ಮಹೀಂದ್ರಾ ಎಲೆಕ್ಟ್ರಿಕ್ ಎಸ್‌ಯುವಿಗೆ ಡಿಜಿಟಲ್ ಕೀ ಪರಿಚಯಿಸಿದ ಸ್ಯಾಮ್‌ಸಂಗ್ ವ್ಯಾಲೆಟ್

KannadaprabhaNewsNetwork |  
Published : Oct 30, 2025, 01:02 AM IST
Samsung SUV

ಸಾರಾಂಶ

ಸ್ಯಾಮ್‌ಸಂಗ್ ಸಂಸ್ಥೆಯು ಮಹೀಂದ್ರಾ ಎಲೆಕ್ಟ್ರಿಕ್ ಎಸ್‌ಯುವಿಗಳಿಗೆ ಸ್ಯಾಮ್‌ಸಂಗ್ ವ್ಯಾಲೆಟ್ ಮೂಲಕ ಡಿಜಿಟಲ್ ಕಾರ್ ಕೀ ವ್ಯವಸ್ಥೆಯನ್ನು ಬಿಡುಗಡೆ ಮಾಡಿದೆ. ಈ ಕುರಿತ ವರದಿ ಇಲ್ಲಿದೆ. ಸ್ಮಾರ್ಟ್‌ಫೋನ್‌ಗಳನ್ನು ಬಳಸಿ ಸುಲಭವಾಗಿ ವಾಹನಗಳನ್ನು ಅನ್‌ ಲಾಕ್ ಮಾಡಬಹುದು

 ಸ್ಯಾಮ್‌ಸಂಗ್ ಸಂಸ್ಥೆಯು ಮಹೀಂದ್ರಾ ಎಲೆಕ್ಟ್ರಿಕ್ ಎಸ್‌ಯುವಿಗಳಿಗೆ ಸ್ಯಾಮ್‌ಸಂಗ್ ವ್ಯಾಲೆಟ್ ಮೂಲಕ ಡಿಜಿಟಲ್ ಕಾರ್ ಕೀ ವ್ಯವಸ್ಥೆಯನ್ನು ಬಿಡುಗಡೆ ಮಾಡಿದೆ. ಈ ಡಿಜಿಟಲ್ ಕಾರ್ ಕೀ ವ್ಯವಸ್ಥೆಯ ಮೂಲಕ ಗ್ಯಾಲಕ್ಸಿ ಫೋನ್ ಹೊಂದಿರುವ ಕಾರು ಮಾಲೀಕರು ತಮ್ಮ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳನ್ನು ಬಳಸಿ ಸುಲಭವಾಗಿ ವಾಹನಗಳನ್ನು ಅನ್‌ ಲಾಕ್ ಮಾಡಬಹುದು, ಲಾಕ್ ಮಾಡಬಹುದು ಮತ್ತು ಸ್ಟಾರ್ಟ್ ಮಾಡಬಹುದು. ಆಯ್ದ ಮಹೀಂದ್ರಾ ಇಎಸ್‌ಯುವಿಗಳಿಗೆ ಡಿಜಿಟಲ್ ಕಾರ್ ಕೀ ಫೀಚರ್ ಅನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ.

ಡಿಜಿಟಲ್ ಕಾರ್ ಕೀ ಬಳಸಿಕೊಂಡೇ ಕಾರನ್ನು ನಿಯಂತ್ರಿಸಬಹುದು

ಈ ವ್ಯವಸ್ಥೆಯ ಮೂಲಕ ಗ್ಯಾಲಕ್ಸಿ ಸಾಧನಗಳಲ್ಲಿ ಸ್ಯಾಮ್‌ಸಂಗ್ ವ್ಯಾಲೆಟ್‌ನ ಡಿಜಿಟಲ್ ಕಾರ್ ಕೀ ಬಳಸಿಕೊಂಡೇ ಕಾರನ್ನು ನಿಯಂತ್ರಿಸಬಹುದು. ವಿಶೇಷವೆಂದರೆ ಬಳಕೆದಾರರು ತಮ್ಮ ಡಿಜಿಟಲ್ ಕಾರ್ ಕೀ ಅನ್ನು ಸ್ನೇಹಿತರು ಮತ್ತು ಕುಟುಂಬದವರೊಂದಿಗೂ ಸೀಮಿತ ಅವಧಿಗೆ ಹಂಚಿಕೊಳ್ಳಬಹುದು, ಅಗತ್ಯಕ್ಕೆ ತಕ್ಕಂತೆ ಅವರಿಗೆ ಕಾರು ಪ್ರವೇಶಕ್ಕೆ ಅನುವು ಮಾಡಿಕೊಡಬಹುದು.

ಈ ಕುರಿತು ಮಾತನಾಡಿರುವ ಸ್ಯಾಮ್‌ಸಂಗ್ ಇಂಡಿಯಾದ ಸೇವೆಗಳು ಮತ್ತು ಅಪ್ಲಿಕೇಶನ್‌ ಉದ್ಯಮದ ಹಿರಿಯ ನಿರ್ದೇಶಕ ಮಧುರ್ ಚತುರ್ವೇದಿ , ‘ಮಹೀಂದ್ರಾ ಇಎಸ್‌ಯುವಿ ಮಾಲೀಕರಿಗೆ ಸ್ಯಾಮ್‌ಸಂಗ್ ವ್ಯಾಲೆಟ್ ಮೂಲಕ ಸ್ಯಾಮ್‌ಸಂಗ್ ಡಿಜಿಟಲ್ ಕೀ ಸೌಲಭ್ಯವನ್ನು ಒದಗಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಮಹೀಂದ್ರಾ ಜೊತೆಗಿನ ನಮ್ಮ ಸಹಯೋಗವು ಹೆಚ್ಚಿನ ಗ್ಯಾಲಕ್ಸಿ ಬಳಕೆದಾರರಿಗೆ ಸುಗಮ ಚಾಲನೆ ಮಾಡಲು ನೆರವಾಗಲಿದೆ’ ಎಂದು ಹೇಳಿದ್ದಾರೆ.

ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಿವೆ

ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್‌ ನ ಆಟೋಮೋಟಿವ್ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಮಹೀಂದ್ರಾ ಎಲೆಕ್ಟ್ರಿಕ್ ಆಟೋಮೊಬೈಲ್ ಲಿಮಿಟೆಡ್‌ ನ ಕಾರ್ಯನಿರ್ವಾಹಕ ನಿರ್ದೇಶಕರಾದ ನಳಿನಿಕಾಂತ್ ಗೊಲ್ಲಗುಂಟ ಅವರು ಮಾತನಾಡಿ, ‘ನಮ್ಮ ಎಲೆಕ್ಟ್ರಿಕ್ ಒರಿಜಿನ್ ಎಸ್‌ಯುವಿಗಳಾದ ಎಕ್ಸ್ಇವಿ 9ಇ ಮತ್ತು ಬಿಇ 6 ವಾಹನಗಳು ಸುಧಾರಿತ ತಂತ್ರಜ್ಞಾನ ಮತ್ತು ಆಕರ್ಷಕ ವಿನ್ಯಾಸಗಳ ಮೂಲಕ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಿವೆ. ಇದೀಗ ನಾವು ಸ್ಯಾಮ್‌ಸಂಗ್ ಜೊತೆಗಿನ ಸಹಯೋಗದ ಮೂಲಕ ಮತ್ತೊಂದು ಪ್ರಥಮ ದರ್ಜೆಯ ಫೀಚರ್ ಅನ್ನು ಪರಿಚಯಿಸುತ್ತಿದ್ದು, ಸ್ಯಾಮ್‌ಸಂಗ್ ವ್ಯಾಲೆಟ್ ಮೂಲಕ ಡಿಜಿಟಲ್ ಕಾರ್ ಕೀ ಸೌಲಭ್ಯ ಒದಗಿಸಲು ಸಂತೋಷ ಪಡುತ್ತೇವೆ’ ಎಂದು ಹೇಳಿದರು.

ಒಂದು ವೇಳೆ ಡಿಜಿಟಲ್ ಕಾರ್ ಕೀ ಹೊಂದಿರುವ ಸಾಧನ ಕಳೆದುಹೋದರೆ ಅಥವಾ ಕದ್ದು ಹೋದರೆ ಬಳಕೆದಾರರು ಸ್ಯಾಮ್‌ಸಂಗ್ ಫೈಂಡ್ ಸೇವೆ ಮೂಲಕ ತಮ್ಮ ಸಾಧನವನ್ನು ದೂರದಿಂದಲೇ ಲಾಕ್ ಮಾಡಬಹುದು ಅಥವಾ ಡಿಜಿಟಲ್ ಕಾರ್ ಕೀ ಸೇರಿದಂತೆ ತಮ್ಮ ಎಲ್ಲಾ ಡೇಟಾವನ್ನು ಅಳಿಸಬಹುದು. ಈ ಮೂಲಕ ತಮ್ಮ ವಾಹನಗಳನ್ನು ಹೆಚ್ಚು ಸುರಕ್ಷಿತಗೊಳಿಸಬಹುದು. ಬಯೋಮೆಟ್ರಿಕ್ ಅಥವಾ ಪಿನ್ ಆಧರಿತ ಬಳಕೆದಾರ ದೃಢೀಕರಣ ಪ್ರಕ್ರಿಯೆ ಅಗತ್ಯವಿರುವುದರಿಂದ ಸ್ಯಾಮ್‌ಸಂಗ್ ವ್ಯಾಲೆಟ್ ವಾಹನವನ್ನು ಯಾವುದೇ ರಾಜಿ ಇಲ್ಲದೆ ರಕ್ಷಿಸುತ್ತದೆ, ಹೆಚ್ಚು ಗೌಪ್ಯತೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

PREV
Read more Articles on

Recommended Stories

‘31,000 ಕನಿಷ್ಠ ವೇತನ ಜಾರಿಯಾದ್ರೆ ಕಷ್ಟ’ - ನೆರೆ ರಾಜ್ಯಗಳಲ್ಲಿ ಕನಿಷ್ಠ ವೇತನ ಕಡಿಮೆ
ಶ್ರೀಕೃಷ್ಣದೇವರಾಯ ವಿವಿ ಪಠ್ಯಕ್ಕೆ ಕವಿ ಸತೀಶ್ ಜವರೇಗೌಡರ ‘ಅಪ್ಪ’ ಕವನ ಆಯ್ಕೆ