;Resize=(412,232))
ಜೈಪುರ: ರಾಜಸ್ಥಾನದ ಪಂಚಾಯಿತಿ ಸಮಿತಿ ಹಾಗೂ ಜಿಲ್ಲಾ ಪರಿಷತ್ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿಗಿಂತ ಕಾಂಗ್ರೆಸ್ ಭಾರಿ ಮುನ್ನಡೆ ಸಾಧಿಸಿದೆ.
ಶುಕ್ರವಾರ ಸಂಜೆವರೆಗಿನ ಫಲಿತಾಂಶಗಳಲ್ಲಿ ಪಂಚಾಯಿತಿ ಸಮಿತಿಯ 2,463 ಹಾಗೂ ಜಿಲ್ಲಾ ಪರಿಷತ್‌ನ 66 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಬಿಜೆಪಿ, ಪಂಚಾಯಿತಿ ಸಮಿತಿಯ 1,512 ಹಾಗೂ ಜಿಲ್ಲಾ ಪರಿಷತ್‌ನ ಕೇವಲ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಒಟ್ಟು 41 ಜಿಲ್ಲೆಯ 457 ಪಂಚಾಯಿತಿ ಸಮಿತಿಗಳ 8,245 ವಾರ್ಡ್ ಹಾಗೂ 1,403 ಜಿಲ್ಲಾ ಪರಿಷತ್ ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. ಸದ್ಯ 37 ಜಿಲ್ಲೆಗಳಲ್ಲಿ 7,543 ಪಂಚಾಯಿತಿ ಸಮಿತಿ ಹಾಗೂ 1,275 ಜಿಲ್ಲಾ ಪರಿಷತ್ ಸ್ಥಾನಗಳಿಗೆ ಮತ ಎಣಿಕೆ ನಡೆಯುತ್ತಿದ್ದು, ಉಳಿದ ಜಿಲ್ಲೆಗಳಲ್ಲಿ ಡಿ.17ರಂದು ಮತ ಎಣಿಕೆ ನಡೆಯಲಿದೆ.