ಹೃದಯವಂತರ ಯೋಗ ಸೆಪ್ಟೆಂಬರ್ 29 ವಿಶ್ವ ಹೃದಯ ದಿನ

Published : Sep 29, 2026, 11:54 AM IST
yoga

ಸಾರಾಂಶ

ಹೌದು ಆರೋಗ್ಯವಂತರಾಗಬೇಕಾದರೆ ಹೃದಯವಂತರಾಗಿರಬೇಕು. ಸಂತೃಪ್ತ ಮನಸ್ಸು ಉತ್ತಮ ಆರೋಗ್ಯಕ್ಕೆ ರಾಜಮಾರ್ಗ. ಮನ್ಹಾ ಪ್ರಸನ್ನೋಪಾಯ ಯೋಗ ಎಂಬ ವ್ಯಾಖ್ಯಾನ ದಂತೆ, ಆರೋಗ್ಯ ಕಾಪಾಡುವಲ್ಲಿ ಮಾನಸಿಕ ನೆಮ್ಮದಿಯ ಪಾತ್ರ ಪ್ರಮುಖವಾದದ್ದು

ಹೌದು ಆರೋಗ್ಯವಂತರಾಗಬೇಕಾದರೆ ಹೃದಯವಂತರಾಗಿರಬೇಕು. ಸಂತೃಪ್ತ ಮನಸ್ಸು ಉತ್ತಮ ಆರೋಗ್ಯಕ್ಕೆ ರಾಜಮಾರ್ಗ. ಮನ್ಹಾ ಪ್ರಸನ್ನೋಪಾಯ ಯೋಗ ಎಂಬ ವ್ಯಾಖ್ಯಾನ ದಂತೆ, ಆರೋಗ್ಯ ಕಾಪಾಡುವಲ್ಲಿ ಮಾನಸಿಕ ನೆಮ್ಮದಿಯ ಪಾತ್ರ ಪ್ರಮುಖವಾದದ್ದು. ನೆಮ್ಮದಿ ಸಂತೋಷ ಆನಂದ ನಮ್ಮೊಳಗಿನ ಪ್ರಜ್ಞಾಸ್ಥಿತಿಯಾಗಿದೆ. ಮಾನವ ಪ್ರಜ್ಞೆ ಯೋಗಜ್ಞಾನದ ದ್ಯೇಯ. ಹೃದಯ ಕಮಲವೆಂಬ ಒಂದು ಅಂಗವು ಕೇವಲ ಮಾಂಸ ಕಂಡವಲ್ಲ, ಪ್ರತಿಯೊಬ್ಬರ ಭಾವನೆಗೆ ಮಿಡಿಯುವ ಹೃದಯವು ಸ್ವಸ್ಥ ಮನಸ್ಸಿನಿಂದ ಮಾತ್ರ ಸಾಧ್ಯ. ಹೃದಯವಂತರಾಗಬೇಕಾದರೆ ಪ್ರತಿಕ್ಷಣವನ್ನು ಆಸ್ವಾದಿಸುವ ಆನಂದಿಸುವ ಅನುಭವಿಸುವ ಕೌಶಲ್ಯ ನಮ್ಮದಾಗಬೇಕು. ಇದನ್ನು ಯೋಗಹ ಕರ್ಮಸು ಕೌಶಲ್ಯಂ ಎಂದು ವ್ಯಾಖ್ಯಾನಿಸಿದ್ದು. ಉದಾಹರಣೆಗೆ ನಾವು ಮಾಡುವ ಕೆಲಸವನ್ನು ಆನಂದದಯಕವಾಗಿ ಅನುಭವಿಸಿದಾಗ ಮನಶಾಂತಿ ನೆಮ್ಮದಿ ಹಾಗೂ ಆರೋಗ್ಯವನ್ನು ಪಡೆಯಬಹುದು.

ಹೃದಯದ ಆರೋಗ್ಯಕ್ಕೆ ಯೋಗದ ಅಭ್ಯಾಸ: ಯೋಗಾಭ್ಯಾಸವು ಯಾವುದೇ ಒಂದು ಅಂಗಕ್ಕೆ ಸೀಮಿತವಾದ ವಿದ್ಯೆಯಲ್ಲ. ಅದು ದೇಹ ಮನಸು ಆತ್ಮದ ಸಾಮರಸ್ಯವನ್ನು ಕಾಪಾಡಿ ಮನೋದೈಹಿಕ ಸದೃಢತೆಯನ್ನು ನೀಡುವ ಅಭ್ಯಾಸ ಕ್ರಮ. ಅಭ್ಯಾಸ ರೂಪದಲ್ಲಿ ಅನುಷ್ಠಾನ ಮಾಡುವ ಯೋಗದ ಶುದ್ಧೀಕರಣ ಕ್ರಿಯೆ ಯೋಗಾಸನಗಳು ಸೂರ್ಯನಮಸ್ಕಾರ ಪ್ರಾಣಾಯಾಮ ಬಂಧ ಮುದ್ರ ಧ್ಯಾನ ಇವೆಲ್ಲವೂ ನಿತ್ಯ ಅನುಷ್ಠಾನದೊಂದಿಗೆ ದೈಹಿಕ ಕ್ಷಮತೆ ಯನ್ನು ಹಾಗೂ ಮಾನಸಿಕ ಸ್ಥಿರತೆಯನ್ನು ಸಾಧಿಸುವ ಮೂಲಕ ಹೃದಯದಕ್ಷತೆಯನ್ನು ಉತ್ತಮಪಡಿಸಿಕೊಳ್ಳಬಹುದು. ಯಾವ ವ್ಯಕ್ತಿಗೆ ಯಾವ ಅಭ್ಯಾಸಗಳು ಎಷ್ಟು ಅಭ್ಯಾಸ ಎಂಬುದನ್ನು ಯೋಗ್ಯಯೋಗ ಗುರುವಿನ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ನಿತ್ಯ ಅನುಷ್ಠಾನಕ್ಕೆ ರೂಡಿಸಿಕೊಳ್ಳಬೇಕು.

ಅಭ್ಯಾಸದ ಫಲಿತಾಂಶವು ಹೃದಯವಂತ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು

ದಿನದ ಒಂದಷ್ಟು ಸಮಯ ನಮಗಾಗಿ ಮೀಸಲಿಟ್ಟು ನಿತ್ಯ ಅಭ್ಯಾಸವನ್ನು ಅನುಷ್ಠಾನ ಮಾಡಿದಾಗ ಯೋಗ ಅಭ್ಯಾಸದ ಫಲಿತಾಂಶವು ಹೃದಯವಂತ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು. ಸರಳವಾದ ಯೋಗಾಸನಗಳನ್ನು ಮಾಡುವ ಮೂಲಕ ಹೃದಯದ ಕಾರ್ಯಬೇಕೆಂದು ಉತ್ತಮವಾಗ ಬಲ್ಲದು ಉದಾಹರಣೆಗೆ ನಿತ್ಯ ಯೋಗಅಸನ ಮಾಡುವ ಮೂಲಕ ರಕ್ತ ಶುದ್ಧೀಕರಣ ರಕ್ತ ಪರಿಚಲನೆ ಹಾಗೂ ರಕ್ತದ ಗುಣಮಟ್ಟ ಉತ್ತಮವಾಗಿಸುತ್ತದೆ ಎಂದು ಅಭ್ಯಾಸದ ಅನುಭವ ಹೌದು ವೈಜ್ಞಾನಿಕ ಫಲಿತಾಂಶ ಹೌದು. ಲಯಬದ್ಧ ಉಸಿರಾಟದ ಅಭ್ಯಾಸವನ್ನು ಪ್ರಾಣಾಯಾಮ ಎಂಬ ಬದುಕಿನ ಚೈತನ್ಯವಾಗಿ ನಿತ್ಯ ಅನುಷ್ಠಾನ ಮಾಡಿದಾಗ ಸಹಜವಾಗಿ ದೇಹಕ್ಕೆ ಬೇಕಾದ ಚೈತನ್ಯವನ್ನು ಹೃದಯದ ಅಕ್ಷತೆಯೊಂದಿಗೆ ಪಡೆಯಬಹುದು. ಉಜ್ಜಾಯಿ ಪ್ರಾಣಾಯಾಮ, ಅನುಲೋಮ ವಿಲೋಮ ಪ್ರಾಣಯಾಮ, ನಾಡಿಶೋಧನಾ ಪ್ರಾಣಾಯಾಮ, ಚಂದ್ರ ಬೇದನಾ ಪ್ರಾಣಾಯಾಮ ಇಂತಹ ಪ್ರಾಣಾಯಾಮವು ಆರೋಗ್ಯ ಸಮಸ್ಯೆ ಇರುವವರಿಗೂ ಪರಿಣಾಮಕಾರಿಯಾಗಿ ಪ್ರಯೋಜನ ಬರುವುದು ಮಾತ್ರವಲ್ಲದೇ ಪ್ರಾಣಾಯಾಮ ಅಭ್ಯಾಸವು ಪ್ರಾಣಶಕ್ತಿಯಾಗಿ ಪ್ರತಿ ಜೀವಕೋಶಗಳಿಗೂ ಸ್ಪಂದನೆ ನೀಡಬಲ್ಲದು.

ಧ್ಯಾನವೆಂಬ ಅಭ್ಯಾಸದ ಅನುಭವವು ಮಾನವನನ್ನು ಇನ್ನಷ್ಟು ಹೃದಯವಂತರನ್ನಾಗಿಸುತ್ತದೆ. ಧ್ಯಾನದ ವಿಶಾಲತೆಯ ಅರಿವಿನ ಅನುಭವ ಮಾನವ ಪಡೆದಾಗ ಯಾವುದೇ ಸ್ವಾರ್ಥ ದ್ವೇಷ ಮದ ಮತ್ಸರ ಇತ್ಯಾದಿಗಳು ದೂರವಾಗಿ ತನ್ನ ಆತ್ಮವೂ ಶ್ರೇಷ್ಠವಾದ ಆತ್ಮ ಅದೇ ರೀತಿ ಪ್ರತಿಯೊಂದು ಜೀವಿಯ ಆತ್ಮವೂ ಶ್ರೇಷ್ಠವಾದದ್ದು ಎಂಬ ಅರಿವನ್ನು ಮಾನವ ಪಡೆದಾಗ ಸರ್ವೇ ಜನ ಸುಖಿನೋ ಭವಂತು ಎಂಬ ಪ್ರಜ್ಞೆ ಆರೋಗ್ಯವಂತ ಹೃದಯಕ್ಕೆ ಯಾವಾಗಲೂ ಬೇಕಾಗುತ್ತದೆ. ಧ್ಯಾನದ ಅನುಭವವೇ ಸರ್ವರ ಶ್ರೇಯಸ್ಸನ್ನು ಆಶಿಸುವುದು.

ಇನ್ನು ಅಷ್ಟಾಂಗ ಯೋಗದ ಯಮದ ಅಹಿಂಸ ಸತ್ಯ ಅಸ್ಟೈಯ ಅಪರಿಗ್ರಹ ಬ್ರಹ್ಮಚರ್ಯವೆಂಬ 5 ಅಂಶವನ್ನು ನಿತ್ಯ ಅನುಷ್ಠಾನ ಮಾಡಿದಾಗ ಸಹಜವಾಗಿಯೇ ಮಾನಸಿಕ ನೆಮ್ಮದಿಯನ್ನು ರೂಢಿಸಲು ಸಾಧ್ಯವಾಗುವುದು. ನೆಮ್ಮದಿಯ ಬದುಕಿ ಆರೋಗ್ಯವಂತ ಹೃದಯಕ್ಕೆ ಭದ್ರಬುನಾದಿ ನಿಯಮದ ಶೌಚ ಸಂತೋಷ ತಪಸ್ ಸ್ವ ಅಧ್ಯಾಯ ಈಶ್ವರ ಪ್ರಣಿದಾನವು ಮನುಷ್ಯನನ್ನು ಮತ್ತಷ್ಟು ಪ್ರಜ್ಞಾವಂತನಾಗಿಸಿ ನಿತ್ಯ ಜೀವನದಲ್ಲಿ ಸ್ಥಿತಪ್ರಜ್ಞೆಯನ್ನು ಅಭ್ಯಾಸ ಕ್ರಮದಿಂದ ಪಡೆಯಲು ಸಾಧ್ಯವಾಗುವು. ಮಹರ್ಷಿ ಪತಂಜಲಿ ಹೇಳುವ ಸೂತ್ರದಂತೆ ಸುಖವಾಗಲಿ ದುಃಖವಾಗಲಿ ಪುಣ್ಯವಾಗಲಿ ಅಪುಣ್ಯವಾಗಲಿ ಪರಿಸ್ಥಿತಿಯನ್ನು ಸ್ಥಿತಪ್ರಜ್ಞೆ ಯಿಂದ ಸ್ವೀಕರಿಸುವ ಮನೋವೃತ್ತಿ ಆರೋಗ್ಯಕರ ಹೃದಯಕ್ಕೂ ಪೂರಕ. ಅಷ್ಟಾಂಗ ಯೋಗದ ಐದನೇ ಅಂಗವು ಪ್ರತ್ಯಾಹಾರ ಎಂದರೆ ಇಂದ್ರಿಯಗಳ ಮೇಲೆ ಹತೋಟಿಯನ್ನು ಸಾಧಿಸುವುದೆಂದರ್ಥ. ಇಂದು ಹೆಚ್ಚಿನ ಹೃದಯ ಸಂಬಂಧಿ ಕಾಯಿಲೆಗಳಿಗೆ ಮೂಲ ಕಾರಣ ಮನುಷ್ಯನ ಅತಿಯಾದ ಆಸೆ. ಪಂಚೇಂದ್ರಿಯಗಳ ಮೇಲೆ ಹತೋಟಿ ಸಾಧಿಸಿದಾಗ ಇಂದ್ರಿಯ ಜಯ ಪಡೆದು ಆರೋಗ್ಯಕ್ಕೆ ಬೇಕಾದ ಆಹಾರವಾಗಲಿ ವಿಚಾರವಾಗಲಿ ಕ್ರಿಯೆಯಾಗಲಿ ಪ್ರಜ್ಞಾಪೂರ್ವಕವಾಗಿ ವ್ಯವಹಾರಿಸಬಹುದು.

ಹೃದಯ ದಕ್ಷತೆ :

ಹೃದಯದ ದಕ್ಷತೆ ಎಂಬುವುದು ಗರ್ಭಕೋಶದಲ್ಲಿರುವ ಮಗುವಿನಿಂದ ಜೀವನದ ಕೊನೆಯ ದಿನದ ತನಕ ಕಾಪಾಡಿಕೊಳ್ಳಬೇಕಾದ ಪ್ರಮುಖ ಆರೋಗ್ಯದ ಅಂಗ. ಗರ್ಭಕೋಶದಲ್ಲಿರುವ ಮಗುವಿನ ಹೃದಯವು ಆರೋಗ್ಯವಾಗಿ ಮಿಡಿಯುತ್ತಿದೆಯೇ ಎಂಬುದನ್ನು ಆಧುನಿಕ ವೈದ್ಯಕೀಯ ತಂತ್ರಜ್ಞಾನ ಗಮನಿಸುವ ಹಾಗೆ, ಮಾನವ ಜನ್ಮ ಪಡೆದು ತನ್ನ ಬೆಳವಣಿಗೆಯ ಬಾಲ್ಯ ಯೌವನ ಪ್ರೌಢ ಹಾಗೂ ಹಿರಿತನದ ಪ್ರತಿ ಹಂತದಲ್ಲಿಯೂ ಹೃದಯವನ್ನು ಜೋಪಾನವಾಗಿ ಕಾಪಾಡುವುದು ಹಾಗೂ ಹೃದಯದ ಮಾತನ್ನು ಆಲಿಸುವುದು ಪ್ರಜ್ಞಾಪೂರ್ವಕವ ಆರೋಗ್ಯವಂತರ ಲಕ್ಷಣವಾಗಬೇಕು. ಹೃದಯಕ್ಕೆ ಒತ್ತಡ ನೀಡಬಹುದಾದ ಚಿಂತನೆಗಳನ್ನು, ಆಹಾರವನ್ನು ದುರಭ್ಯಾಸವನ್ನು ಪ್ರಜ್ಞಾಪೂರ್ವಕವಾಗಿ ದಿನದ ದಿನಾಚರಣೆಯಲ್ಲಿ ದೂರವಿಡಬೇಕು, ಇದನ್ನು ಮಾನವ ಪ್ರಜ್ಞೆ / ಆತ್ಮಜ್ಞಾನದ ಅರಿವು ಎಂಬ ಭಾವನೆಯಿಂದ ಅನುಷ್ಠಾನ ಮಾಡಬೇಕು. ಲೇಖಕರು ಕುಶಾಲಪ್ಪಗೌಡ ಆವಿಷ್ಕಾರ ಯೋಗ ಮಂಗಳೂರು 9845588740. yogaavishkar@gmail.com

PREV
Read more Articles on

Recommended Stories

ಹೃದಯ ತೊಂದರೆಗಳು ಮತ್ತು ದಂತ ಆರೋಗ್ಯ - ವಿಶ್ವ ಹೃದಯ ದಿನ- ಸೆಪ್ಟೆಂಬರ್ 29
ಹೃದಯ ಎಚ್ಚರಿಸುವ ಮುನ್ನವೇ ಎಚ್ಚರವಾಗೋಣ