ಭಾರ್ತಿ ಏರ್ಟೆಲ್, ತನ್ನ ಪೋಸ್ಟ್ಪೇಯ್ಡ್ ಬಳಕೆದಾರರಿಗೆ ಭರ್ಜರಿ ಕೊಡುಗೆ ಪ್ರಕಟಿಸಿದೆ. ₹999 ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಫ್ಯಾಮಿಲಿ ಪೋಸ್ಟ್ಪೇಯ್ಡ್ ಯೋಜನೆಗಳನ್ನು ಪರಿಷ್ಕರಿಸಲಾಗಿದ್ದು, ಇವುಗಳಿಗೆ ಆ್ಯಪಲ್ನ ವಿಸ್ತರಿತ ಐಕ್ಲೌಡ್+ ಜೊತೆಗೆ ಜನಪ್ರಿಯ ಆ್ಯಪಲ್ ಟಿವಿ ಮತ್ತು ಆ್ಯಪಲ್ ಆರ್ಕೇಡ್ ಸೇವೆಗಳನ್ನು ಉಚಿತವಾಗಿ ಸೇರ್ಪಡೆಗೊಳಿಸಿದೆ.
ದೇಶದ ಮುಂಚೂಣಿ ದೂರಸಂಪರ್ಕ ಸೇವಾ ಸಂಸ್ಥೆ ಭಾರ್ತಿ ಏರ್ಟೆಲ್, ತನ್ನ ಪೋಸ್ಟ್ಪೇಯ್ಡ್ ಬಳಕೆದಾರರಿಗೆ ಭರ್ಜರಿ ಕೊಡುಗೆ ಪ್ರಕಟಿಸಿದೆ. ₹999 ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಫ್ಯಾಮಿಲಿ ಪೋಸ್ಟ್ಪೇಯ್ಡ್ ಯೋಜನೆಗಳನ್ನು ಪರಿಷ್ಕರಿಸಲಾಗಿದ್ದು, ಇವುಗಳಿಗೆ ಆ್ಯಪಲ್ನ ವಿಸ್ತರಿತ ಐಕ್ಲೌಡ್+ ಜೊತೆಗೆ ಜನಪ್ರಿಯ ಆ್ಯಪಲ್ ಟಿವಿ ಮತ್ತು ಆ್ಯಪಲ್ ಆರ್ಕೇಡ್ ಸೇವೆಗಳನ್ನು ಉಚಿತವಾಗಿ ಸೇರ್ಪಡೆಗೊಳಿಸಿದೆ.
ಈ ನೂತನ ಕೊಡುಗೆಯಿಂದಾಗಿ ಏರ್ಟೆಲ್ ಪೋಸ್ಟ್ಪೇಯ್ಡ್ ಬಳಕೆದಾರರು ತಮ್ಮ ಐಫೋನ್ ಹಾಗೂ ಇತರ ಆ್ಯಪಲ್ ಡಿವೈಸ್ಗಳಲ್ಲಿ ಫೋಟೋ, ಪ್ರಮುಖ ಫೈಲ್ಗಳು, ಪಾಸ್ವರ್ಡ್ಗಳು ಮತ್ತು ಸಂಪರ್ಕ ಸಂಖ್ಯೆಗಳನ್ನು ಸುರಕ್ಷಿತವಾಗಿ ಕ್ಲೌಡ್ನಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ಸಾಧನಗಳು ಕಳೆದುಹೋದರೂ ಅಥವಾ ಹೊಸ ಡಿವೈಸ್ಗೆ ಬದಲಾದಾಗಲೂ ಸುಲಭವಾಗಿ ಡೇಟಾ ಮರಳಿ ಪಡೆಯಬಹುದಾಗಿದೆ. ಇದರೊಂದಿಗೆ, ಆ್ಯಪಲ್ ಟಿವಿಯ ಜಾಗತಿಕ ಪ್ರಶಸ್ತಿ ವಿಜೇತ ಒರಿಜಿನಲ್ ಸರಣಿಗಳು, ಚಲನಚಿತ್ರಗಳು ಹಾಗೂ ಕಿರಿಕಿರಿಯ ಜಾಹೀರಾತುಗಳಿಲ್ಲದೆ ಆ್ಯಪಲ್ ಆರ್ಕೇಡ್ನ ನೂರಾರು ಅತ್ಯಾಕರ್ಷಕ ಗೇಮ್ಗಳನ್ನು ಅನಿಯಮಿತವಾಗಿ ಆನಂದಿಸಬಹುದಾಗಿದೆ.
ಗೇಮಿಂಗ್ ಮತ್ತು ಮನರಂಜನೆ ಒಂದೇ ಬಿಲ್ನಲ್ಲಿ
ಮೂವರು ಸದಸ್ಯರ ಕುಟುಂಬಕ್ಕೆ ಸೂಕ್ತವಾದ ₹999ರ ಫ್ಯಾಮಿಲಿ ಪೋಸ್ಟ್ಪೇಯ್ಡ್ ಪ್ಲಾನ್ನಲ್ಲಿ ಈಗಾಗಲೇ ಫಾಸ್ಟ್ಲೇನ್ ತಂತ್ರಜ್ಞಾನದ ಅನಿಯಮಿತ ಡೇಟಾ, ಸ್ಪ್ಯಾಮ್ ಕರೆಗಳಿಂದ ರಕ್ಷಣೆ ಮತ್ತು ಒಟಿಟಿ ಮನರಂಜನೆ ಲಭ್ಯವಿತ್ತು. ಇದೀಗ ಆ್ಯಪಲ್ನ ಮೂರು ಪ್ರಮುಖ ಪ್ರೀಮಿಯಂ ಸೇವೆಗಳು ಸೇರ್ಪಡೆಯಾಗುವುದರೊಂದಿಗೆ ಇಡೀ ಕುಟುಂಬಕ್ಕೆ ಸಂಪರ್ಕ, ಭದ್ರತೆ, ಕ್ಲೌಡ್ ಸ್ಟೋರೇಜ್, ಗೇಮಿಂಗ್ ಮತ್ತು ಮನರಂಜನೆ ಒಂದೇ ಬಿಲ್ನಲ್ಲಿ ದೊರೆಯಲಿದೆ.
ಹೊಸ ಯೋಜನೆಗಳಿಗೆ ಅಪ್ಗ್ರೇಡ್ ಮಾಡಿಕೊಳ್ಳಬಹುದು
ಗ್ರಾಹಕರು ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಅಥವಾ ಸಮೀಪದ ಏರ್ಟೆಲ್ ಮಳಿಗೆಗಳಿಗೆ ಭೇಟಿ ನೀಡಿ ತಮ್ಮ ಹಾಲಿ ಪ್ಲಾನ್ಗಳನ್ನು ಈ ಹೊಸ ಯೋಜನೆಗಳಿಗೆ ಅಪ್ಗ್ರೇಡ್ ಮಾಡಿಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಭಾರ್ತಿ ಏರ್ಟೆಲ್ನ ಮಾರುಕಟ್ಟೆ ಕಾರ್ಯಾಚರಣೆಗಳ ನಿರ್ದೇಶಕ ಅಮಿತ್ ತ್ರಿಪಾಠಿ, ‘ಗ್ರಾಹಕರ ದಿನನಿತ್ಯದ ಡಿಜಿಟಲ್ ಜೀವನವನ್ನು ಇನ್ನಷ್ಟು ಸರಳಗೊಳಿಸಲು ಹಾಗೂ ವಿಶಿಷ್ಟ ಸೇವೆಗಳನ್ನು ಒದಗಿಸಲು ನಾವು ಸದಾ ಮುಂಚೂಣಿಯಲ್ಲಿದ್ದೇವೆ. ಇಡೀ ಕುಟುಂಬದ ಸಂಪರ್ಕ ಮತ್ತು ಮನರಂಜನಾ ಅಗತ್ಯಗಳನ್ನು ಒಂದೇ ಸೂರಿನಡಿ ತರುವುದು ನಮ್ಮ ಉದ್ದೇಶ. ಪ್ರಸ್ತುತ ಜಾಗತಿಕ ಗುಣಮಟ್ಟದ ಆ್ಯಪಲ್ ಐಕ್ಲೌಡ್+, ಆ್ಯಪಲ್ ಟಿವಿ ಮತ್ತು ಆ್ಯಪಲ್ ಆರ್ಕೇಡ್ಗಳನ್ನು ನಮ್ಮ ಫ್ಯಾಮಿಲಿ ಯೋಜನೆಗಳಲ್ಲಿ ಜೋಡಿಸುವ ಮೂಲಕ ಗ್ರಾಹಕರಿಗೆ ಗರಿಷ್ಠ ಮೌಲ್ಯವನ್ನು ಕಲ್ಪಿಸಿದ್ದೇವೆ’ ಎಂದು ಹೇಳಿದರು.
ಭಾರತ ಹಾಗೂ ಆಫ್ರಿಕಾದ 15ಕ್ಕೂ ಹೆಚ್ಚು ದೇಶಗಳಲ್ಲಿ 65 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿರುವ ಭಾರ್ತಿ ಏರ್ಟೆಲ್, ಜಾಗತಿಕ ಮಟ್ಟದಲ್ಲಿ ಎರಡನೇ ಅತಿದೊಡ್ಡ ಮೊಬೈಲ್ ನೆಟ್ವರ್ಕ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.