ಸ್ವಿಗ್ಗಿ-ಝೊಮೆಟೋ ಬಂದ್ಮೇಲೆ ಜನ ಅಡಿಗೆ ಮಾಡ್ತಿಲ್ಲ!

Published : Nov 02, 2026, 11:50 AM IST
Swiggy Zomato

ಸಾರಾಂಶ

ಈಗ ಮನುಷ್ಯ ಯೋಚನೆ ಮಾಡುವುದನ್ನು ನಿಲ್ಲಿಸುತ್ತಿದ್ದಾನೆ. ಇದರಿಂದ ಮೂರ್ಖನಾಗುತ್ತಿದ್ದಾನೆ. ಜನ ಹೆಚ್ಚು ಮೂರ್ಖರಾದಷ್ಟು ಎಐಗೇ ಲಾಭ. ಯೋಚನೆ ಮಾಡಿದ್ದರಿಂದಲೇ ಮನುಷ್ಯ ವಿಜ್ಞಾನಿ, ಸಾಧು-ಸಂತರು, ಮಹಾಕವಿಗಳಾಗಿ ಬದಲಾದರು. ದುರುದೃಷ್ಟವಶಾತ್‌ ಎಐ ಪರಿಣಾಮ ಇಂದು ಮನುಷ್ಯ ಯೋಚನೆ ಮಾಡುವುದನ್ನೇ ಮರೆಯುತ್ತಿದ್ದಾನೆ. ಎಲ್ಲಾ ಸಣ್ಣ-ಪುಟ್ಟ ವಿಷಯ-ಕೆಲಸಗಳಿಗೂ ಎಐ ಮೊರೆ ಹೋಗುತ್ತಿದ್ದಾನೆ.

ಝೊಮೆಟೋ-ಸ್ವಿಗ್ಗಿ ಆ್ಯಪ್‌ಗಳು ಬಂದು ಮನೆಯಲ್ಲಿ ಅಡುಗೆ ಮಾಡುವುದನ್ನೇ ನಿಲ್ಲಿಸಿತು. ಓಲಾ-ಉಬರ್‌ ಜನ ನಡೆದಾಡುವುದನ್ನೇ ನಿಲ್ಲಿಸಿತು. ಟ್ಯಾಬ್‌, ಮೊಬೈಲ್‌ ಬಂದು ಜನ ಸೋಫಾದಿಂದ ಮೇಲೇಳದಂತೆ ಮಾಡಿತು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಂದು ಜನ ಯೋಚನೆ ಮಾಡುವುದನ್ನೇ ನಿಲ್ಲಿಸಿ, ಮೂರ್ಖರನ್ನಾಗಿ ಮಾಡಿತು...!

ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಾಧೀಶರು ಪ್ರಸ್ತುತ ಜನರ ಬದುಕನ್ನು ವಿಡಂಬನಾತ್ಮಕವಾಗಿ ಹೇಳಿದಾಗ ನಕ್ಕವರು ಬಹಳಷ್ಟು ಮಂದಿಯಾದರೆ, ಹೌದೆಂದು ತಲೆಯಾಡಿಸಿದವರು ಕೆಲವೇ ಮಂದಿ.

ವಿಚಾರಣೆ ವೇಳೆ ಕೃತಕ ಬುದ್ಧಿಮತ್ತೆ ವಿಚಾರ ಪ್ರಸ್ತಾಪಗೊಂಡಾಗ ನ್ಯಾಯಾಧೀಶರು, ಚಾಟ್‌ ಜಿಟಿಪಿ ಎಂಬುದು ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್. ಅಂದರೆ ತಾನು ಇಂಟೆಲಿಜೆಂಟ್‌ ಅಲ್ಲ ಅಂತ ಅದೇ ಹೇಳುತ್ತಿದೆ. ಎಐ ಕೇವಲ ಮನುಷ್ಯರ ಜಿಜ್ಞಾಸೆಗಳಿಗೆ, ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಶೇಖರಿಸಿಟ್ಟಿರುವ ಅಪಾರ ಪ್ರಮಾಣದ ಡಾಟಾ ಉಪಯೋಗಿಸಿಕೊಂಡು ಜನ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಸ್ವಂತವಾಗಿ ಯೋಚಿಸುವುದಿಲ್ಲ.

ವಿಪರ್ಯಾಸವೆಂದರೆ ಕಂಪ್ಯೂಟರ್‌-ಮೊಬೈಲ್‌ ಇಲ್ಲ ಎಂದರೆ ಮನುಷ್ಯ ಏನೂ ಕೆಲಸ ಮಾಡಲು ಸಾಧ್ಯವಿಲ್ಲದಂಥ ಸ್ಥಿತಿ ಈಗ ಉದ್ಭವಿಸಿದೆ. ಮುಂದೊಂದು ದಿನ 2+2 ಎಂದರೆ ಎಷ್ಟು ಎಂದು ತಿಳಿಯಲು ಮನುಷ್ಯ ಎಐ ಅನ್ನೇ ಕೇಳುವ ದಿನ ಬಂದರೂ ವಿಶೇಷವೇನಿಲ್ಲ ಎಂದರು.

ಈಗ ಮನುಷ್ಯ ಯೋಚನೆ ಮಾಡುವುದನ್ನು ನಿಲ್ಲಿಸುತ್ತಿದ್ದಾನೆ. ಇದರಿಂದ ಮೂರ್ಖನಾಗುತ್ತಿದ್ದಾನೆ. ಜನ ಹೆಚ್ಚು ಮೂರ್ಖರಾದಷ್ಟು ಎಐಗೇ ಲಾಭ. ಯೋಚನೆ ಮಾಡಿದ್ದರಿಂದಲೇ ಮನುಷ್ಯ ವಿಜ್ಞಾನಿ, ಸಾಧು-ಸಂತರು, ಮಹಾಕವಿಗಳಾಗಿ ಬದಲಾದರು. ದುರುದೃಷ್ಟವಶಾತ್‌ ಎಐ ಪರಿಣಾಮ ಇಂದು ಮನುಷ್ಯ ಯೋಚನೆ ಮಾಡುವುದನ್ನೇ ಮರೆಯುತ್ತಿದ್ದಾನೆ. ಎಲ್ಲಾ ಸಣ್ಣ-ಪುಟ್ಟ ವಿಷಯ-ಕೆಲಸಗಳಿಗೂ ಎಐ ಮೊರೆ ಹೋಗುತ್ತಿದ್ದಾನೆ.

ಝೊಮೆಟೋ-ಸ್ವಿಗ್ಗಿ ಮನೆಯಲ್ಲಿ ಅಡುಗೆ ಮಾಡುವುದನ್ನು ನಿಲ್ಲಿಸಿದರೆ; ಓಲಾ-ಉಬರ್‌ ಜನ ನಡೆದುಕೊಂಡು ಹೋಗುವುದನ್ನು ನಿಲ್ಲಿಸಿತು. ಟ್ಯಾಬ್‌-ಮೊಬೈಲ್‌ ಜನರನ್ನು ಸೋಫಾದಿಂದ ಮೇಲೇಳದಂತೆ ಮಾಡಿತು. ಎಐ ಯೋಚನೆ ಮಾಡುವುದನ್ನೇ ನಿಲ್ಲಿಸಿ, ಮನುಷ್ಯನನ್ನು ಮೂರ್ಖರನ್ನಾಗಿ ಮಾಡಿದೆ ಎಂದು ಹೇಳುತ್ತಿದ್ದಂತೆ ನ್ಯಾಯಾಲಯದ ಹಾಲ್‌ನಲ್ಲಿ ನಗು ತುಂಬಿತು.

ಪೆನ್‌ ಡ್ರೈವ್‌ ಪ್ಲೇ ಮಾಡಿದರೆ ಬರೀ ಗುಶ್‌... ಗುಶ್‌...

ಪತ್ರಿಕಾಗೋಷ್ಠಿ ಕರೆದು, ಎಲ್ಲ ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸಿ ಜೇಬಿನಿಂದ ಪೆನ್‌ಡ್ರೈವ್‌ ತೆಗೆದು ತೋರಿಸ್ತಾರೆ. ಆ ಪೆನ್‌ ಡ್ರೈವ್‌ ಪ್ಲೇ ಮಾಡಿದರೆ ಬರೀ ಗುಶ್‌ ಗುಶ್‌...!

ಪೆನ್‌ ಡ್ರೈವ್‌ ಆರ್ಭಟ ಜೋರಾಗಿರುವ ಈ ಹೊತ್ತಿನಲ್ಲಿ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಾಧೀಶರು, ಬಿಳಿಕಲ್ಲಿನ ಬಿಲ್ಡಿಂಗ್‌ (ವಿಧಾನಸೌಧ)ನ ಕೆಲವರು ಮಾಧ್ಯಮ ಪ್ರತಿನಿಧಿಗಳನ್ನು ಕರೆಸಿ, ಜೇಬಿನಿಂದ ಪೆನ್‌ಡ್ರೈವ್‌ ತೆಗೆದು ತೋರಿಸಿದ್ದರು. ಆ ಪೆನ್‌ಡ್ರೈವ್‌ ಪ್ಲೇ ಮಾಡಿದರೆ ಬರೀ ಗುಶ್‌ ಗುಶ್‌ ಗುಶ್‌... ಅಷ್ಟೇ ಇರುತ್ತಿತ್ತು. ಪೊಲೀಸರು ಸಲ್ಲಿಸಿದ್ದ ಪೆನ್‌ಡ್ರೈವ್‌ನಲ್ಲೂ ಬರೀ ಗುಶ್‌ ಗುಶ್‌... ಇರುತ್ತದೆ ಎಂದಾಗ ಗೊಳ್ಳೆಂದು ನಗುವ ಸರದಿ ಕೋರ್ಟ್‌ ಹಾಲ್‌ನಲ್ಲಿದ್ದವರದ್ದಾಗಿತ್ತು.

ಡಿಜಿಟಲ್‌ ಸಾಕ್ಷ್ಯ ಸಂಗ್ರಹ ಹಾಗೂ ಕೋರ್ಟ್‌ಗೆ ಹಾಜರುಪಡಿಸುವಾಗ ಅನುಸರಿಸುವ ನಿಯಮಗಳ ಕುರಿತು ಪೊಲೀಸರಿಗೆ ಇದೇ ವೇಳೆ ಪಾಠ ಮಾಡಿದ ನ್ಯಾಯಾಧೀಶರು, ಡಿಜಿಟಲ್‌ ಸಾಕ್ಷ್ಯ ದಾಖಲಾಗಿರುವ ಕಂಪ್ಯೂಟರ್‌/ಮೈನ್‌ ಸಿಸ್ಟಂ ಅನ್ನು ಮೊದಲಿಗೆ ಮಹಜರು ಮಾಡಬೇಕು. ನಂತರ ಅಲ್ಲಿಂದ ಸಾಕ್ಷ್ಯವನ್ನು ಮೊಬೈಲ್‌ಗೆ ಕಾಪಿ ಮಾಡಬೇಕು. ಆಗ ಆ ಮೊಬೈಲ್‌ ಅನ್ನು ಮಹಜರು ಮಾಡಬೇಕು. ಮೊಬೈಲ್‌ನಿಂದ ಪೆನ್‌ಡ್ರೈವ್‌ಗೆ ಕಾಪಿ ಮಾಡಿ, ಮಹಜರು ಮಾಡಬೇಕು. ನಂತರ ಆ ಪೆನ್‌ ಡ್ರೈವ್‌ ಅನ್ನು ಕೋರ್ಟ್‌ಗೆ ಹಾಜಪಡಿಸಬೇಕು. ಆಗಷ್ಟೇ ಡಿಜಿಟಲ್‌ ಸಾಕ್ಷ್ಯ ಪರಿಗಣಿಸಲ್ಪಡುತ್ತದೆ. ಮೈನ್‌ ಸಿಸ್ಟಮ್‌ನಲ್ಲಿ ಡಾಟಾ ನಿಯಮಿತ ಸಮಯದವರೆಗೆ ಮಾತ್ರ ಸಂಗ್ರಹವಾಗಿರುತ್ತದೆ. ಆ ಕಾಲಮಿತಿ ಮುಗಿದರೆ ಡಾಟಾ ಅಳಸಿ ಹೋಗುತ್ತದೆ. ಅದನ್ನು ಮೊಬೈಲ್‌ಗೆ ಕಾಪಿ ಮಾಡಿದ ನಂತರ ಡಾಟಾ ಅಳಿಸಿ ಹೋಗುತ್ತದೆ. ಪೆನ್‌ಡ್ರೈವ್‌ನಲ್ಲಿ ಮಾತ್ರ ಸಾಕ್ಷ್ಯ ಉಳಿಯುತ್ತದೆ ಎಂದು ವಿವರಿಸಿದರು.

ಈ ಹಿಂದೆ ನಮ್ಮ ಬಿಲ್ಡಿಂಗ್‌ ಹಿಂದಿರೋ ಬಿಳಿಕಲ್ಲಿನ ಬಿಲ್ಡಿಂಗ್‌ (ವಿಧಾನಸೌಧ)ನ ಕೆಲವರು ಕುಳಿತು, ಮಾಧ್ಯಮ ಪ್ರತಿನಿಧಿಗಳನ್ನು ಕರೆಸಿ, ಜೇಬಿನಿಂದ ಪೆನ್‌ಡ್ರೈವ್‌ ತೆಗೆದು ತೋರಿಸಿದ್ದರು. ಆ ಪೆನ್‌ಡ್ರೈವ್‌ ಪ್ಲೇ ಮಾಡಿದರೆ ಅದರಲ್ಲಿ ಏನೂ ಇರುತ್ತಿರಲಿಲ್ಲ. ಬರೀ ಗುಶ್‌ ಗುಶ್‌ ಗುಶ್‌... ಅಷ್ಟೇ ಇರುತ್ತಿತ್ತು. ಆ ರೀತಿಯ ಕನಿಷ್ಠ 10 ಪೆನ್‌ಡ್ರೈವ್‌ಗಳನ್ನು ನನ್ನ ಸೇವಾವಧಿಯಲ್ಲಿ ನೋಡಿದ್ದೇನೆ. ಪೊಲೀಸರು ಸಲ್ಲಿಸಿದ್ದ ಪೆನ್‌ಡ್ರೈವ್‌ನಲ್ಲೂ ಬರೀ ಗುಶ್‌ ಗುಶ್‌... ಸತ್ಯ ಬಹಿರಂಗಪಡಿಸುತ್ತೇನೆ ಎಂದವರು ಪ್ರಾಮಾಣಿಕರಾಗಿದ್ದರೆ ಪೆನ್ ಡ್ರೈವ್‌ ನಲ್ಲಿ ಡಾಟಾ ಇಟ್ಟುಕೊಂಡಿರುತ್ತಾರೆ. ಅಪ್ರಾಮಾಣಿಕ ಬರೀ ಗುಶ್‌ ಗುಶ್‌ ಗುಶ್‌... ಇಟ್ಟಿರುತ್ತಾನೆ ಎಂದು ನ್ಯಾಯಾಧೀಶರು ಹೇಳಿದಾಗ ಕೋರ್ಟ್‌ ಹಾಲ್‌ನಲ್ಲಿದ್ದ ವಕೀಲರು, ಕಕ್ಷಿದಾರರು ಮತ್ತು ಸಿಬ್ಬಂದಿ ತಮಗೆ ಅನಿಸಿದಂತೆ ಕಲ್ಪಿಸಿಕೊಂಡು ನಕ್ಕರು.

-ವೆಂಕಟೇಶ್‌ ಕಲಿಪಿ

PREV
Read more Articles on

Recommended Stories

ದೇಶಕ್ಕೆ ಉತ್ತಮ ಆಡಳಿತ ಯಾಕೆ ಮುಖ್ಯ ?
ಲಂಡನ್ ಪ್ರವೇಶ: ಮುಳುಗದ ಸೂರ್ಯನ ಅಚ್ಚರಿ