ಬೆಂಗಳೂರು ಮೂಲದ ಟಿಮ್‌ಬಕ್‌ಡೂ ಕನ್ಸ್ಯೂಮರ್ ಟೆಕ್ ಸಂಸ್ಥೆಗೆ ನಟ ಪ್ರತೀಕ್ ಗಾಂಧಿ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಮನೆ ಮತ್ತು ಕಚೇರಿಗಳ ದೈನಂದಿನ ಕೆಲಸಗಳಿಗೆ ಕಾಲೇಜು ವಿದ್ಯಾರ್ಥಿಗಳ ಸ್ಟ್ರೀಟ್ ಸ್ಮಾರ್ಟ್ ಸೇವೆ ಒದಗಿಸುವ ಈ ವಿನೂತನ ಆ್ಯಪ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಕನ್ನಡಪ್ರಭವಾರ್ತೆ ಬೆಂಗಳೂರು:

ಮನೆ ಮತ್ತು ವ್ಯಾಪಾರ ಸಂಸ್ಥೆಗಳ ದೈನಂದಿನ ಕೆಲಸಗಳನ್ನು ಸುಲಭಗೊಳಿಸುವ ಬೆಂಗಳೂರು ಮೂಲದ ‘ಟಿಮ್‌ಬಕ್‌ಡೂ’ ಕನ್ಸ್ಯೂಮರ್ ಟೆಕ್ ಸಂಸ್ಥೆಗೆ ಖ್ಯಾತ ನಟ ಪ್ರತೀಕ್ ಗಾಂಧಿ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಸಂಸ್ಥೆಯಲ್ಲಿ ಅವರು ‘ಚೀಫ್ ಬ್ರೋ ಆಫೀಸರ್’ ಎಂಬ ವಿಶೇಷ ಹುದ್ದೆಯನ್ನೂ ನಿಭಾಯಿಸುತ್ತಿದ್ದಾರೆ.ಗ್ರಾಹಕರು ಮತ್ತು ಉದ್ಯಮಗಳು ತಮ್ಮ ಅಗತ್ಯ ಕೆಲಸಗಳನ್ನು ಒಂದೇ ಆ್ಯಪ್‌ನಲ್ಲಿ ಬುಕ್ ಮಾಡಲು, ಕೆಲಸದ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಹಾಗೂ ಪಾವತಿ ಮಾಡಲು ಈ ವೇದಿಕೆ ಅವಕಾಶ ಕಲ್ಪಿಸಿದೆ. ಕೇವಲ ಗ್ರಾಹಕರು ಮತ್ತು ಕೆಲಸಗಾರರ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ಇತರೆ ಆ್ಯಪ್‌ಗಳಿಗಿಂತ ಭಿನ್ನವಾಗಿ ಟಿಮ್‌ಬಕ್‌ಡೂ ಸಂಪೂರ್ಣ ‘ಮ್ಯಾನೇಜ್ಡ್ ಸರ್ವಿಸ್’ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಕೆಲಸ ಬುಕ್ ಮಾಡಿದಾಗಿನಿಂದ ಅದು ಪೂರ್ಣಗೊಳ್ಳುವವರೆಗಿನ ಸಂಪೂರ್ಣ ಜವಾಬ್ದಾರಿ ಮತ್ತು ಸೇವೆಯ ಗುಣಮಟ್ಟವನ್ನು ಸಂಸ್ಥೆಯೇ ಖಾತರಿಪಡಿಸುತ್ತದೆ.ಸಂಸ್ಥೆಯು ರೂಪಿಸುತ್ತಿರುವ ‘ನ್ಯೂ ಕಾಲರ್’ ಸೇವಾ ವಿಭಾಗದಡಿ ಮನೆ ಹಾಗೂ ಕಚೇರಿಗಳ ದೈನಂದಿನ ಕೆಲಸಗಳನ್ನು ವಿದ್ಯಾವಂತ ಕಾಲೇಜು ವಿದ್ಯಾರ್ಥಿಗಳು ನಿರ್ವಹಿಸುತ್ತಾರೆ. ಈ ವೇದಿಕೆಯಲ್ಲಿ ‘ಪ್ರೊ’ ಎಂದು ಗುರುತಿಸಲ್ಪಡುವ ವಿದ್ಯಾರ್ಥಿಗಳನ್ನು ಸೇವೆಗೆ ಸೇರ್ಪಡೆಗೊಳಿಸುವ ಮುನ್ನ ಡಿಜಿಲಾಕರ್ ಆಧಾರಿತ ಕೆವೈಸಿ ಪರಿಶೀಲನೆ, ವಿಶೇಷ ತರಬೇತಿ ಹಾಗೂ ಗುಣಮಟ್ಟದ ಪರೀಕ್ಷೆಗೆ ಒಳಪಡಿಸುವುದು ಕಡ್ಡಾಯವಾಗಿದೆ. ಇದರಿಂದ ಗ್ರಾಹಕರಿಗೆ ವಿಶ್ವಾಸಾರ್ಹ ಸೇವೆ ಸಿಗುವುದರ ಜೊತೆಗೆ ಕಾಲೇಜು ವಿದ್ಯಾರ್ಥಿಗಳಿಗೂ ಉತ್ತಮ ಅವಕಾಶ ದೊರೆಯುತ್ತಿದೆ.ಸಮಯಪ್ರಜ್ಞೆ, ಸಮರ್ಥತೆ, ಚಾಕಚಕ್ಯತೆ ಹಾಗೂ ಯಾವುದೇ ದೈನಂದಿನ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಸಿದ್ಧತೆ ಹೊಂದಿರುವ ಈ ವಿದ್ಯಾರ್ಥಿಗಳನ್ನು ‘ಸ್ಟ್ರೀಟ್ ಸ್ಮಾರ್ಟ್’ ಎಂದು ಕರೆಯಲಾಗುತ್ತದೆ. ‘ಯಾವುದೇ ಕೆಲಸಕ್ಕೂ ಸ್ಟ್ರೀಟ್ ಸ್ಮಾರ್ಟ್ ಪ್ರೊ ಅವರನ್ನು ನೇಮಿಸಿಕೊಳ್ಳಿ’ ಎಂಬ ಸಂದೇಶ ಹಾಗೂ ‘ವಿ ಡೂ ದ್ಯಾಟ್ ಟೂ’ ಎಂಬ ಪ್ರಮುಖ ಟ್ಯಾಗ್‌ಲೈನ್‌ನೊಂದಿಗೆ ಸಂಸ್ಥೆಯು ಗ್ರಾಹಕರನ್ನು ತಲುಪುತ್ತಿದೆ.