ಟಾಟಾ ಛೋಟಾ ಹಾಥಿಗೆ 21ರ ಸಂಭ್ರಮ: ಹೊಸ ಏಸ್ ಗೋಲ್ಡ್+ ಎಕ್ಸ್ಎಲ್ ಮಾರುಕಟ್ಟೆಗೆ ಬಿಡುಗಡೆ

KannadaprabhaNewsNetwork |  
Published : May 12, 2026, 03:15 AM IST
ಟಾಟಾ | Kannada Prabha

ಸಾರಾಂಶ

ಟಾಟಾ ಮೋಟಾರ್ಸ್‌ನ ಐಕಾನಿಕ್ ಬ್ರ್ಯಾಂಡ್ ಟಾಟಾ ಏಸ್ ಈಗ ಯಶಸ್ವಿ 21ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಕುರಿತ ವರದಿ ಇಲ್ಲಿದೆ.

ಕನ್ನಡಪ್ರಭವಾರ್ತೆ ಬೆಂಗಳೂರು: ಭಾರತದ ರಸ್ತೆಗಳಲ್ಲಿ ಸಣ್ಣ ಸರಕು ಸಾಗಣೆಯ ಕ್ರಾಂತಿ ಆರಂಭಿಸಿದ ಟಾಟಾ ಮೋಟಾರ್ಸ್‌ನ ಐಕಾನಿಕ್ ಬ್ರ್ಯಾಂಡ್ ಟಾಟಾ ಏಸ್ ಈಗ ಯಶಸ್ವಿ 21ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಐತಿಹಾಸಿಕ ಮೈಲಿಗಲ್ಲನ್ನು ಸ್ಮರಿಸಲು ಸಂಸ್ಥೆಯು ಮತ್ತಷ್ಟು ಶಕ್ತಿಶಾಲಿ ಹಾಗೂ ಸುಧಾರಿತ ಟಾಟಾ ಏಸ್ ಗೋಲ್ಡ್+ ಎಕ್ಸ್ಎಲ್ ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಸಂಸ್ಥೆಯು ತನ್ನ 21 ವರ್ಷಗಳ ಪಯಣವನ್ನು ಸಂಭ್ರಮಿಸಲು ‘ಇಕ್ಕೀಸ್ ಸಾಲ್ ಬೆಮಿಸಾಲ್’ ಎಂಬ ರಾಷ್ಟ್ರವ್ಯಾಪಿ ಅಭಿಯಾನವನ್ನು ಹಮ್ಮಿಕೊಂಡಿದೆ. ಕಳೆದ ಎರಡು ದಶಕಗಳಲ್ಲಿ ಲಕ್ಷಾಂತರ ಉದ್ಯಮಿಗಳ ಬದುಕಿಗೆ ಆಧಾರವಾಗಿರುವ ಈ ಛೋಟಾ ಹಾಥಿಯ ಯಶಸ್ಸನ್ನು ಈ ಅಭಿಯಾನ ಗೌರವಿಸುತ್ತದೆ. ವಿಶೇಷವಾಗಿ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ₹21,000 ವರೆಗಿನ ಹೆಚ್ಚುವರಿ ಪ್ರಯೋಜನಗಳನ್ನು ಸಂಸ್ಥೆ ಘೋಷಿಸಿದೆ.ಹೊಸ ಏಸ್ ಗೋಲ್ಡ್+ ಎಕ್ಸ್ಎಲ್ ಅನ್ನು ಇಂದಿನ ಲಾಜಿಸ್ಟಿಕ್ಸ್ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಈ ವಾಹನವು 8 ಅಡಿ ಉದ್ದದ ಲೋಡ್ ಬಾಡಿ ಮತ್ತು 1 ಟನ್ ಪೇಲೋಡ್ ಸಾಮರ್ಥ್ಯ ಹೊಂದಿದ್ದು, ಪ್ರತಿ ಟ್ರಿಪ್‌ನಲ್ಲಿ ಹೆಚ್ಚಿನ ಲಾಭ ತಂದುಕೊಡಲಿದೆ.

700 ಸಿಸಿ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, 22 ಪಿಎಸ್ ಪವರ್ ಮತ್ತು 55 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.ಸುಧಾರಿತ ಎಲ್ಎನ್ ಟಿ ತಂತ್ರಜ್ಞಾನ ಇರುವುದರಿಂದ ಇದರಲ್ಲಿ ಡೀಸೆಲ್ ಎಕ್ಸಾಸ್ಟ್ ಫ್ಲೂಯಿಡ್ ಅಗತ್ಯವಿಲ್ಲ. ಇದು ಮಾಲೀಕರ ನಿರ್ವಹಣಾ ವೆಚ್ಚವನ್ನು ಗಮನಾರ್ಹವಾಗಿ ತಗ್ಗಿಸುತ್ತದೆ.ವಾಹನ ಬಿಡುಗಡೆ ಮಾಡಿ ಮಾತನಾಡಿದ ಟಾಟಾ ಮೋಟಾರ್ಸ್‌ನ ಉಪಾಧ್ಯಕ್ಷ ಶ್ರೀ ಪಿನಾಕಿ ಹಲ್ದಾರ್, ‘2005ರಲ್ಲಿ ಆರಂಭವಾದ ಟಾಟಾ ಏಸ್ ಪಯಣ ಅದ್ಭುತವಾದುದು. ದೇಶಾದ್ಯಂತ 26 ಲಕ್ಷಕ್ಕೂ ಹೆಚ್ಚು ಮಾಲೀಕರು ನಮ್ಮ ಮೇಲಿಟ್ಟಿರುವ ನಂಬಿಕೆಗೆ ನಾವು ಋಣಿ. ಅಂಕಿಅಂಶಗಳ ಪ್ರಕಾರ ಕಳೆದ 21 ವರ್ಷಗಳಿಂದ ಪ್ರತಿ 4.25 ನಿಮಿಷಕ್ಕೆ ಒಂದು ಏಸ್ ಮಾರಾಟವಾಗುತ್ತಿದೆ’ ಎಂದು ಹೆಮ್ಮೆಯಿಂದ ತಿಳಿಸಿದರು.

ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ ‘ಸಂಪೂರ್ಣ ಸೇವಾ 2.0’ ಮೂಲಕ ನಿರಂತರ ಬೆಂಬಲ ನೀಡುತ್ತಿದೆ. ದೇಶಾದ್ಯಂತ ಇರುವ 2,500ಕ್ಕೂ ಹೆಚ್ಚು ಸೇವಾ ಕೇಂದ್ರಗಳು ಮತ್ತು ತರಬೇತಿ ಪಡೆದ ತಂತ್ರಜ್ಞರ ಜಾಲವು ಏಸ್ ಮಾಲೀಕರಿಗೆ ಯಾವುದೇ ಅಡೆತಡೆಯಿಲ್ಲದ ವ್ಯಾಪಾರಕ್ಕೆ ಸಾಥ್ ನೀಡಲಿವೆ.

ಹೊಸ ಏಸ್ ಗೋಲ್ಡ್+ ಎಕ್ಸ್ಎಲ್ ಈಗ ಅಸ್ತಿತ್ವದಲ್ಲಿರುವ ಏಸ್ ಮಾಲೀಕರಿಗೆ ಅಪ್‌ಗ್ರೇಡ್ ಆಗಲು ಮತ್ತು ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಅತ್ಯುತ್ತಮ ವೇದಿಕೆಯಾಗಿ ಹೊರಹೊಮ್ಮಿದೆ.

PREV

Recommended Stories

ಹಣ ಉಳಿಸಲು ಬಳಕೆಯಾಗುವ 5 ಸೂಪರ್ ಐಡಿಯಾಗಳು
ವಿಶ್ವಕ್ಕೆ ಹವಾಮಾನ ನೀತಿ ಪಾಠ ಮಾಡಿದವರಿಗೇ ಬಿಸಿ!