ಅಭಿಷೇಕ್‌ ಶರ್ಮಾ ಬ್ಯಾಟಿಂಗ್ ಧಮಾಕಾ: ಸಣ್ಣ ಇನ್ನಿಂಗ್ಸ್‌, ಬಿಗ್‌ ಇಂಪ್ಯಾಕ್ಟ್‌

KannadaprabhaNewsNetwork |  
Published : May 22, 2024, 12:50 AM ISTUpdated : May 22, 2024, 12:51 AM IST
ಅಭಿಷೇಕ್‌ ಶರ್ಮಾ | Kannada Prabha

ಸಾರಾಂಶ

ಒಂದು ಪಂದ್ಯದಲ್ಲೂ 30 ಎಸೆತ ಆಡಿಲ್ಲ, ಆದರೂ 470 ರನ್‌ ಸಿಡಿಸಿದ್ದಾರೆ. ಈ ಪೈಕಿ 3 ಬಾರಿ 60 ರನ್‌, 8 ಬಾರಿ 30 ರನ್‌ ಕಲೆಹಾಕಿದ್ದಾರೆ.

ಅಹಮದಾಬಾದ್‌: ಈ ಬಾರಿ ಐಪಿಎಲ್‌ನಲ್ಲಿ ಹಲವು ಯುವ ಬ್ಯಾಟರ್‌ಗಳು ತಮ್ಮ ಆಟದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ ಸನ್‌ರೈಸರ್ಸ್‌ ಹೈದರಾಬಾದ್‌ ಯುವ ತಾರೆ ಅಭಿಷೇಕ್‌ ಶರ್ಮಾ ತಮ್ಮ ಆಕ್ರಮಣಕಾರಿ ಶೈಲಿಯಿಂದ ಕ್ರಿಕೆಟ್‌ ಜಗತ್ತನ್ನು ಬೆರಗಾಗಿಸಿದ್ದಾರೆ.ಮೊದಲ ಎಸೆತದಿಂದಲೇ ಸ್ಫೋಟಕ ಆಟವಾಡುವ 23ರ ಅಭಿಷೇಕ್‌ ಶರ್ಮಾ ಈ ಬಾರಿ 14 ಪಂದ್ಯಗಳಲ್ಲಿ ಗಳಿಸಿದ್ದು ಬರೋಬ್ಬರಿ 470 ರನ್‌. ಆದರೆ ವಿಶೇಷತೆ ಏನೆಂದರೆ ಅವರು 14ರಲ್ಲಿ ಒಂದು ಪಂದ್ಯದಲ್ಲೂ 30+ ಎಸೆತಗಳನ್ನು ಎದುರಿಸಿಲ್ಲ. ವಿಶ್ವದ ಯಾವುದೇ ಟಿ20 ಲೀಗ್‌ನಲ್ಲಿ ಒಂದು ಇನ್ನಿಂಗ್ಸ್‌ನಲ್ಲೂ 30+ ಎಸೆತ ಎದುರಿಸದೆ 400+ ರನ್‌ ಗಳಿಸಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಗೆ ಅಭಿಷೇಕ್‌ ಶರ್ಮಾ ಅವರದ್ದು.ಈ ಬಾರಿ 207.04ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿರುವ ಅವರು, 8 ಪಂದ್ಯಗಳಲ್ಲಿ 30+, 3 ಪಂದ್ಯಗಳಲ್ಲಿ 60+ ರನ್‌ ಕಲೆಹಾಕಿದ್ದಾರೆ. ಮಂಗಳವಾರ ಕೆಕೆಆರ್‌ ವಿರುದ್ಧ ಕ್ವಾಲಿಫೈಯರ್‌ ಪಂದ್ಯದಲ್ಲಿ 3 ರನ್‌ ಗಳಿಸಿದ್ದು ಬಿಟ್ಟರೆ ಉಳಿದ 13 ಇನ್ನಿಂಗ್ಸ್‌ಗಳಲ್ಲೂ ಎರಡಂಕಿ ಮೊತ್ತ ದಾಖಲಿಸಿದ್ದಾರೆ. ಸಣ್ಣ ಇನ್ನಿಂಗ್ಸ್‌ ಆದರೂ ದೊಡ್ಡ ಇಂಪ್ಯಾಕ್ಟ್‌ ಮೂಲಕ ಹೈದರಾಬಾದನ್ನು ನಾಕೌಟ್‌ಗೇರಿಸುವಲ್ಲಿ ಅಭಿಷೇಕ್‌ ಶರ್ಮಾ ಅವರ ಪಾತ್ರ ಪ್ರಮುಖವಾದದ್ದು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಫೈನಲ್‌ ಟಿಕೆಟ್‌ಗಾಗಿ ಇಂದು ಕಿವೀಸ್‌ vs ದ.ಆಫ್ರಿಕಾ
ಅಂತೂ ಬೆಂಗಳೂರಿಗೆ ಐಪಿಎಲ್‌ ಬಂತು- ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಉದ್ಘಾಟನಾ ಪಂದ್ಯ