ಭೂಮಿಗೀತ ರಂಗಮಂದಿರದಲ್ಲಿ 29 ರಿಂದ ಪ್ರತಿ ಭಾನುವಾರ ಗ್ರೀಷ್ಮ ರಂಗೋತ್ಸವ

KannadaprabhaNewsNetwork |  
Published : Jun 27, 2025, 12:49 AM ISTUpdated : Jun 27, 2025, 11:50 AM IST
36 | Kannada Prabha

ಸಾರಾಂಶ

ಪ್ರತಿ ಭಾನುವಾರ ಸಂಜೆ 6.30ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ಈ ನಾಟಕ ಪ್ರದರ್ಶನ ನಡೆಯಲಿದೆ. ಜೂ. 29 ರಂದು ಕುವೆಂಪು ರಚನೆಯ ಕುರುಕ್ಷೇತ್ರ ನಾಟಕವನ್ನು ನೇಪಥ್ಯ ರಂಗತಂಡ ಪ್ರದರ್ಶಿಸಲಿದೆ.  

 ಮೈಸೂರು :  ನಗರದ ಪ್ರತಿಷ್ಠಿತ ರಂಗಾಯಣವು ಜೂ. 29 ರಿಂದ ಆ.10 ರವರೆಗಿನ ಪ್ರತಿ ಭಾನುವಾರ ಸಿಜಿಕೆ ನೆನಪಿನ ಗ್ರೀಷ್ಮ ರಂಗೋತ್ಸವ - 2025 ಅನ್ನು ಭೂಮಿಗೀತ ರಂಗಮಂದಿರದಲ್ಲಿ ಆಯೋಜಿಸಿದೆ.

ರಂಗೋತ್ಸವವನ್ನು ಹಿರಿಯ ರಂಗಕರ್ಮಿ ಹಾಗೂ ರಂಗಾಯಣದ ಮಾಜಿ ನಿರ್ದೇಶಕ ಎಚ್‌. ಜನಾರ್ಧನ್‌ ಉದ್ಘಾಟಿಸುವರು. ರಂಗ ಸಮಾಜದ ಸದಸ್ಯ ಎಚ್‌.ಎಸ್‌. ಸುರೇಶ್‌ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕಿ ವಿ.ಎನ್‌. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್‌ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವುದಾಗಿ ರಂಗಾಯಣ ನಿರ್ದೇಶಕ ಸತೀಶ್‌ತಿಪಟೂರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿ ಭಾನುವಾರ ಸಂಜೆ 6.30ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ಈ ನಾಟಕ ಪ್ರದರ್ಶನ ನಡೆಯಲಿದೆ. ಜೂ. 29 ರಂದು ಕುವೆಂಪು ರಚನೆಯ ಕುರುಕ್ಷೇತ್ರ ನಾಟಕವನ್ನು ನೇಪಥ್ಯ ರಂಗತಂಡ ಪ್ರದರ್ಶಿಸಲಿದೆ. ಮಂಜುನಾಥ್‌ಭ್ಯಾಟ ನಿರ್ದೇಶಿಸುವರು. ಜು. 6 ರಂದು ವಾರ್ಡ್‌ನಂ. 6 ನಾಟಕವನ್ನು ಜಿಪಿಐಇಆರ್‌ತಂಡ ಪ್ರಸ್ತುತಪಡಿಸಲಿದ್ದು, ಮೈಮ್‌ರಮೇಶ್‌ನಿರ್ದೇಶಿಸಿದ್ದಾರೆ. ಆಂಟನ್‌ಚೆಕಾವ್‌ಮೂಲದ ಈ ನಾಟಕವನ್ನು ಡಿ.ಆರ್‌. ನಾಗರಾಜ್‌ಕನ್ನಡಕ್ಕೆ ಅನುವಾದಿಸಿದ್ದಾರೆ ಎಂದರು.

ಜು. 13 ರಂದು ಅಹಲ್ಯ ಬಿ.ಡಿ ನಾಟಕವನ್ನು ವರ್ಕ್‌ಶಾಪ್‌ಇನ್‌ಮೈಸೂರು ತಂಡ ಪ್ರಸ್ತುತಪಡಿಸಲಿದ್ದು, ಯತೀಶ್‌ಎನ್‌. ಕೊಳ್ಳೇಗಾಲ ನಿರ್ದೇಶಿಸಿದ್ದು, ಹೆನ್ರಿಕ್‌ಇಬ್ಸನ್‌ಅವರ ಮೂಲ ನಾಟಕವನ್ನು ಎಸ್‌. ಸುರೇಂದ್ರನಾಥ್‌ಅನುವಾದಿಸಿದ್ದಾರೆ. ಜು. 20 ರಂದು ಪರಮೇಶಿ ಪ್ರೇಮ ಪ್ರಸಂಗ ನಾಟಕವನ್ನು ರಂಗವಲ್ಲಿ ತಂಡ ಪ್ರದರ್ಶಿಸಲಿದೆ. ಶ್ರೀನಿವಾಸಪ್ರಭು ರಚನೆಯ ಈ ನಾಟಕವನ್ನು ರವಿಪ್ರಸಾದ್‌ನಿರ್ದೇಶಿಸಿದ್ದಾರೆ. ಜು. 27 ರಂದು ಕಳಸೂತ್ರ ನಾಟಕವನ್ನು ಅಭಿಯಂತರರು ತಂಡ ಪ್ರದರ್ಶಿಸಲಿದ್ದು, ಅನಿಕೇತ ಬೋಲೆ ರಚನೆಯ ಈ ನಾಟಕವನ್ನು ಪ್ರಕಾಶ ಪರ್ವತೀಕರ ಕನ್ನಡಕ್ಕೆ ಅನುವಾದಿಸಿದ್ದು, ಎಚ್‌.ಎಸ್‌. ಸುರೇಶ್‌ಬಾಬು ನಾಟಕ ನಿರ್ದೇಶಿಸಿದ್ದಾರೆ ಎಂದು ಅವರು ತಿಳಿಸಿದರು.

ಆ. 3 ರಂದು ನಿತ್ಯ ಸಚಿವ ನಾಟಕವನ್ನು ಪ್ರಮೋದ ಶಿಗ್ಗಾಂವ್‌ನಿರ್ದೇಶಿಸಿದ್ದು, ಡಾ. ರಾಜಪ್ಪ ದಳವಾಯಿ ರಚಿಸಿದ್ದಾರೆ. ಕರ್ನಾಟಕ ಸಂಘದ ಸದಸ್ಯರು ಈ ನಾಟಕ ಅಭಿನಯಿಸುವರು. ಆ. 10 ರಂದು ಕುಹೂ ಮಲಯಾಳಂ ನಾಟಕವನ್ನು ಲಿಟಲ್‌ಅರ್ಥ್‌ಸ್ಕೂಲ್‌ಆಫ್‌ಥಿಯೇಟರ್‌ತಂಡದವರು ಪ್ರಸ್ತುತಪಡಿಸಲಿದ್ದು, ಅರುಣ್‌ಲಾಲ್ ರಚನೆ ಮತ್ತು ನಿರ್ದೇಶಿಸಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಂಗ ಸಮಾಜದ ಸದಸ್ಯ ಎಚ್.ಎಸ್‌. ಸುರೇಶ್‌ಬಾಬು, ಗ್ರೀಷ್ಮ ರಂಗೋತ್ಸವದ ಸಂಚಾಲಕ ಅರಸೀಕೆರೆ ಯೋಗಾನಂದ ಇದ್ದರು.

29 ರಂದು ನಟನದಲ್ಲಿ ಮೈ ಮನಗಳ ಸುಳಿಯಲ್ಲಿ ನಾಟಕ ಪ್ರದರ್ಶನ

 ಮೈಸೂರು :  ಮಂಡ್ಯ ರಮೇಶ್‌ ಅವರ ನಟನ ರಂಗಶಾಲೆಯು ವಾರಾಂತ್ಯರಂಗ ಪ್ರದರ್ಶನಗಳನ್ನು ನಡೆಸುತ್ತಿದ್ದು, ಜೂ.29ರ ಸಂಜೆ 6.30ಕ್ಕೆ ರಾಮಕೃಷ್ಣನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಿರ್ದಿಗಂತ ಪ್ರಸ್ತುತಪಡಿಸುವ ಶಿವರಾಮ ಕಾರಂತರ ಕಾದಂಬರಿ ಆಧಾರಿತ ನಾಟಕ ಮೈ ಮನಗಳ ಸುಳಿಯಲ್ಲಿ ಪ್ರದರ್ಶನಗೊಳ್ಳಲಿದೆ. ನಾಟಕದ ನಿರ್ದೇಶನ ಅಮಿತ್‌ ಜೆ. ರೆಡ್ಡಿ ಅವರದ್ದು. ಪ್ರವೇಶ ದರ 150 ರೂ. ನಿಗದಿಪಡಿಸಲಾಗಿದೆ. ರಂಗಾಸಕ್ತರು ಹೆಚ್ಚಿನ .ಮಾಹಿತಿಗಾಗಿ ಮೊ. 72595 37777, 94804 68327, 98455 95505 ಸಂಪರ್ಕಿಸಬಹುದು.

PREV
Read more Articles on

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?