ರಾಹುಲ್‌ ಇಂಥ ನಡೆಗಳು ಅವರನ್ನು ಪ್ರಧಾನಿ ಮಾಡಲ್ಲ : ಶಾ

Published : Nov 16, 2026, 11:50 AM IST
Rahul Gandhi

ಸಾರಾಂಶ

‘ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ರಾಹುಲ್ ಗಾಂಧಿ ಅವರು ಭಾರತ, ಅದರ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ದಾಖಲೆಯನ್ನು ಅವಹೇಳನ ಮಾಡುತ್ತಿದ್ದಾರೆ

ಪುಣೆ/ನವದೆಹಲಿ : ‘ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ರಾಹುಲ್ ಗಾಂಧಿ ಅವರು ಭಾರತ, ಅದರ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ದಾಖಲೆಯನ್ನು ಅವಹೇಳನ ಮಾಡುತ್ತಿದ್ದಾರೆ. ಆದರೆ ಅವರ ಇಂಥ ನಡೆಗಳು ಎಂದೂ ಅವರನ್ನು ಪ್ರಧಾನಿ ಮಾಡುವುದಿಲ್ಲ. ಇದನ್ನು ಬಿಟ್ಟು ಅವರು ಹಳ್ಳಿಗಳಿಗೆ ಭೇಟಿ ನೀಡಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕುಟುಕಿದ್ದಾರೆ.

ಕಾಂಗ್ರೆಸ್ ನೇತೃತ್ವದ ತೆಲಂಗಾಣ ಸರ್ಕಾರ ನ.13-14ರಂದು ಹೈದರಾಬಾದ್‌ನಲ್ಲಿ ನಡೆಸಿದ್ದ ಭಾರತ್ ಶೃಂಗಸಭೆಯಲ್ಲಿ ಇಟಲಿಯ ನಾಯಕ ಗಿಯಾಕೊಮೊ ಫಿಲಿಬೆಕ್ ಪ್ರಧಾನಿ ನರೇಂದ್ರ ಮೋದಿಗೆ ‘ವೋಟ್‌ ಚೋರ್‌, ಗದ್ದಿ ಛೋಡ್‌’ (ಮತಗಳ್ಳ, ಕುರ್ಚಿ ಬಿಡು) ಎಂದು ರಾಹುಲ್‌ ಸಮ್ಮುಖದಲ್ಲೇ ಕುಟುಕಿದ್ದರು. ಇದನ್ನು ಪುಣೆಯಲ್ಲಿ ಭಾನುವಾರಸ ಪ್ರಸ್ತಾಪಿಸಿದ ಶಾ ತೀವ್ರ ವಾಗ್ದಾಳಿ ನಡೆಸಿದರು.

ಬಿಜೆಪಿ ಕಿಡಿ:

ಇನ್ನು ಇಟಲಿಗನ ಹೇಳಿಕೆಗೆ ಬಿಜೆಪಿ ವಕ್ತಾರ ಪ್ರದೀಪ್‌ ಭಂಡಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ‘ಭಾರತದ ಪ್ರಜಾಪ್ರಭುತ್ವದಲ್ಲಿ ವಿದೇಶಿ ಹಸ್ತಕ್ಷೇಪವನ್ನು ರಾಹುಲ್‌ ಬಯಸುತ್ತಿದ್ದಾರೆ’ ಎಂದು ಹರಿಹಾಯ್ದಿದ್ದಾರೆ.

ವಿದೇಶಿಗರು ಅವಮಾನ ಮಾಡುತ್ತಿದ್ದರೆ ರಾಹುಲ್ ನಗುತ್ತ ಕೂತಿದ್ದರು

ಕೇಂದ್ರ ಸಚಿವ ಕಿರಣ್‌ ರಿಜಿಜು ಮಾತನಾಡಿ, ‘ಭಾರತದ ಪ್ರಧಾನಿಯನ್ನು ವಿದೇಶಿಗರು ಅವಮಾನ ಮಾಡುತ್ತಿದ್ದರೆ ರಾಹುಲ್ ನಗುತ್ತ ಕೂತಿದ್ದರು’ ಎಂದು ಕಿಡಿಕಾರಿದ್ದಾರೆ.

PREV
Read more Articles on

Recommended Stories

ಹಿಂದೆ ಬನ್ನಿ, ಮುಂದೆ ಬನ್ನಿ ಅಂದ್ರೆ ಯಾವ ಪುಟ ನೋಡ್ಲಿ!
ಎ.ಐ. ಮಾಸ್ತಿ ಅನಂತ ಕುಪ್ಪಳ್ಳಿ ಕಾರಂತ ಗಿರೀಶ ಕಂಬಾರ ದತ್ತಾತ್ರೇಯ ಗೋಕಾಕ