ಆಗಸದಲ್ಲಿ ನಿಗೂಢ ವಸ್ತುಹಾರಾಟ: ಇಂಫಾಲದಲ್ಲಿವಿಮಾನ ಸಂಚಾರ ವಿಳಂಬ

KannadaprabhaNewsNetwork |  
Published : Nov 20, 2023, 12:45 AM IST
ವಿಮಾನ ನಿಲ್ದಾಣ | Kannada Prabha

ಸಾರಾಂಶ

ಕೋಮು ಸಂಘರ್ಷದಿಂದ ನಲುಗಿರುವ ಮಣಿಪುರದ ರಾಜಧಾನಿ ಇಂಫಾಲದ ವಿಮಾನ ನಿಲ್ದಾಣದ ಬಳಿಯ ಆಗಸದಲ್ಲಿ ಭಾನುವಾರ ನಿಗೂಢ ವಸ್ತುವಿನ ಸಂಚಾರ ಕಂಡುಬಂದಿದೆ

ಇಂಫಾಲ್‌: ಕೋಮು ಸಂಘರ್ಷದಿಂದ ನಲುಗಿರುವ ಮಣಿಪುರದ ರಾಜಧಾನಿ ಇಂಫಾಲದ ವಿಮಾನ ನಿಲ್ದಾಣದ ಬಳಿಯ ಆಗಸದಲ್ಲಿ ಭಾನುವಾರ ನಿಗೂಢ ವಸ್ತುವಿನ ಸಂಚಾರ ಕಂಡುಬಂದಿದೆ. ಡ್ರೋನ್‌ ರೀತಿಯ ಈ ವಸ್ತುವಿನ ಹಾರಾಟದ ಹಿನ್ನೆಲೆಯಲ್ಲಿ ವಿಮಾನಗಳ ಸಂಚಾರವನ್ನು 4 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಜೊತೆಗೆ ಕೆಲವು ವಿಮಾನಗಳ ಆಗಮನವನ್ನು ತಡೆದು, ಕೋಲ್ಕತಾಕ್ಕೆ ಕಳುಹಿಸಿಕೊಡಲಾಯಿತು. ಬಳಿಕ ಮತ್ತೆ ಯಾವುದೇ ಸಂಚಾರ ಪತ್ತೆಯಾಗದ ಹಿನ್ನೆಲೆಯಲ್ಲಿ, ಸುತ್ತಮುತ್ತ ಪ್ರದೇಶದ ತಪಾಸಣೆ ಬಳಿಕ ಮತ್ತೆ ವಿಮಾನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.

PREV

Recommended Stories

ಬೇಡ್ತಿಯ ದಿಕ್ಕು ಬದಲಿಸಿದರೆ ಕಾದಿದೆ ಅಪಾಯ!
ಏರ್‌ಟೆಲ್‌ ಪೋಸ್ಟ್‌ಪೇಯ್ಡ್‌ ಗ್ರಾಹಕರಿಗೆ ಆ್ಯಪಲ್‌ ಬಂಪರ್‌ ಆಫರ್‌ : ಐಕ್ಲೌಡ್‌+, ಆ್ಯಪಲ್‌ ಟಿವಿ, ಆರ್ಕೇಡ್‌ ಉಚಿತ