ್‌ ಸೈಕಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಆಧುನಿಕ ವಿನ್ಯಾಸ ಮತ್ತು ಅತ್ಯಾಧುನಿಕ ಎಐ ತಂತ್ರಜ್ಞಾನ ಹೊಂದಿರುವ ಈ ಬೈಕ್ ಅನ್ನು ಮೊದಲ 10,000 ಗ್ರಾಹಕರಿಗೆ ₹99,999ರ (ಎಕ್ಸ್ ಶೋರೂಮ್) ವಿಶೇಷ ಪರಿಚಯಾತ್ಮಕ ಬೆಲೆಯಲ್ಲಿ ನೀಡಲಾಗುತ್ತಿದೆ.

ಸ್ಮಾರ್ಟ್‌ಐಕ್ಯೂ ಫೀಚರ್

ಈ ಮೋಟಾರ್‌ಸೈಕಲ್‌ನ ಪ್ರಮುಖ ಆಕರ್ಷಣೆಯೇ ಸ್ಮಾರ್ಟ್‌ಐಕ್ಯೂ ಫೀಚರ್. ಇದು ಒಬೆನ್ ಸಂಸ್ಥೆಯ ಹೊಸ ಎಐ ರೈಡ್ ಮೋಡ್ ಆಗಿದ್ದು, ಸವಾರನ ಚಾಲನಾ ಶೈಲಿಯನ್ನು ವಿಶ್ಲೇಷಿಸಿ ಬ್ಯಾಟರಿ ದಕ್ಷತೆಯನ್ನು ಹೆಚ್ಚಿಸುತ್ತದೆ. ಈ ತಂತ್ರಜ್ಞಾನದಿಂದಾಗಿ ಬೈಕ್‌ನ ರೇಂಜ್‌ನಲ್ಲಿ ಶೇ. 15 ರಷ್ಟು ಏರಿಕೆಯಾಗಲಿದೆ ಎಂದು ಕಂಪನಿ ತಿಳಿಸಿದೆ.

ರೋರ್ ಇವೋ ಕೇವಲ 3 ಸೆಕೆಂಡುಗಳಲ್ಲಿ ಸೊನ್ನೆಯಿಂದ 40 ಕಿ.ಮೀ ವೇಗವನ್ನು ಪಡೆಯುವ ಸಾಮರ್ಥ್ಯ ಹೊಂದಿದೆ. ಗಂಟೆಗೆ ಗರಿಷ್ಠ 110 ಕಿ.ಮೀ ವೇಗ ತಲುಪಬಲ್ಲ ಈ ಬೈಕ್, ಒಂದು ಬಾರಿ ಚಾರ್ಜ್ ಮಾಡಿದರೆ 180 ಕಿ.ಮೀ (ಐಡಿಸಿ) ರೇಂಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಇದರಲ್ಲಿರುವ 9 ಕೆಡಬ್ಲ್ಯೂ ಮೋಟಾರ್ ಮತ್ತು ಎಲ್ ಎಫ್ ಪಿ ಬ್ಯಾಟರಿ ತಂತ್ರಜ್ಞಾನವು ದೀರ್ಘಕಾಲದ ಬಾಳಿಕೆ ಮತ್ತು ಸುರಕ್ಷತೆಯನ್ನು ಒದಗಿಸುತ್ತದೆ. ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ 90 ನಿಮಿಷಗಳಲ್ಲಿ ಶೇ. 80ರಷ್ಟು ಚಾರ್ಜ್ ಮಾಡಬಹುದಾಗಿದೆ.

10 ಲೀಟರ್ ಸ್ಟೋರೇಜ್ ಸೌಲಭ್ಯ

ಮೋಟಾರ್‌ಸೈಕಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಬೈಕ್‌ನಲ್ಲಿ 10 ಲೀಟರ್ ಸ್ಟೋರೇಜ್ ಸೌಲಭ್ಯ ನೀಡಲಾಗಿದೆ. ತನ್ನ ವಿಭಾಗದಲ್ಲೇ ಅತಿ ಉದ್ದವಾದ 680 ಮಿಮೀ ಸೀಟನ್ನು ಇದು ಹೊಂದಿದೆ. ಬೈಕ್ ಕೆಳಗೆ ಬಿದ್ದಾಗ ಎಚ್ಚರಿಕೆ ನೀಡುವ ಫಾಲ್ ಅಲರ್ಟ್ ಮತ್ತು ರಿವರ್ಸ್ ಮೋಡ್ ಸೌಲಭ್ಯವಿದೆ. 5-ಇಂಚಿನ ಕಲರ್ ಟಿಎಫ್‌ಟಿ ಡಿಸ್‌ಪ್ಲೇ ಮೂಲಕ ನ್ಯಾವಿಗೇಷನ್ ಮತ್ತು ರೈಡ್ ಡೇಟಾ ವೀಕ್ಷಿಸಬಹುದು.

‘ಭಾರತದಲ್ಲಿ ಎಲೆಕ್ಟ್ರಿಕ್ ಮೋಟಾರ್‌ಸೈಕ್ಲಿಂಗ್ ಈಗ ಹೊಸ ಹಂತಕ್ಕೆ ತಲುಪಿದೆ. ಸವಾರರ ದೈನಂದಿನ ಎಲ್ಲಾ ಅಗತ್ಯಗಳನ್ನು ಪೂರೈಸುವಂತೆ ರೋರ್ ಇವೋ ಅನ್ನು ವಿನ್ಯಾಸಗೊಳಿಸಲಾಗಿದೆ’ ಎಂದು ಒಬೆನ್ ಎಲೆಕ್ಟ್ರಿಕ್‌ನ ಸ್ಥಾಪಕಿ ಮತ್ತು ಸಿಇಒ ಮಧುಮಿತಾ ಅಗರವಾಲ್ ತಿಳಿಸಿದ್ದಾರೆ.

ಗ್ರಾಹಕರು ಕೇವಲ ₹777 ಪಾವತಿಸಿ ಅಧಿಕೃತ ವೆಬ್‌ಸೈಟ್ ಮೂಲಕ ಬೈಕ್ ಬುಕ್ ಮಾಡಬಹುದು. ಜೂನ್ 2026 ರಿಂದ ದೇಶದ 150 ಶೋರೂಮ್‌ಗಳಲ್ಲಿ ಟೆಸ್ಟ್ ರೈಡ್ ಮತ್ತು ವಿತರಣೆಗಳು ಆರಂಭವಾಗಲಿವೆ. ಆರಂಭಿಕ ಆಫರ್ ಮುಗಿದ ನಂತರ ಈ ಬೈಕ್‌ನ ಬೆಲೆ ₹1,24,999 ಆಗಿರಲಿದೆ.

PREV
Read more Articles on

Recommended Stories

ವನ ವೈಭವ : ದೇಶದಲ್ಲೇ ಮೊದಲ ಅರಣ್ಯ ಶ್ವಾನಪಡೆ ಕರ್ನಾಟಕದಲ್ಲಿ
ವನವೈಭವ - ಕರ್ನಾಟಕದ ಅರಣ್ಯಗಳು ಔಷಧೀಯ ಸಸ್ಯಗಳ ಕಣಜ