ಕನ್ನಡಪ್ರಭವಾರ್ತೆ ಬೆಂಗಳೂರು:
ಹಂತ 1: 6 ರಿಂದ 8ನೇ ತರಗತಿಯ ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಪ್ರಮುಖ ಪರಿಕಲ್ಪನೆಗಳ ಬುನಾದಿ ನಿರ್ಮಾಣ.ಹಂತ 2: 9 ಮತ್ತು 10ನೇ ತರಗತಿಯ ಐ.ಜಿ.ಸಿ.ಎಸ್.ಇ. ಬೋರ್ಡ್ ಪರೀಕ್ಷೆಗಳಿಗೆ ವಿಶೇಷ ಸಿದ್ಧತೆ.
ಹಂತ 3: 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಅವರ ಅಂತಿಮ ಐಬಿ ಡಿಪ್ಲೊಮಾ ಅಥವಾ ಕೇಂಬ್ರಿಡ್ಜ್ ಎ-ಲೆವೆಲ್ ಪರೀಕ್ಷೆಗಳಿಗೆ ಸಂಪೂರ್ಣ ತರಬೇತಿ.ನಗರದಲ್ಲಿ ಮೊದಲ ಆರು ತಿಂಗಳ ಅವಧಿಯಲ್ಲಿ ಕನಿಷ್ಠ 100 ವಿದ್ಯಾರ್ಥಿಗಳನ್ನು ತಲುಪುವ ಗುರಿಯನ್ನು ಸಂಸ್ಥೆ ಹೊಂದಿದ್ದು, ಗ್ಲೋಬಲ್ ಪರ್ಸ್ಪೆಕ್ಟಿವ್ಸ್ (ಜಾಗತಿಕ ದೃಷ್ಟಿಕೋನಗಳು) ನಂತಹ ನಿರ್ದಿಷ್ಟ ಹಾಗೂ ಕಠಿಣ ವಿಷಯಗಳ ಕಲಿಕಾ ಕೊರತೆಯನ್ನು ನೀಗಿಸಲು ಆದ್ಯತೆ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.ಈ ಕುರಿತು ಮಾತನಾಡಿರುವ ಅಕಾಡೆಮಿಯೊ ಸಂಸ್ಥೆಯ ಸಂಸ್ಥಾಪಕಿ ಮತ್ತು ಸಿಇಒ ನಿತಾಶಾ ಸಾಗರ್ ಕುಕರ್ ಅವರು, ‘ಬೆಂಗಳೂರು ದೇಶದಲ್ಲೇ ಅತ್ಯಂತ ಹೆಚ್ಚು ಜಾಗತಿಕ ಮನೋಭಾವದ ಮತ್ತು ವೃತ್ತಿಪರ ಕುಟುಂಬಗಳನ್ನು ಹೊಂದಿರುವ ನಗರವಾಗಿದೆ. ದೆಹಲಿ ಎನ್‌ಸಿಆರ್‌ನಂತೆಯೇ ಇಲ್ಲೂ ಸಹ ಪೋಷಕರು ಒಂದು ಪ್ರಮುಖ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. 7ನೇ ತರಗತಿಯ ಕೇಂಬ್ರಿಡ್ಜ್ ಲೋಯರ್ ಸೆಕೆಂಡರಿ ವಿದ್ಯಾರ್ಥಿಯೇ ಇರಲಿ ಅಥವಾ ಐಬಿ ಡಿಪ್ಲೊಮಾ ಪರೀಕ್ಷೆಗೆ ಸಜ್ಜಾಗುತ್ತಿರುವ 12ನೇ ತರಗತಿಯ ವಿದ್ಯಾರ್ಥಿಯೇ ಇರಲಿ, ಈ ಜಾಗತಿಕ ಪಠ್ಯಕ್ರಮವನ್ನು ನಿಖರವಾಗಿ ಅರ್ಥಮಾಡಿಕೊಂಡು ಬೋಧಿಸುವ ಪರಿಣಿತ ಶಿಕ್ಷಕರು ಸಿಗುತ್ತಿಲ್ಲ ಎಂಬುದು ಪೋಷಕರ ದೂರು. ಈ ಕೊರತೆಯನ್ನು ಅಕಾಡೆಮಿಯೊ ನೀಗಿಸಲಿದೆ’ ಎಂದು ಹೇಳಿದ್ದಾರೆ.ಭಾರತದಲ್ಲಿ ಬೆಂಗಳೂರನ್ನು ಐಬಿ ಶಿಕ್ಷಣದ ಪ್ರಮುಖ ಹಬ್ ಎಂದು ಗುರುತಿಸಲಾಗುತ್ತದೆ. ಇಲ್ಲಿ ಗಣನೀಯ ಸಂಖ್ಯೆಯ ಅಂತಾರಾಷ್ಟ್ರೀಯ ಶಾಲೆಗಳಿದ್ದು, ಜಾಗತಿಕ ಮಟ್ಟದಲ್ಲಿ ಚಲನಶೀಲರಾಗಿರುವ ತಂತ್ರಜ್ಞಾನ ಕ್ಷೇತ್ರದ ಕುಟುಂಬಗಳು ಹೆಚ್ಚಾಗಿದ್ದಾರೆ. ಸದ್ಯ ಉದ್ಯಾನ ನಗರಿ ಬೆಂಗಳೂರಿನಲ್ಲಿ 14 ಐಬಿ ವರ್ಲ್ಡ್ ಶಾಲೆಗಳಿದ್ದು, ಅವುಗಳಲ್ಲಿ 13 ಶಾಲೆಗಳು ಅತ್ಯುನ್ನತ ಐಬಿ ಡಿಪ್ಲೊಮಾ ಕೋರ್ಸ್‌ಗಳನ್ನು ನೀಡುತ್ತಿರುವುದು ವಿಶೇಷ.