400 ಮೀ. ಹರ್ಡಲ್ಸ್‌ ಸ್ಪರ್ಧೆಯಲ್ಲಿ 42 ವರ್ಷಗಳ ಕಾಲ ಪಿ.ಟಿ.ಉಷಾ ಅವರ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದ ವಿದ್ಯಾ ರಾಮರಾಜ್‌, ಈ ಬಾರಿ ಏಷ್ಯನ್‌ ಗೇಮ್ಸ್‌ನಲ್ಲಿ 2ನೇ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ನಗೋಯಾ: 400 ಮೀ. ಹರ್ಡಲ್ಸ್‌ ಸ್ಪರ್ಧೆಯಲ್ಲಿ 42 ವರ್ಷಗಳ ಕಾಲ ಪಿ.ಟಿ.ಉಷಾ ಅವರ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದ ವಿದ್ಯಾ ರಾಮರಾಜ್‌, ಈ ಬಾರಿ ಏಷ್ಯನ್‌ ಗೇಮ್ಸ್‌ನಲ್ಲಿ 2ನೇ ಪದಕ ತಮ್ಮದಾಗಿಸಿಕೊಂಡಿದ್ದಾರೆ.

28 ವರ್ಷದ ವಿದ್ಯಾ 54.75 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚು ಜಯಿಸಿದರು

ಸೋಮವಾರ 28 ವರ್ಷದ ವಿದ್ಯಾ 54.75 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚು ಜಯಿಸಿದರು. ಯುಎಇಯ ಮರಿಯಮ್‌ ಕರೀಮ್‌(54.31 ಸೆಕೆಂಡ್) ಚಿನ್ನ, ಕಜಕಸ್ತಾನದ ಅಡೆಲಿನಾ ಜೆಮ್ಸ್‌(54.58 ಸೆಕೆಂಡ್) ಬೆಳ್ಳಿ ಪಡೆದರು. ಭಾರತದ ಮತ್ತೋರ್ವ ಸ್ಪರ್ಧಿ ಅನು ರಾಘವನ್‌(55.88 ಸೆಕೆಂಡ್) 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಉಷಾ(55.42 ಸೆಕೆಂಡ್) ಅವರು ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ

ವಿದ್ಯಾ ಈ ಓಟದ ಮೂಲಕ 1984ರ ಒಲಿಂಪಿಕ್ಸ್‌ನಲ್ಲಿ ಉಷಾ(55.42 ಸೆಕೆಂಡ್) ಅವರು ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಇತ್ತೀಚೆಗೆಷ್ಟೇ ವಿದ್ಯಾ 4*400 ಮೀ. ಮಿಶ್ರ ರಿಲೇ ತಂಡ ವಿಭಾಗದಲ್ಲಿ ಬೆಳ್ಳೀ ಗೆದ್ದಿದ್ದರು.