ಬೆಂಗಳೂರಿನಲ್ಲಿ ರೂ.125 ಕೋಟಿ ಹೂಡಿಕೆ ಮಾಡಲು ಮುಂದಾದ ಸೌಖ್ಯ

KannadaprabhaNewsNetwork |  
Published : Nov 12, 2025, 02:15 AM IST
ಆಯುಷ್‌ | Kannada Prabha

ಸಾರಾಂಶ

ಸೌಖ್ಯ ಸಂಸ್ಥೆಯು ಬೆಂಗಳೂರಿನ ರೂ.125 ಕೋಟಿ ಹೂಡಿಕೆ ಮಾಡಲು ಮುಂದಾಗಿದೆ. ಈ ಕುರಿತ ವಿವರ ಇಲ್ಲಿದೆ.

ಕನ್ನಡಪ್ರಭವಾರ್ತೆ

ಸೌಖ್ಯ ಇಂಟರ್‌ನ್ಯಾಷನಲ್ ಹೋಲಿಸ್ಟಿಕ್ ಹೆಲ್ತ್ ಸೆಂಟರ್ ಸಂಸ್ಥೆಯು ಬೆಂಗಳೂರಿನಲ್ಲಿ ಆಯುಷ್ ಆಸ್ಪತ್ರೆಯ ವಿಸ್ತರಣೆಗಾಗಿ ರೂ.125 ಕೋಟಿ ಹೂಡಿಕೆ ಮಾಡಲು ಮುಂದಾಗಿದೆ. ಈ ಯೋಜನೆಯ ಭಾಗವಾಗಿ ಬೆಂಗಳೂರಿನ ಹೊಸಕೋಟೆಯಲ್ಲಿ ತನ್ನ ಕ್ಯಾಂಪಸ್ ಬಳಿಯಲ್ಲಿ ಆರು ಎಕರೆ ಜಮೀನನ್ನು ಸ್ವಾಧೀನಕ್ಕೆ ಪಡೆದುಕೊಂಡಿದೆ. 100 ಹಾಸಿಗೆಗಳ ಆಯುಷ್ ಆಸ್ಪತ್ರೆಯನ್ನು ನಿರ್ಮಿಸುವ ಯೋಜನೆಯ ಭಾಗವಾಗಿ ಈ ಜಮೀನನ್ನು ಸ್ವಾಧೀನಪಡಿಸಿಕೊಂಡಿದೆ.

ಜಮೀನು ಸ್ವಾಧೀನಕ್ಕೆ ರೂ.50 ಕೋಟಿ, ನಿರ್ಮಾಣ ಹಾಗೂ ಅಭಿವೃದ್ಧಿಗೆ ರೂ 75 ಕೋಟಿ ವಿನಿಯೋಗಿಸಲಾಗುತ್ತದೆ. ನಿರ್ಮಾಣ ಆಗಲಿರುವ ಆಸ್ಪತ್ರೆಯು ಸಂಕೀರ್ಣವಾದ ವೈದ್ಯಕೀಯ ಸಮಸ್ಯೆಗಳಿಗೆ ಅಲೋಪಥಿ, ಆಯುರ್ವೇದ, ಹೋಮಿಯೋಪಥಿ, ನ್ಯಾಚುರೋಪಥಿ, ಸಿದ್ಧ, ಯುನಾನಿ ಮತ್ತು ಯೋಗದ ಮೂಲಕ ಸಂಯೋಜಿತವಾದ ಆರೋಗ್ಯಸೇವೆಗಳನ್ನು ಒದಗಿಸುತ್ತದೆ.

ಈ ಬಗ್ಗೆ ಮಾತನಾಡಿರುವ ಸೌಖ್ಯ ಸಂಸ್ಥೆಯ ಸಂಸ್ಥಾಪಕ ಡಾ. ಇಸಾಕ್ ಮಥಾಯಿ ಅವರು ‘ಸೌಖ್ಯ ವಿಶ್ವದರ್ಜೆಯ ಗುಣಮಟ್ಟ, ಭಾರತದ ಅತ್ಯುತ್ತಮ ನೈಸರ್ಗಿಕ ಚಿಕಿತ್ಸಾ ಸಂಪ್ರದಾಯಗಳನ್ನು ಹೊಂದಿದೆ. ಬ್ರಿಟನ್ನಿನ ರಾಜ ಚಾರ್ಲ್ಸ್, ರಾಣಿ ಕ್ಯಾಮಿಲ್ಲಾ ಸೇರಿದಂತೆ ಜಾಗತಿಕ ಮಟ್ಟದ ಹಾಗೂ ಭಾರತದ ಹಲವು ಗಣ್ಯರು ಇದನ್ನು ವಿಶ್ವಾಸದಿಂದ ಕಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೌಖ್ಯ ವಿಸ್ತರಣೆಯ ಕಾರ್ಯ ನಡೆಯಲಿದೆ. ಪೋರ್ಚುಗಲ್‌ನಲ್ಲಿ ನಮ್ಮ ಮೊದಲ ಅಂತರರಾಷ್ಟ್ರೀಯ ಕೇಂದ್ರವನ್ನು ಆರಂಭಿಸುವುದರ ಮೂಲಕ ಆ ಪಯಣವನ್ನು ಈಗಾಗಲೇ ಆರಂಭಿಸಲಾಗಿದೆ. ಇದರ ಜೊತೆಗೆ ಆರೋಗ್ಯಸೇವಾ ವ್ಯವಸ್ಥೆಯನ್ನು ಕೈಗೆಟಕುವ ದರದಲ್ಲಿ ಒದಗಿಸುವ ಉದ್ದೇಶದಿಂದ ಹೊಸ ಯೋಜನೆ ಆರಂಭಿಸಲಾಗಿದೆ’ ಎಂದು ಹೇಳಿದ್ದಾರೆ.ಹೊಸ ಆಸ್ಪತ್ರೆಯ ನಿರ್ಮಾಣವು ಮುಂದಿನ 6-9 ತಿಂಗಳಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಇದು ಎರಡು ಹಂತಗಳಲ್ಲಿ ಅನುಷ್ಠಾನಗೊಳ್ಳಲಿದೆ. ಮೊದಲ ಹಂತದಲ್ಲಿ 50 ಹಾಸಿಗಳು, ಒಂದಿಷ್ಟು ಪ್ರಮುಖ ವೈಶಿಷ್ಟ್ಯಗಳ ಸೇವೆಗಳು ಇರಲಿವೆ. ಎರಡನೆಯ ಹಂತದಲ್ಲಿ ಆಸ್ಪತ್ರೆಯ ಸಾಮರ್ಥ್ಯವನ್ನು ಹೆಚ್ಚು ಮಾಡಲಾಗುತ್ತದೆ ಹಾಗೂ ಲಭ್ಯವಿರುವ ಸೇವೆಗಳ ಸಂಖ್ಯೆಯನ್ನು ಕೂಡ ಹೆಚ್ಚು ಮಾಡಲಾಗುತ್ತದೆ. ಈ ಆಸ್ಪತ್ರೆಯು 2026-27ನೇ ಹಣಕಾಸು ವರ್ಷದ ಅಂತ್ಯದ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಗೆ ಸಿದ್ಧವಾಗುವ ನಿರೀಕ್ಷೆ ಹೊಂದಲಾಗಿದೆ.

PREV

Recommended Stories

ಅಕ್ಷಯ ಪಾತ್ರ ಫೌಂಡೇಶನ್ ಗೆ 25ನೇ ವಾರ್ಷಿಕೋತ್ಸವ ಸಂಭ್ರಮ
ಬಂದಿದೆ ಹೊಸ ಆಧಾರ್‌ ಆ್ಯಪ್ : ಸ್ಮಾರ್ಟ್‌ ಫೋನ್‌ ಮೂಲಕ ಬಳಕೆ