;Resize=(412,232))
ನವದೆಹಲಿ: ಸಿಜೆಪಿಯ ತಿರಂಗಾ ಪ್ರತಿಭಟನೆಯಿಂದ ವ್ಯಾಪಾರಿಗಳಿಗೆ ಯಾವುದೇ ನಷ್ಟ ಉಂಟಾದರೆ, ತನ್ನ ಅಧಿಕಾರವನ್ನು ಚಲಾಯಿಸಿ ಅದಕ್ಕೆ ಪರಿಹಾರ ಒದಗಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಭರವಸೆ ನೀಡಿದೆ.
ಮುಖ್ಯ ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ಜಯಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ವ್ಯಾಪಾರಿ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಜೈ ಅನಂತ್ ದೇಹದ್ರಾಯ್, ಕನ್ನಾಟ್ ಪ್ಲೇಸ್ ಬಂದ್ ಮಾಡುವುದರಿಂದ ನಿತ್ಯ 200 ಕೋಟಿ ರು. ವಹಿವಾಟಿಗೆ ಧಕ್ಕೆಯಾಗಲಿದೆ ಎಂದು ಪೀಠದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್ಡಿಎಂಸಿ) ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ ಬಂದ್ ಮಾಡಿರುವುದು ಪ್ರಮಾಣಬದ್ಧವಲ್ಲ ಎಂದು ಕಂಡುಬಂದರೆ ಹಾಗೂ ವ್ಯಾಪಾರಿಗಳಿಗೆ ನಷ್ಟವಾಗಿದೆ ಎಂದು ಸಾಬೀತಾದರೆ, ಸಾಂವಿಧಾನಾತ್ಮಕ ಪರಿಹಾರ ವ್ಯಾಪ್ತಿಯಡಿ ಕೋರ್ಟ್ ತನ್ನ ಅಧಿಕಾರ ಬಳಸಿ ಪರಿಹಾರ ಕೊಡಿಸಲಿದೆ’ ಎಂದು ಭರವಸೆ ನೀಡಿತು.