ಕನ್ನಡಪ್ರಭ ವಾರ್ತೆ ಮೈಸೂರು
ಇತಿಹಾಸದ ವಿದ್ಯಾರ್ಥಿಯಾದ ರಾಘವೇಂದ್ರ ಪ್ರಸನ್ನ ಅವರು ಇಂತಹ ವಿಚಿತ್ರ ವ್ಯಕ್ತಿಯ ತುಘಲಕ್ನ ವ್ಯಕ್ತಿತ್ವ, ಆಡಳಿತ ಶೈಲಿ, ಯುದ್ಧ, ಅವನೊಳಗಿನ ಆಂತರಿಕ ಯುದ್ಧ, ಮಾನಸಿಕ ತೊಳಲಾಟ, ಸೋಲು-ಗೆಲವು ಸೇರಿದಂತೆ ಒಟ್ಟಾರೆ ಜೀವನ ಚರಿತ್ರೆಯನ್ನು 10 ಅಧ್ಯಾಯಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಸಿಂಗಟಗೆರೆಯವರಾದ ರಾಘವೇಂದ್ರ ಪ್ರಸನ್ನ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಮೂರನೇ ರ್ಯಾಂಕ್ನೊಂದಿಗೆ ಪದವಿ, ಮಾನಸ ಗಂಗೋತ್ರಿ ಸಮಾಜಕಾರ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ನಂತರ ‘ಗಾರ್ಡ್’ ಸ್ವಯಂಸೇವಾ ಸಂಸ್ಥೆಯಲ್ಲಿ ಹಲವು ಪರ್ಷಗಳ ಕಾಲ ಕೆಲಸ ಮಾಡಿದರು. ಇದೀಗ ಮೈಸೂರು ಜಿಲ್ಲೆಯ ಎಚ್.ಡಿ,. ಕೋಟೆ ತಾಲೂಕಿನಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿದ್ದಾರೆ.ಸುದೀರ್ಘ 26 ವರ್ಷಗಳ ಕಾಲ ಆಳ್ವಿಕೆ ನಡೆಸಿದ ತುಘಲಕ್ ಒಬ್ಬ ಐಲು ದೊರೆ, ಹುಚ್ಚ, ವಿಲಕ್ಷಣ ವ್ಯಕ್ತಿತ್ವವುಳ್ಳವನು ಎಂದು ಕೆಲವು ಇತಿಹಾಸಕಾರರು ಗುರುತಿಸಿದ್ದರೆ ಮತ್ತೆ ಕೆಲವರು ಆತ ಮೇಧಾವಿ, ದೂರದೃಷ್ಟಿವುಳ್ಳ ಆಡಳಿತಗಾರ, ಪರ್ಷಿಯನ್, ಅರೇಬಿಕ್ ಭಾಷೆಗಳ ಪಂಡಿತ, ತರ್ಕಶಾಸ್ತ್ರ, ಖಗೋಳ, ಗಣಿತ ಮೊದಲಾದ ವಿಷಯಗಳಲ್ಲೂ ಪರಿಣತ. ಮದ್ಯಪಾನ, ಜೂಜು, ಸ್ತ್ರೀವ್ಯಾಮೋಹಗಳಿಂದ ಮುಕ್ತನಾಗಿ ಶ್ರದ್ಧಾವಂತ ಮುಸಲ್ಮಾನ ಎನಿಸಿಕೊಂಡಿದ್ದ. ದೂರದೃಷ್ಟಿಯಿಂದ ಆತ ರೂಪಿಸಿದ್ದ ಹತ್ತು ಹಲವು ಯೋಜನೆಗಳು ವೈಜ್ಞಾನಿಕವಾಗಿದ್ದವು ಹಾಗೂ ಆ ಕಾಲಘಟ್ಟಕಿಂತ ಮುಂದಿದ್ದವು. ಯೋಜನೆಗಳ ಜಾರಿಯಲ್ಲಿ ಆತ ತೆಗೆದುಕೊಂಡ ನಿರ್ಣಯಗಳು ಪ್ರಜೆಗಳಿಗೆ ಹಿಡಿಸಲಿಲ್ಲ.
ಇಂತಹ ತುಘಲಕ್ ಬಗ್ಗೆ ರಾಘವೇಂದ್ರ ಪ್ರಸನ್ನ ಕುತೂಹಲ ಬೆಳೆಸಿಕೊಂಡು ಐತಿಹಾಸಿಕ ಕಾದಂಬರಿ ರಚಿಸುವ ಪ್ರಯತ್ನ ಮಾಡಿದ್ದಾರೆ. ಇದು ಆ ಕಾಲಘಟ್ಟದ ನಿಖರ ಇತಿಹಾಸದ ಪ್ರತಿಬಿಂಬವಲ್ಲವಾದರೂ ನೈಜಸಂಗತಿಗಳನ್ನು ಆಧರಿಸಿ, ನಡೆದಿದ್ದೇನು? ಎಂಬುದನ್ನು ರಾಘವೇಂದ್ರ ಪ್ರಸನ್ನ ಅವರು ಕಾಲ್ಪನಿಕವಾಗಿ ದಾಖಲಿಸುವ ಕೆಲಸ ಮಾಡಿದ್ದಾರೆ.
ಈ ಕೃತಿಯನ್ನು ಸಂವಹನ ಪ್ರಕಾಶನ ಪ್ರಕಟಿಸಿದೆ. ಮೈವಿವಿ ವಿಶ್ರಾಂತ ಕುಲಸಚಿವ ಪ್ರೊ.ಆರ್. ರಾಜಣ್ಣ ಮುನ್ನುಡಿ ಬರೆದಿದ್ದಾರೆ. ಆಸಕ್ತರು ಪ್ರಕಾಶಕ ಡಿ.ಎನ್. ಲೋಕಪ್ಪ, ಮೊ.99026 39593 ಅಥವಾ ಲೇಖಕ ರಾಘವೇಂದ್ರ ಪ್ರಸನ್ನ, ಮೊ. 88846 63633 ಸಂಪರ್ಕಿಸಬಹುದು.