ಶಾರ್ಟ್‌ ಸರ್ಕೀಟ್‌ನಿಂದ ಮಹಾಔಷಧ ಕಾರ್ಖಾನೆಯಲ್ಲಿ ಬೆಂಕಿ:8 ಸಾವು, ಮೂವರು ನಾಪತ್ತೆ

KannadaprabhaNewsNetwork | Published : Nov 5, 2023 1:16 AM

ಸಾರಾಂಶ

ಔಷಧ ಕಾರ್ಖಾನೆಯಲ್ಲಿ ಶಾರ್ಟ್‌ಸರ್ಕೀಟ್‌ನಿಂದಾಗಿ ಅಗ್ನಿ ದುರಂತ ಸಂಭವಿಸಿದೆ

ಮುಂಬೈ: ಔಷಧ ಕಾರ್ಖಾನೆಯಲ್ಲಿ ಶಾರ್ಟ್‌ಸರ್ಕೀಟ್‌ನಿಂದಾಗಿ ಅಗ್ನಿ ದುರಂತ ಸಂಭವಿಸಿದೆ. ಇದರಿಂದಾಗಿ 8 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಮೂವರು ನಾಪತ್ತೆಯಾಗಿದ್ದಾರೆ. ಈ ದುರ್ಘಟನೆ ಮಹಾರಾಷ್ಟ್ರದ ರಾಯಗಢದಲ್ಲಿ ಶುಕ್ರವಾರ ನಡೆದಿದೆ. ವಿದ್ಯುತ್‌ ಅವಘಡದಿಂದಾಗಿ ಟ್ಯಾಂಕ್‌ನಲ್ಲಿ ತುಂಬಿಟ್ಟಿದ್ದ ಕೆಮಿಕಲ್‌ಗೆ ಬೆಂಕಿ ತಾಗಿ ಉಲ್ಭಣಿಸಿದೆ. ಈ ಸಮಯದಲ್ಲಿ ಸ್ಥಳದಲ್ಲಿ 11 ಮಂದಿ ಕೆಲಸ ಮಾಡುತ್ತಿದ್ದರು. ಈ ಪೈಕಿ 8 ಮಂದಿಯ ದೇಹವನ್ನು ಹೊರತೆಗೆಯಲಾಗಿದೆ. ಇನ್ನು ಮೂವರು ಕಾಣೆಯಾಗಿದ್ದಾರೆ. ಅವರಿಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಎನ್‌ಡಿಆರ್‌ಎಫ್‌ ಅಧಿಕಾರಿಗಳು ತಿಳಿಸಿದರು. ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Share this article