ಯಶ್ ಟಾಕ್ಸಿಕ್ ಬಿಡುಗಡೆ ಮತ್ತೆ ಮುಂದಕ್ಕೆ ಜೂನ್‌ 4ರಂದು ಟಾಕ್ಸಿಕ್‌ ಬಿಡುಗಡೆ ಇಲ್ಲ

Published : Apr 30, 2026, 12:28 PM IST
Yash

ಸಾರಾಂಶ

ಯಶ್ ‘ಟಾಕ್ಸಿಕ್‌’ ಚಿತ್ರ ಬಿಡುಗಡೆ ಮತ್ತೆ ಮುಂದೆ ಹೋಗಿದೆ. ಈ ಹಿಂದೆ ನಿಗದಿಯಾಗಿದ್ದ ಜೂ. 4ರಂದು ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಮುಂದಿನ ಬಿಡುಗಡೆ ದಿನಾಂಕ ತಿಳಿಸುವುದಾಗಿ ಯಶ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

 ಸಿನಿವಾರ್ತೆ

ಯಶ್ ‘ಟಾಕ್ಸಿಕ್‌’ ಚಿತ್ರ ಬಿಡುಗಡೆ ಮತ್ತೆ ಮುಂದೆ ಹೋಗಿದೆ. ಈ ಹಿಂದೆ ನಿಗದಿಯಾಗಿದ್ದ ಜೂ. 4ರಂದು ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಮುಂದಿನ ಬಿಡುಗಡೆ ದಿನಾಂಕ ತಿಳಿಸುವುದಾಗಿ ಯಶ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಸಿನಿಮಾಕಾನ್‌’ ಕಾರ್ಯಕ್ರಮದಲ್ಲಿ ಯಶ್

ಯಶ್ ಇತ್ತೀಚೆಗೆ ಈ ಚಿತ್ರದ ಪ್ರಚಾರಕ್ಕೆ ಅಮೆರಿಕಾದಲ್ಲಿ ‘ಸಿನಿಮಾಕಾನ್‌’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅಲ್ಲಿಂದ ಬಂದ ಬಳಿಕ ಈ ಬೆಳವಣಿಗೆ ನಡೆದಿದೆ.

ಈ ಕುರಿತು ಯಶ್ ಸುದೀರ್ಘ ಪತ್ರ ಬರೆದಿದ್ದಾರೆ.  

ಆ ಪತ್ರದ ಭಾವಾನುವಾದ ಇಲ್ಲಿದೆ:

ಕೆಲವು ಸಿನಿಮಾಗಳನ್ನು ನಾವು ರೂಪಿಸುತ್ತೇವೆ. ಆದರೆ ಕೆಲವು ಸಿನಿಮಾಗಳು ನಾವು ಯಾಕೆ ಸಿನಿಮಾ ವ್ಯಾಮೋಹಕ್ಕೆ ಬಿದ್ದೆವು ಎಂಬುದನ್ನು ನೆನಪಿಸುತ್ತವೆ. ಟಾಕ್ಸಿಕ್ ಅಂಥಾ ಒಂದು ಪಯಣ. ಸಿನಿಮಾಕಾನ್‌ನಲ್ಲಿ ನಮ್ಮ ಸಿನಿಮಾದ ತುಣುಕನ್ನು ಪ್ರದರ್ಶಿಸಿದ ಬಳಿಕ ನಮಗೆ ಜಗತ್ತಿನ ಎಲ್ಲಾ ಕಡೆಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಪ್ರತಿಕ್ರಿಯೆ ಈ ಸಿನಿಮಾ ಅತಿಹೆಚ್ಚು ಜನರನ್ನು ತಲುಪಬೇಕು ಎಂಬ ನಮ್ಮ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಟಾಕ್ಸಿಕ್‌ ಕೆಲಸಗಳು ಪೂರ್ತಿಯಾಗಿವೆ. ನಾವು ಈಗ ವಿದೇಶದಲ್ಲಿ ವಿತರಣೆ, ಪಾಲುದಾರಿಕೆ ಹೊಂದುವ ಪ್ರಕ್ರಿಯೆ ಕಡೆಗೆ ಗಮನ ಹರಿಸಿದ್ದೇವೆ. ಹಾಗಾಗಿ ಚಿತ್ರದ ಬಿಡುಗಡೆಯನ್ನು ಮುಂದೂಡಲು ನಿರ್ಧರಿಸಿದ್ದೇವೆ. ಸೂಕ್ತ ಅನ್ನಿಸುವ ಮತ್ತೊಂದು ದಿನ ನಿಗದಿಪಡಿಸಿ ಜಗತ್ತಿನಾದ್ಯಂತ ಬಿಡುಗಡೆ ಮಾಡುತ್ತೇವೆ.

ಭಾರತೀಯ ಸಿನಿಮಾ ಈಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ಸಂದರ್ಭದಲ್ಲಿ ನಾವು ಮತ್ತಷ್ಟು ಎತ್ತರಕ್ಕೆ ಸಾಗಬೇಕಿದೆ. ಒಬ್ಬ ನಟ, ನಿರ್ಮಾಪಕನಾಗಿ ಈ ಸಮಯವನ್ನು ಭಾರತೀಯ ಚಿತ್ರರಂಗಕ್ಕೆ ನನ್ನ ಪಾಲಿನ ಕೊಡುಗೆ ನೀಡುವುದಕ್ಕೆ ದೊರೆತ ಅವಕಾಶ ಎಂದು ಭಾವಿಸಿದ್ದೇನೆ.

ನನ್ನೆಲ್ಲಾ ಹೆಜ್ಜೆಗಳಿಗೆ, ಬದಲಾವಣೆಗಳಿಗೆ ನೀವು ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದ್ದೀರಿ. ಈ ಪ್ರೀತಿಯನ್ನು ತುಂಬು ಹೃದಯದಿಂದ ನೆನೆಸಿಕೊಳ್ಳುತ್ತಿದ್ದೇನೆ. ಕೆಲವು ಸಿನಿಮಾದಳು ತಾಳ್ಮೆ ಬೇಡುತ್ತವೆ. ತಡವಾದರೂ ನಾವು ಭಾರತೀಯ ಸಿನಿಮಾರಂಗ ಹೆಮ್ಮೆ ಪಡುವಂತಹ, ಎಲ್ಲರೂ ಸಂಭ್ರಮಿಸುವಂತಹ ಸಿನಿಮಾ ಕೊಡುತ್ತೇವೆ ಎಂದು ಈ ಮೂಲಕ ಭರವಸೆ ನೀಡುತ್ತಿದ್ದೇವೆ.

PREV
Read more Articles on

Recommended Stories

ವನ ವೈಭವ : ದೇಶದಲ್ಲೇ ಮೊದಲ ಅರಣ್ಯ ಶ್ವಾನಪಡೆ ಕರ್ನಾಟಕದಲ್ಲಿ
ವನವೈಭವ - ಕರ್ನಾಟಕದ ಅರಣ್ಯಗಳು ಔಷಧೀಯ ಸಸ್ಯಗಳ ಕಣಜ