ರೆಡ್‌ಕಾರ್ಡ್‌ಗೇ ಈಗ ಟ್ರಂಪ್‌ಕಾರ್ಡ್‌ : ಅಮೆರಿಕ ಆಟಗಾರನ ಸಸ್ಪೆಂಡ್‌ ರದ್ದು!

Published : Jul 07, 2026, 10:30 AM IST
 Donald Trump america 250 independence day communism speech washington dc celebration

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ ಫಿಫಾ ಫುಟ್ಬಾಲ್‌ ವಿಶ್ವಕಪ್‌ಗೂ ತಲೆಹಾಕಿದ್ದಾರೆ. ಅಮೆರಿಕ ಆಟಗಾರ ಪಡೆದಿದ್ದ ರೆಡ್‌ ಕಾರ್ಡ್‌ ಹಾಗೂ ಒಂದು ಪಂದ್ಯದ ಅಮಾನತನ್ನು ತಮ್ಮ ಒತ್ತಡ ಬಳಸಿ ತೆರವುಗೊಳಿಸಿದ್ದಾರೆ. ಈ ಕ್ರಮ ಸದ್ಯ ಕ್ರೀಡಾ ಲೋಕದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

 ಸಿಯಾಟಲ್‌(ಅಮೆರಿಕ): ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ ಫಿಫಾ ಫುಟ್ಬಾಲ್‌ ವಿಶ್ವಕಪ್‌ಗೂ ತಲೆಹಾಕಿದ್ದಾರೆ. ಅಮೆರಿಕ ಆಟಗಾರ ಪಡೆದಿದ್ದ ರೆಡ್‌ ಕಾರ್ಡ್‌ ಹಾಗೂ ಒಂದು ಪಂದ್ಯದ ಅಮಾನತನ್ನು ತಮ್ಮ ಒತ್ತಡ ಬಳಸಿ ತೆರವುಗೊಳಿಸಿದ್ದಾರೆ. ಈ ಕ್ರಮ ಸದ್ಯ ಕ್ರೀಡಾ ಲೋಕದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

ಅಂತಿಮ 32ರ ಸುತ್ತಿನ ಪಂದ್ಯದಲ್ಲಿ ಬೋಸ್ನಿಯಾ-ಹರ್ಜೆಗೋವಿನಾ ಆಟಗಾರನನ್ನು ಕೆಳಗೆ ಬೀಳಿಸಿದ್ದಕ್ಕೆ ಅಮೆರಿಕದ ಫೊಲಾರಿನ್‌ ಬಾಲೋಗನ್‌ಗೆ ರೆಡ್‌ ಕಾರ್ಡ್‌ ನೀಡಲಾಗಿತ್ತು. ಫಿಫಾ ನಿಯಮದ ಪ್ರಕಾರ, ರೆಡ್‌ ಕಾರ್ಡ್‌ ಪಡೆದ ಆಟಗಾರರು ಮುಂದಿನ ಪಂದ್ಯ ಆಡುವಂತಿಲ್ಲ. ಹೀಗಾಗಿ ಬಾಲೋಗನ್‌ ಬೆಲ್ಜಿಯಂ ವಿರುದ್ಧ ಪ್ರಿ ಕ್ವಾರ್ಟರ್‌ ಪಂದ್ಯಕ್ಕೆ ಗೈರಾಗಬೇಕಿತ್ತು. ಆದರೆ ಫಿಫಾ ಅಧ್ಯಕ್ಷ ಜಿಯಾನಿ ಇನ್‌ಫ್ಯಾನ್ಟಿನೊಗೆ ಕರೆ ಮಾಡಿದ ಟ್ರಂಪ್‌, ರೆಡ್‌ ಕಾರ್ಡ್‌ ತೆರವಿಗೆ ಒತ್ತಡ ಹೇರಿದ್ದಾರೆ. ಅದರಂತೆ ಭಾನುವಾರ ಬಾಲೋಗನ್‌ ಮೇಲಿನ ನಿಷೇಧವನ್ನು ಫಿಫಾ ಹಿಂದಕ್ಕೆ ಪಡೆದಿರುವುದಾಗಿ ಘೋಷಿಸಿದೆ. ಇದಕ್ಕೆ ಟ್ರಂಪ್‌ ಧನ್ಯವಾದ ತಿಳಿಸಿದ್ದು, ‘ಒಂದು ದೊಡ್ಡ ಅನ್ಯಾಯವನ್ನು ಸರಿಪಡಿಸಿದ ಫಿಫಾಗೆ ಧನ್ಯವಾದಗಳು’ ಎಂದಿದ್ದಾರೆ.

ತೀವ್ರ ಆಕ್ರೋಶ:

ಆಟಗಾರನ ನಿಷೇಧ ಹಿಂಪಡೆದ ಫಿಫಾ ಕ್ರಮಕ್ಕೆ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಬೆಲ್ಜಿಯಂ ಫುಟ್ಬಾಲ್‌ ಫೆಡರೇಷನ್‌ ಈ ಬಗ್ಗೆ ಪ್ರತಿಕ್ರಿಯಿಸಿ, ‘ಫಿಫಾ ಕಚೇರಿಯಲ್ಲಿ ಜು.5 ಎಂಬುದು ಏಪ್ರಿಲ್ ಫೂಲ್ ದಿನವೇ?’ ಎಂದು ಲೇವಡಿ ಮಾಡಿದೆ. ಯುರೋಪಿಯನ್ ಫುಟ್‌ಬಾಲ್ ಸಂಘಗಳ ಒಕ್ಕೂಟ(ಯುಇಎಫ್‌ಎ) ಕೂಡಾ ಕಿಡಿಕಾರಿದ್ದು, ‘ಅಮಾನತು ಹಿಂಪಡೆಯುವ ಮೂಲಕ ಫಿಫಾ ಕೆಂಪು ಗೆರೆಯನ್ನು ದಾಟಿದೆ’ ಎಂದಿದೆ. ಮಾಜಿ ಫಿಫಾ ಅಧ್ಯಕ್ಷ ಸೆಪ್ ಬ್ಲಾಟರ್ ಕೂಡ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ.

1962 ಬಳಿಕ ಮೊದಲ ಬಾರಿ ರೆಡ್‌ ಕಾರ್ಡ್‌ಗೆ ನಿಷೇಧವಿಲ್ಲ!

ವಿಶ್ವಕಪ್‌ನಲ್ಲಿ 1962ರ ಬಳಿಕ ಇದೇ ಮೊದಲ ಬಾರಿ ರೆಡ್‌ ಕಾರ್ಡ್‌ ಪಡೆದ ಆಟಗಾರ ಅಮಾನತು ಶಿಕ್ಷೆಯಿಂದ ಪಾರಾಗಿದ್ದಾರೆ. 1962ರ ವಿಶ್ವಕಪ್‌ನಲ್ಲಿ ಬ್ರೆಜಿಲ್‌ನ ಗ್ಯಾರಿಂಚಾ ಸೆಮಿಫೈನಲ್‌ ಪಂದ್ಯದಲ್ಲಿ ರೆಡ್‌ ಕಾರ್ಡ್‌ ಪಡೆದಿದ್ದರು. ಆಗ ರೆಡ್‌ ಕಾರ್ಡ್‌ ಪಡೆದ ಆಟಗಾರರಿಗೆ ಅಮಾನತು ಶಿಕ್ಷೆ ಕಡ್ಡಾಯವಿರಲಿಲ್ಲ. ಶಿಸ್ತು ಸಮಿತಿ ಪರಿಶೀಲನೆ ಬಳಿಕ ಶಿಕ್ಷೆ ಪ್ರಕಟಿಸಲಾಗುತ್ತಿತ್ತು. ಗ್ಯಾರಿಂಚಾ ಪ್ರಕರಣದಲ್ಲಿ ಸಮಿತಿಯು ಎಚ್ಚರಿಕೆ ನೀಡಿ ಅವರನ್ನು ಬಿಡಲು ನಿರ್ಧರಿಸಿತ್ತು. ಆದರೆ ರಾಜಕೀಯ ನಾಯಕರ ಹಸ್ತಕ್ಷೇಪ ಬಳಿಕ ರೆಡ್ ಕಾರ್ಡ್‌ ಹಿಂಪಡೆದಿದ್ದು ಫುಟ್ಬಾಲ್‌ ಇತಿಹಾಸದಲ್ಲೇ ಇದೇ ಮೊದಲು.

ಆಗಿದ್ದೇನು?

- ಫುಟ್‌ಬಾಲ್‌ ವಿಶ್ವಕಪ್‌ನಲ್ಲಿ ಎದುರಾಳಿ ತಂಡದ ಆಟಗಾರನನ್ನು ಕೆಳಗೆ ಬೀಳಿಸಿದ್ದಕ್ಕೆ ಅಮೆರಿಕ ಆಟಗಾರಗೆ ರೆಡ್‌ಕಾರ್ಡ್‌

- ವಿಶ್ವ ಫುಟ್‌ಬಾಲ್‌ ಸಂಸ್ಥೆ (ಫಿಫಾ) ನಿಯಮ ಪ್ರಕಾರ, ರೆರ್ಡ್‌ಕಾರ್ಡ್‌ ಪಡೆದ ಆಟಗಾರ ಮುಂದಿನ ಪಂದ್ಯ ಆಡುವಂತಿಲ್ಲ

- ಅದರಂತೆ ಅಮೆರಿಕ ಆಟಗಾರ ಫೊಲಾರಿನ್‌ ಆಡುವಂತಿರಲಿಲ್ಲ. ಇಂತಹ ಹೊತ್ತಲ್ಲೇ ಫಿಫಾ ಅಧ್ಯಕ್ಷಗೇ ಟ್ರಂಪ್‌ ಫೋನ್‌ ಕರೆ

- ಬೆನ್ನಲ್ಲೇ ರೆರ್ಡ್‌ಕಾರ್ಡ್‌ ಆಧರಿಸಿ ಫೊಲಾರಿನ್‌ ವಿರುದ್ಧ ಹೊರಡಿಸಿದ್ದ ಅಮಾನತು ಆದೇಶವನ್ನೇ ರದ್ದುಗೊಳಿಸಿದ ಫಿಫಾ

- ಫಿಫಾ ನಿರ್ಧಾರಕ್ಕೆ ಜಾಗತಿಕವಾಗಿ ಆಕ್ರೋಶ. ಇದೇನು ಏಪ್ರಿಲ್‌ ಫೂಲಾ ಎಂದು ಕಿಡಿಕಾರಿದ ಬೆಲ್ಜಿಯಂ ಫುಟ್‌ಬಾಲ್‌ ಸಂಸ್ಥೆ

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಗದ್ದಲದ ನಡುವೆ ಗೆದ್ದ ಪೋರ್ಚುಗಲ್ ಪ್ರಿ ಕ್ವಾರ್ಟರ್‌ಗೆ
ಭಾರತೀಯ ಹಾಕಿಗಿದು ಮಹತ್ವದ ವರ್ಷ: ಸ್ವ್ಯಾಬ್‌ ವಿಶೇಷ ಚರ್ಚಾ ಕಾರ್ಯಕ್ರಮದಲ್ಲಿ ಎಂ.ಎಂ. ಸೋಮಯ್ಯ