ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ವೇಟ್‌ಲಿಫ್ಟಿಂಗ್ ಹಾಗೂ ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ 2 ಬೆಳ್ಳಿ ಪದಕಗಳು ಲಭಿಸಿದೆ. ಇದರೊಂದಿಗೆ ಪದಕ ಗಳಿಕೆ 12ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಬಾಕ್ಸಿಂಗ್‌ನಲ್ಲಿ ಭಾರತೀಯರು ಪ್ರಾಬಲ್ಯ ಮುಂದುವರಿಸಿದ್ದು, ಒಂದೇ ದಿನ 8 ಸೇರಿದಂತೆ ಒಟ್ಟು 9 ಪದಕ ಖಚಿತಪಡಿಸಿಕೊಂಡಿದ್ದಾರೆ.
ಗ್ಲಾಸ್ಗೋ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ವೇಟ್‌ಲಿಫ್ಟಿಂಗ್ ಹಾಗೂ ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ 2 ಬೆಳ್ಳಿ ಪದಕಗಳು ಲಭಿಸಿದೆ. ಇದರೊಂದಿಗೆ ಪದಕ ಗಳಿಕೆ 12ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಬಾಕ್ಸಿಂಗ್‌ನಲ್ಲಿ ಭಾರತೀಯರು ಪ್ರಾಬಲ್ಯ ಮುಂದುವರಿಸಿದ್ದು, ಒಂದೇ ದಿನ 8 ಸೇರಿದಂತೆ ಒಟ್ಟು 9 ಪದಕ ಖಚಿತಪಡಿಸಿಕೊಂಡಿದ್ದಾರೆ.
ಪುರುಷರ 10000 ಮೀ. ಓಟದ ಸ್ಪರ್ಧೆಯಲ್ಲಿ ಗುಲ್ವೀರ್ ಸಿಂಗ್ ಐತಿಹಾಸಿಕ ಬೆಳ್ಳಿ ಪದಕ
ಪುರುಷರ 10000 ಮೀ. ಓಟದ ಸ್ಪರ್ಧೆಯಲ್ಲಿ ಗುಲ್ವೀರ್ ಸಿಂಗ್ ಐತಿಹಾಸಿಕ ಬೆಳ್ಳಿ ಪದಕ ಗೆದ್ದರು. ಮಳೆಯ ನಡುವೆಯೇ ನಡೆದ ರೇಸ್‌ನಲ್ಲಿ ಅವರು 27 ನಿಮಿಷ 49.78 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಈ ಮೂಲಕ ಗೇಮ್ಸ್‌ನ ಇತಿಹಾಸದಲ್ಲೇ 10,000 ಮೀಟರ್ ಓಟದಲ್ಲಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡರು. ಆಸ್ಟ್ರೇಲಿಯಾದ ರಾಬಿನ್ಸನ್(27 ನಿಮಿಷ, 48.93 ಸೆಕೆಂಡ್) ಚಿನ್ನ ತಮ್ಮದಾಗಿಸಿಕೊಂಡರು. ಐಲ್ ಆಫ್ ಮ್ಯಾನ್ ದೇಶದ ಡೇವಿಡ್ ಮುಲಾರ್ಕಿ(27 ನಿಮಿಷ, 50.28 ಸೆಕೆಂಡ್) ಕಂಚು ಗೆದ್ದರು.
ವೇಟ್‌ಲಿಫ್ಟಿಂಗ್‌ನಲ್ಲಿ 7ನೇ ಪದಕ:
ಕೂಟದಲ್ಲಿ ಭಾರತದ ವೇಟ್‌ಲಿಫ್ಟರ್‌ಗಳ ಉತ್ತಮ ಪ್ರದರ್ಶನ ಮುಂದುವರಿಯಿತು. 2022ರ ಕಾಮನ್‌ವೆಲ್ತ್ ಗೇಮ್ಸ್‌ನ 71+ ಕೆ.ಜಿ. ವಿಭಾಗದಲ್ಲಿ ಕಂಚು ಗೆದ್ದಿದ್ದ ಹರ್ಜಿಂದರ್ ಕೌರ್ ಈ ಬಾರಿ ಮಹಿಳೆಯರ 69 ಕೆ.ಜಿ. ವಿಭಾಗದಲ್ಲಿ ಸ್ನ್ಯಾಚ್‌ನಲ್ಲಿ 101 ಕೆ.ಜಿ. ಹಾಗೂ ಕ್ಲೀನ್ ಆ್ಯಂಡ್ ಜರ್ಕ್ ವಿಭಾಗದಲ್ಲಿ 126 ಕೆ.ಜಿ. ಸೇರಿದಂತೆ ಒಟ್ಟು 227 ಕೆ.ಜಿ. ಭಾರ ಎತ್ತಿ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡು. ಅವರು ಸ್ನ್ಯಾಚ್, ಕ್ಲೀನ್ ಆ್ಯಂಡ್ ಜರ್ಕ್, ಒಟ್ಟು ಕೆ.ಜಿ. ಈ ಎಲ್ಲದರಲ್ಲೂ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ದಾಖಲಿಸಿದರು. ಇದು ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ ಸಿಕ್ಕ 7ನೇ ಪದಕ. ಈ ವಿಭಾಗದಲ್ಲಿ 1 ಚಿನ್ನ, 5 ಬೆಳ್ಳಿ, 1 ಕಂಚು ಲಭಿಸಿದೆ.

