ಕನ್ನಡ ಬರಲ್ಲವೆಂದು ಕನ್ನಡದಲ್ಲೇ ಸಭೆಗೆ ಉತ್ತರ ! - ಎಇಇ ಶ್ರೀಧರ್ ವಿನ್ನಾ ಹೇಳಿಕೆ ತಂದ ನಗು

Published : May 04, 2026, 01:26 PM IST
Reporters Dairy

ಸಾರಾಂಶ

ಆ ಅಧಿಕಾರಿ ಯೋಜನೆ ಕುರಿತು ಹಿಂದಿಯಲ್ಲಿ ವಿವರಣೆ ನೀಡಲು ಆರಂಭಿಸಿದರು. ತಕ್ಷಣ ಶಾಸಕರು ನಿಮಗೆ ಕನ್ನಡ ಬರುವುದಿಲ್ಲವೇ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಶ್ರೀಧರ ವಿನ್ನಾಕೋಟಾ ಅವರು ಕನ್ನಡ ಬರುವುದಿಲ್ಲ ಎಂದು ಕನ್ನಡ ಭಾಷೆಯಲ್ಲೇ ಪ್ರತಿಕ್ರಿಯಿಸುತ್ತಿದ್ದಂತೆ ಸಚಿವರು, ಶಾಸಕರು, ಅಧಿಕಾರಿ, ಸಿಬ್ಬಂದಿ ಗೊಳ್ಳೆಂದು ನಕ್ಕರು.

ಆ ಅಧಿಕಾರಿ ಯೋಜನೆ ಕುರಿತು ಹಿಂದಿಯಲ್ಲಿ ವಿವರಣೆ ನೀಡಲು ಆರಂಭಿಸಿದರು. ತಕ್ಷಣ ಶಾಸಕರು ನಿಮಗೆ ಕನ್ನಡ ಬರುವುದಿಲ್ಲವೇ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಶ್ರೀಧರ ವಿನ್ನಾಕೋಟಾ ಅವರು ಕನ್ನಡ ಬರುವುದಿಲ್ಲ ಎಂದು ಕನ್ನಡ ಭಾಷೆಯಲ್ಲೇ ಪ್ರತಿಕ್ರಿಯಿಸುತ್ತಿದ್ದಂತೆ ಸಚಿವರು, ಶಾಸಕರು, ಅಧಿಕಾರಿ, ಸಿಬ್ಬಂದಿ ಗೊಳ್ಳೆಂದು ನಕ್ಕರು.

ರಾಯಚೂರು ಜಿಲ್ಲಾಡಳಿತ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಮತ್ತು ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಇತ್ತೀಚೆಗೆ ಸಭೆ ಕೈಗೊಂಡಿದ್ದರು.

ಈ ವೇಳೆ ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ್‌ ಅವರು ಜಲಧಾರಾ ಯೋಜನೆಗೆ ಸಂಬಂಧಿಸಿದ ಮಾಹಿತಿ ಹಾಗೂ ಜಲಧಾರೆ ಯೋಜನೆಯಡಿ ಕೈಗೊಂಡ ಪ್ರಗತಿ ಪರಿಶೀಲನೆ ಕುರಿತು ಎಇಇ ಶ್ರೀಧರ್ ವಿನ್ನಾ ಕೂಟಾ ಅವರನ್ನು ವೇದಿಕೆ ಮುಂಭಾಗಕ್ಕೆ ಕರೆದು ಸಭೆಗೆ ಪ್ರಗತಿಯ ಮಾಹಿತಿ ನೀಡುವಂತೆ ಸೂಚಿಸಿದರು.

ಇದಕ್ಕೆ ಆ ಅಧಿಕಾರಿ ಯೋಜನೆ ಕುರಿತು ಹಿಂದಿಯಲ್ಲಿ ವಿವರಣೆ ನೀಡಲು ಆರಂಭಿಸಿದರು. ತಕ್ಷಣ ಶಾಸಕರು ನಿಮಗೆ ಕನ್ನಡ ಬರುವುದಿಲ್ಲವೇ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಶ್ರೀಧರ ವಿನ್ನಾಕೋಟಾ ಅವರು ಕನ್ನಡ ಬರುವುದಿಲ್ಲ ಎಂದು ಕನ್ನಡ ಭಾಷೆಯಲ್ಲೇ ಪ್ರತಿಕ್ರಿಯಿಸುತ್ತಿದ್ದಂತೆ ಸಚಿವರು, ಶಾಸಕರು, ಅಧಿಕಾರಿ, ಸಿಬ್ಬಂದಿ ಗೊಳ್ಳೆಂದು ನಕ್ಕರು.

ಈ ಸನ್ನಿವೇಶದಿಂದ ಕಕ್ಕಾಬಿಕ್ಕಿಯಾದ ಅಧಿಕಾರಿ ನನಗೆ ಕನ್ನಡದಲ್ಲಿ ವಿವರಣೆ ನೀಡಲು ಬರುವುದಿಲ್ಲ ಎಂದು ಹೇಳುವಷ್ಟು ಮಾತ್ರ ಕನ್ನಡ ಬರುತ್ತದೆ ಎಂದು ಹೇಳಿ ಹಿಂದಿಯಲ್ಲೇ ಮಾತು ಮುಂದುವರೆಸಿದರು.

ನಾರಾಯಣಸ್ವಾಮಿ ಅಲ್ಲ, ಚಲುವರಾಯಸ್ವಾಮಿ!

ಯಾರೇ ಹೊಸಬರನ್ನು ಭೇಟಿಯಾದಾಗ ಅವರ ಹೆಸರನ್ನು ನೆನಪಿಟ್ಟುಕೊಂಡು ಹೇಳುವುದು ಎಂತಹವರಿಗೂ ಕಷ್ಟವೇ. ಆದರೆ, ಹಾಗೆ ಭೇಟಿಯಾಗುವ ವ್ಯಕ್ತಿ ಸಚಿವ ಸ್ಥಾನದಂತಹ ಉನ್ನತ ಹುದ್ದೆಯಲ್ಲಿದ್ದರೆ? ಅಂಥವರ ಹೆಸರನ್ನು ಯಾವುದೇ ಕಾರಣಕ್ಕೂ ಮರೆಯುವುದಿಲ್ಲ. ಆದರೆ ಮಾಜಿ ಸಚಿವರೊಬ್ಬರ ಪುತ್ರರೂ ಆಗಿರುವ ಉದ್ಯಮಿಯೊಬ್ಬರು ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲಿದ್ದ ಏಕೈಕ ಸಚಿವರ ಹೆಸರನ್ನು ಬದಲಿಸಿ ವಿರೋಧ ಪಕ್ಷದವರ ಹೆಸರು ಹೇಳುವ ಮೂಲಕ ಕಾರ್ಯಕ್ರಮದ ಆಯೋಜಕರೂ ಸೇರಿ ಎಲ್ಲರನ್ನೂ ಒಂದು ಕ್ಷಣ ಅವಾಕ್ಕಾಗುವಂತೆ ಮಾಡಿದರು.

ವಿಷಯ ಏನೆಂದರೆ ರಾಜ್ಯದ ಪ್ರಮುಖ ಕೈಗಾರಿಕಾ ಸಂಸ್ಥೆಯಾದ ಎಫ್‌ಕೆಸಿಸಿಐನಿಂದ ಶುಕ್ರವಾರ ಅರಮನೆ ಮೈದಾನದಲ್ಲಿ ಗ್ಲೋಬಲ್ ಅಗ್ರಿಟೆಕ್ ಸಮ್ಮಿಟ್-2026 ಆಯೋಜಿಸಿತ್ತು. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆಯನ್ನೂ ನೀಡಿದರು. ಇನ್ನು ಕಾರ್ಯಕ್ರಮಕ್ಕೆ ಕೃಷಿ ಇಲಾಖೆ ಸಹಕಾರವನ್ನೂ ನೀಡಿತ್ತು. ಹೀಗಾಗಿ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರನ್ನು ಕಾರ್ಯಕ್ರಮದ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಅವರ ಜತೆಗೆ ಮುಖ್ಯ ಭಾಷಣಕಾರರಾಗಿ ಮಾಜಿ ಸಚಿವ ಮುರುಗೇಶ್‌ ನಿರಾಣಿ ಅವರ ಪುತ್ರ ಉದ್ಯಮಿ ವಿಜಯ್‌ ನಿರಾಣಿ ಅವರನ್ನೂ ಕರೆಯಲಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿಯೇ ದೇಶ ಮತ್ತು ರಾಜ್ಯದ ಕೃಷಿ ಕ್ಷೇತ್ರ, ಅದರ ಅಭಿವೃದ್ಧಿ ಕುರಿತಂತೆ ಮಾತನಾಡಲು ವಿಜಯ್‌ ನಿರಾಣಿ ಮುಂದಾದರು. ತಮ್ಮ ಭಾಷಣ ಆರಂಭದ ವೇಳೆ ಎಲ್ಲರನ್ನೂ ಸ್ವಾಗತಿಸಲಾರಂಭಿಸಿದರು. ಎಲ್ಲರ ಹೆಸರನ್ನು ಸರಿಯಾಗಿ ಹೇಳಿದ ವಿಜಯ್‌ ನಿರಾಣಿ, ಎನ್‌.ಚಲುವರಾಯಸ್ವಾಮಿ ಹೆಸರು ಹೇಳುವ ಬದಲು ಕೃಷಿ ಸಚಿವ ಛಲವಾದಿ ನಾರಾಯಣಸ್ವಾಮಿ ಅವರೂ ಆಗಮಿಸಿದ್ದಾರೆ. ಅವರಿಗೆ ವಂದನೆಗಳು ಎಂದರು.

ವಿಜಯ್‌ ನಿರಾಣಿ ಹಾಗೆ ಹೇಳುತ್ತಿದ್ದಂತೆ ಚಲುವರಾಯಸ್ವಾಮಿ ಆದಿಯಾಗಿ ಎಲ್ಲರೂ ಛಲವಾದಿ ನಾರಾಯಣಸ್ವಾಮಿ ಎಲ್ಲಿ ಬಂದಿದ್ದಾರೆ ಎಂದು ಹುಡುಕಲಾರಂಭಿಸಿದರು. ಅಲ್ಲದೆ, ವೇದಿಕೆ ಎದುರಿಗಿದ್ದ ಸಭಿಕರು ವಿರೋಧ ಪಕ್ಷದವರನ್ನು ಸಚಿವರನ್ನಾಗಿ ಮಾಡಿದ್ದಾರೆ ಎಂದು ನಗಲಾರಂಭಿಸಿದರು.

- ರಾಮಕೃಷ್ಣ ದಾಸರಿ

-ಗಿರೀಶ್‌ ಗರಗ

PREV
Read more Articles on

Recommended Stories

ಸಹೃದಯ ರಾಜಕಾರಣದ ಮೇರು ನಾಯಕ - ನನ್ನ ಗೆಲುವು, ಸಾಧನೆಯ ಹಿಂದಿನ ಶಕ್ತಿ
ವಾಣಿಜ್ಯ ಬಳಕೆಯ ಗ್ಯಾಸ್‌ ಬೆಲೆ 990 ರು. ಏರಿಕೆ ಬೆನ್ನಲ್ಲೇ ಶೀಘ್ರ ಹೋಟೆಲ್‌ ತಿನಿಸುಗಳ ದರ ಹೆಚ್ಚಳ