ಯುಪಿಐ ವರ್ಸಸ್ ಕ್ರೆಡಿಟ್ ಕಾರ್ಡ್ - ಅ.15ರ ಬಳಿಕ ಯಾವ ಸಂದರ್ಭಕ್ಕೆ, ಯಾವ ವಿಧಾನ ಒಳ್ಳೆಯದು?

Published : Sep 22, 2026, 12:53 PM IST
upi

ಸಾರಾಂಶ

ಅ.15ರ ಬಳಿಕ ಎಂಡಿಆರ್‌ ಜಾರಿಗೆ ಬರಲಿದೆ. ಅನಂತರ ಯಾವುದಕ್ಕೆ ಯುಪಿಐ ಬಳಿದರೆ ಒಳಿತು, ಯಾವ ಸಂದರ್ಭದಲ್ಲಿ ಕ್ರೆಡಿಟ್‌ ಕಾರ್ಡ್‌ ಬಳಸಬಹುದು ಎಂಬ ಮಾಹಿತಿ ಇರುವ ಲೇಖನ. ₹2,000 ಮೇಲ್ಪಟ್ಟ ಆಯ್ದ ವಹಿವಾಟುಗಳಿಗೆ ಶೇ. 0.4ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ನಿಗದಿಪಡಿಸಿದೆ

ಅ.15ರ ಬಳಿಕ ಎಂಡಿಆರ್‌ ಜಾರಿಗೆ ಬರಲಿದೆ. ಅನಂತರ ಯಾವುದಕ್ಕೆ ಯುಪಿಐ ಬಳಿದರೆ ಒಳಿತು, ಯಾವ ಸಂದರ್ಭದಲ್ಲಿ ಕ್ರೆಡಿಟ್‌ ಕಾರ್ಡ್‌ ಬಳಸಬಹುದು ಎಂಬ ಮಾಹಿತಿ ಇರುವ ಲೇಖನ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಕ್ಟೋಬರ್ 15ರಿಂದ ಜಾರಿಗೆ ಬರುವಂತೆ, ವ್ಯಕ್ತಿಯಿಂದ ವ್ಯಾಪಾರಿಗೆ ನಡೆಯುವ ₹2,000 ಮೇಲ್ಪಟ್ಟ ಆಯ್ದ ವಹಿವಾಟುಗಳಿಗೆ ಶೇ. 0.4ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ನಿಗದಿಪಡಿಸಿದೆ. ₹75,000ಕ್ಕಿಂತ ಹೆಚ್ಚಿನ ಮೊತ್ತಕ್ಕೆ ಈ ಶುಲ್ಕ ಗರಿಷ್ಠ ₹300 ಆಗಿರುತ್ತದೆ. ಆದರೆ, ವ್ಯಕ್ತಿಯಿಂದ ವ್ಯಕ್ತಿಗೆ ಹಣ ವರ್ಗಾವಣೆ ಎಂದಿನಂತೆ ಸಂಪೂರ್ಣ ಉಚಿತವಾಗಿರುತ್ತದೆ. ತಿಂಗಳಿಗೆ ₹1 ಲಕ್ಷದವರೆಗೆ ವಹಿವಾಟು ನಡೆಸುವ ಸಣ್ಣ ವ್ಯಾಪಾರಿಗಳಿಗೂ ಯಾವುದೇ ಎಂಡಿಆರ್ ಶುಲ್ಕವಿರುವುದಿಲ್ಲ. ಸಂದರ್ಭ ಹೀಗಿರುವಾಗ ಅ.15ರ ಬಳಿಕ ಏನೇನು ಬದಲಾವಣೆ ಆಗಲಿದೆ ಎಂಬ ಗೊಂದಲ ಗ್ರಾಹಕರನ್ನು ಕಾಡುತ್ತಿದೆ.

ಗ್ರಾಹಕರಿಗೆ ಏನು ಬದಲಾವಣೆ?

ಈ ಶುಲ್ಕ ವ್ಯಾಪಾರಿಗಳಿಗೆ ಅನ್ವಯವಾಗುವುದರಿಂದ, ಸಾಮಾನ್ಯ ಗ್ರಾಹಕರು ಹಣ ಪಾವತಿಸುವ ವಿಧಾನದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದರೆ, ದೊಡ್ಡ ಮೊತ್ತದ ವಹಿವಾಟುಗಳಲ್ಲಿ ಯುಪಿಐ ಅಥವಾ ಕ್ರೆಡಿಟ್ ಕಾರ್ಡ್ ವುದು ಹೆಚ್ಚು ಲಾಭದಾಯಕ ಎಂಬ ಪ್ರಶ್ನೆ ಎದುರಾಗುತ್ತದೆ.

ಕ್ರೆಡಿಟ್ ಕಾರ್ಡ್ ಯಾವಾಗ ಸೂಕ್ತ?

1. ₹10,000 ಮೌಲ್ಯದ ಖರೀದಿಗೆ ಶೇ. 1ರಷ್ಟು ಕ್ಯಾಶ್‌ಬ್ಯಾಕ್ ಸಿಕ್ಕರೆ ₹100 ಉಳಿತಾಯವಾಗುತ್ತದೆ. ಯುಪಿಐಗಿಂತ ಕಾರ್ಡ್ ಮೂಲಕ ಹೆಚ್ಚಿನ ಮೌಲ್ಯ ಲಭ್ಯವಿದ್ದಾಗ ಇದು ಉಪಯುಕ್ತ.

2. ಖಾತೆಯಿಂದ ತಕ್ಷಣವೇ ಹಣ ಕಡಿತವಾಗುವುದಿಲ್ಲ. 45–50 ದಿನಗಳ ಬಡ್ಡಿರಹಿತ ಅವಧಿ ಸಿಗುತ್ತದೆ ಹಾಗೂ ದೊಡ್ಡ ಮೊತ್ತವನ್ನು ಇಎಂಐ ಆಗಿ ಪರಿವರ್ತಿಸಬಹುದು.

3. ನಿಗದಿತ ದಿನಾಂಕದೊಳಗೆ ಪೂರ್ಣ ಬಾಕಿಯನ್ನು ಪಾವತಿಸದಿದ್ದರೆ ಬಡ್ಡಿ ಮತ್ತು ದಂಡದ ಹೊರೆ ಹೆಚ್ಚುವುದಲ್ಲದೆ, ಕ್ರೆಡಿಟ್ ಸ್ಕೋರ್‌ಗೂ ಹಾನಿಯಾಗುತ್ತದೆ.

ಯುಪಿಐ ಯಾವಾಗ ಉತ್ತಮ?

1. ದಿನಸಿ, ತರಕಾರಿ, ಹಾಲಿನ ಬಿಲ್ ಮುಂತಾದ ನಿಯಮಿತ ವೆಚ್ಚಗಳಿಗೆ ಯುಪಿಐ ಅತ್ಯಂತ ಸೂಕ್ತ.

2. ಉಳಿತಾಯ ಖಾತೆಯಿಂದ ಹಣ ತಕ್ಷಣ ಕಡಿತವಾಗುವುದರಿಂದ ಯಾವುದೇ ಬಿಲ್ ನೆನಪಿಟ್ಟುಕೊಳ್ಳುವ ಗೋಜಿಲ್ಲ. ತಿಂಗಳಿಗೆ ಎಷ್ಟು ಹಣ ಉಳಿದಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

3. ₹2,000 ಕ್ಕಿಂತ ಕಡಿಮೆ ಮೊತ್ತದ ದಿನನಿತ್ಯದ ವಹಿವಾಟುಗಳಿಗೆ ಯುಪಿಐ ಸರಳ ಮತ್ತು ತ್ವರಿತ ಮಾಧ್ಯಮ.

ಕೇವಲ ವಹಿವಾಟಿನ ಗಾತ್ರದ ಆಧಾರದಲ್ಲಿ ಪಾವತಿ ವಿಧಾನವನ್ನು ಆರಿಸಬೇಡಿ. ನಿಯಮಿತ ದಿನನಿತ್ಯದ ಖರ್ಚುಗಳಿಗೆ ಯುಪಿಐ ಬಳಸಿ. ಆದರೆ, ಆಕರ್ಷಕ ಕ್ಯಾಶ್‌ಬ್ಯಾಕ್, ರಿಯಾಯಿತಿ ಮತ್ತು ರಿವಾರ್ಡ್ ಪಾಯಿಂಟ್‌ಗಳಿರುವ ದೊಡ್ಡ ಮೊತ್ತದ ಖರೀದಿಗಳಿಗೆ ಸಮಯಕ್ಕೆ ಸರಿಯಾಗಿ ಮರುಪಾವತಿಸುವ ಸಾಮರ್ಥ್ಯವಿದ್ದರೆ ಕ್ರೆಡಿಟ್ ಕಾರ್ಡ್ ಆರಿಸಿಕೊಳ್ಳುವುದು ಜಾಣತನ.

PREV
Read more Articles on

Recommended Stories

ಬಾಹ್ಯಾಕಾಶ ಕೇಂದ್ರಗಳಲ್ಲೇ ಡೇಟಾಬೇಸ್‌ ಇರಬೇಕು
ಆಲ್ಜೀಮರ್ಸ್ ಎಂಬ ಅರುಳು ಮರುಳು ರೋಗ