ಪ್ರಚಾರವಿಲ್ಲದೆ ಸಪ್ಪೆಯಾದ ಭಾರತ-ಪಾಕಿಸ್ತಾನ್‌ ಡೇವಿಸ್‌ ಕಪ್‌ ಪಂದ್ಯಾವಳಿ

KannadaprabhaNewsNetwork | Updated : Feb 02 2024, 01:13 PM IST

ಸಾರಾಂಶ

ಸ್ಥಳಾಂತರದ ಕೂಗಿನ ನಡುವೆಯೂ ಇಸ್ಲಾಬಾದ್‌ನಲ್ಲಿ ಆಯೋಜನೆಯಾಗಿರುವ ಭಾರತ-ಪಾಕಿಸ್ತಾನ ನಡುವಿನ ಡೇವಿಸ್ ಕಪ್ ಪಂದ್ಯಾವಳಿ ಪ್ರಚಾರ ಹಾಗೂ ಸಂಭ್ರಮವಿಲ್ಲದೆ ಸಪ್ಪೆಯಾಗಿದೆ.

ಇಸ್ಲಾಮಾಬಾದ್: ಸ್ಥಳಾಂತರದ ಕೂಗಿನ ನಡುವೆಯೂ ಇಸ್ಲಾಬಾದ್‌ನಲ್ಲಿ ಆಯೋಜನೆಯಾಗಿರುವ ಭಾರತ-ಪಾಕಿಸ್ತಾನ ನಡುವಿನ ಡೇವಿಸ್ ಕಪ್ ಪಂದ್ಯಾವಳಿ ಪ್ರಚಾರ ಹಾಗೂ ಸಂಭ್ರಮವಿಲ್ಲದೆ ಸಪ್ಪೆಯಾಗಿದೆ. 

ಕ್ರೀಡಾಂಗಣದಲ್ಲಿ ಆಹ್ವಾನಿತ ಅತಿಥಿಗಳೂ ಸೇರಿದಂತೆ ಕೇವಲ 500 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯರು ಕೂಡಾ ಪಂದ್ಯ ವೀಕ್ಷಣೆಗೆ ಆಸಕ್ತಿ ತೋರಿಸುತ್ತಿಲ್ಲ. ಇಸ್ಲಾಮಾಬಾದ್ನ ಬೀದಿಗಳಲ್ಲಿ ಪಂದ್ಯಾವಳಿ ಕುರಿತು ಕನಿಷ್ಠ ಒಂದ ಪೋಸ್ಟರ್ ಕೂಡಾ ಕಾಣಸಿಗುತ್ತಿಲ್ಲ. 

ಭದ್ರತೆಯ ನೆಪವೊಡ್ಡಿ ಆಟಗಾರರನ್ನು ಹೋಟೆಲ್ ಮತ್ತು ಕ್ರೀಡಾಂಗಣಕ್ಕೆ ಸೀಮಿತಗೊಳಿಸಿಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಭಾರತ-ಪಾಕಿಸ್ತಾನ ನಡುವಿನ ಡೇವಿಸ್ ಕಪ್ ಪಂದ್ಯದ ವೀಕ್ಷಣೆ ಪಾಸ್‌ಗಾಗಿ ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನಗಳಿಂದ ಪಾಕಿಸ್ತಾನ್ ಟೆನಿಸ್ ಫೆಡರೇಶನ್‌ ಯಾವುದೇ ಬೇಡಿಕೆ ಬಂದಿಲ್ಲ. ದೂರದಿಂದ ಇಸ್ಲಾಮಾಬಾದ್ ನಗರಕ್ಕೆ ಜನ ಬರುತ್ತಾರೆಂಬ ನಿರೀಕ್ಷೆ ಕೂಡಾ ಇಲ್ಲ ಎಂದು ವರದಿಯಾಗಿದೆ.

ಪಾಕಿಸ್ತಾನದಲ್ಲಿ ವಿಶ್ವ ಗುಂಪು 1ರ ಪಂದ್ಯಾವಳಿಗೆ ಹೆಚ್ಚಿನ ಪ್ರಚಾರ ಸಿಗುತ್ತಿಲ್ಲ. ಒಂದೇ ಒಂದು ಪೋಸ್ಟರ್ ಕೂಡಾ 60 ವರ್ಷಗಳ ನಂತರ ಪಾಕಿಸ್ತಾನಕ್ಕೆ ಭಾರತ ಟೆನಿಸ್ ತಂಡ ಬಂದಿದೆ ಎಂಬ ಸುಳಿವನ್ನು ಕೂಡಾ ನೀಡುವುದಿಲ್ಲ. 

ಉತ್ಸಾಹದ ವಾತಾವರಣ ಕೂಡಾ ಇಸ್ಲಾಮಾಬಾದನಲ್ಲಿ ಕಾಣೆಯಾಗಿದೆ. ಶನಿವಾರ ಮತ್ತು ಭಾನುವಾರ ನಡೆಯುವ ಪಂದ್ಯದ ವೇಳೆ ಅತಿಥಿಗಳು ಸೇರಿದಂತೆ ಕೇವಲ 500 ಜನರಿಗೆ ಮಾತ್ರ ಕ್ರೀಡಾ ಸಂಕೀರ್ಣಕ್ಕೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.

ಭರ್ಜರಿಯಾಗಿ ಕೂಟ ಆಯೋಜಿಸುತ್ತಿದ್ದೆವು ಆದರೆ ಭದ್ರತಾ ವಿಷಯವೆತ್ತಿದ ಕಾರಣ ಯಾವುದೇ ಯಾವುದೇ ಆಡಂಬರವಿ ಲ್ಲದೆ ಆಯೋಜಿಸಲಾಗುತ್ತಿದೆ. ಅವರು ವಾಘಾ ಗಡಿ ಮೂಲಕ ಆಗಮಿಸಿದ್ದರೆ ಅಲ್ಲಿಯೇ ಸಂಭ್ರಮದ ಸ್ವಾಗತ ಕೋರುತ್ತಿದ್ದೆವು ಎಂದು ಪಿಟಿಎಫ್‌ನ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ನಿರ್ಬಂಧದ ನಡುವೆ ಪಂದ್ಯಾವಳಿ ನಡೆಸುತ್ತಿರುವುದಕ್ಕೆ ಪಿಟಿಎಫ್ ಖಜಾಂಚಿ ಮುಹಮ್ಮದ್ ಖಲೀಲ್ ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಥಳಾಂತರಕ್ಕೆ ಮನವಿ ಮಾಡಿದ್ದ ಭಾರತ : ಕಾಶ್ಮೀರ ದಿನಾಚರಣೆ ಹಾಗೂ ಚುನಾವಣೆಯು ಪಂದ್ಯಾವಳಿ ನಡೆಯುವ ಆಸುಪಾಸಿನ ದಿನಗಳಲ್ಲೆ ನಡೆಯುವುದರಿಂದ ಭದ್ರತೆಗೆ ಸಮಸ್ಯೆಗೆ ಕಾರಣವಾಗಬಹುದು. 

ಇಸ್ರೇಲ್ ಮತ್ತು ಫ್ಯಾಲೆಸ್ತೇನ್ ನಡುವಿನ ಯುದ್ದದ ವಿಷಯದಲ್ಲಿ ಭಾರತ ಹಾಗೂ ಪಾಕ್ ವಿರುದ್ಧ ನಿಲುವುಗಳನ್ನು ಹೊಂದಿದೆ. ಭಾರತದ ಆಟಗಾರರು ಭದ್ರತೆಯ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪಂದ್ಯಗಳನ್ನು ತಟಸ್ಥ ತಾಣಗಳಿಗೆ ಸ್ಥಳಾಂತರ ಮಾಡುವಂತೆ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್‌ಗೆ ಮನವಿ ಮಾಡಿಕೊಂಡಿತ್ತು.

ಭದ್ರತೆಯ ಕಾರಣದಿಂದ ಭಾರತದ ಆಟಗಾರರಿಗೆ ಹೋಟೆಲ್ ಮತ್ತು ಕ್ರೀಡಾಂಗಣ ಬಿಟ್ಟು ಬೇರೆಲ್ಲೂ ತೆರಳಲು ಅವಕಾಶವಿಲ್ಲ. ಶಾಪಿಂಗ್‌ ಮಾಲ್‌, ಪ್ರವಾಸಿ ತಾಣಗಳಿಗೂ ಕೂಡಾ ಅವರು ಹೋಗುವಂತಿಲ್ಲ.

ಭಾರತದ ಮನವಿ ತಿರಸ್ಕರಿಸಿದ್ದ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ ಮತ್ತು ಐಟಿಎಫ್ ನ್ಯಾಯಾಧೀಕರಣ ಕೆಲವು ನಿರ್ಬಂಧಗಳ ನಡುವೆ ಪಂದ್ಯ ಆಯೋಜನೆಗೆ ಸೂಚಿಸಿತ್ತು. ಆದ್ದರಿಂದ ಪ್ರಚಾರ ದೂರ ಉಳಿದಿದ್ದೇವೆ. 

ಆದಾಗ್ಯೂ ಕೆಪಿಕೆ, ಬಲೂಚ್, ಪಂಜಾಬ್ನ ಪಶ್ಚಿಮ ಭಾಗಗಳ ಜನರಿಂದ ಪಂದ್ಯ ವೀಕ್ಷಣೆಗೆ ಪಾಸ್ ನೀಡುವಂತೆ ಬೇಡಿಕೆ ಬಂದಿತ್ತು ಎಂದು ಸಂಘಟನಾ ಸಮಿತಿಯ ಆಸಿಮ್ ಶಫಿಕ್ ತಿಳಿಸಿದ್ದಾರೆ.

ಅಭ್ಯಾಸ ವಿಳಂಬ: ಮಧ್ಯರಾತ್ರಿ ಸುರಿದ ಮಳೆಯಿಂದಾಗಿ ಗುರುವಾರದ ಅಭ್ಯಾಸ 2 ಗಂಟೆ ವಿಳಂಬವಾಗಿ ಪ್ರಾರಂಭವಾಯಿತು.

Share this article