ನವದೆಹಲಿ: ಹಲವು ತಾರಾ ನಟ-ನಟಿಯರು, ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಫೇಕ್ ಬಳಿಕ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೂ ಡೀಪ್ ಫೇಕ್ ಬಿಸಿ ತಟ್ಟಿದೆ.
ಕೊಹ್ಲಿ ಅವರು ಬೆಟ್ಟಿಂಗ್ ಆ್ಯಪ್ ಬಗ್ಗೆ ಪ್ರಚಾರ ಮಾಡುತ್ತಿರುವಂತೆ ಕಾಣುವ ಎಡಿಟೆಡ್ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.ಕೊಹ್ಲಿ ಸಂದರ್ಶನವೊಂದರಲ್ಲಿ ಮಾತನಾಡುತ್ತಿರುವ ದೃಶ್ಯವನ್ನು ಕಿಡಿಗೇಡಿಗಳು ಎಡಿಟ್ ಮಾಡಿದ್ದಾರೆ.
ಎಐ ತಂತ್ರಜ್ಞಾನದ ಮೂಲಕ ಕೊಹ್ಲಿಯ ಶಬ್ಧವನ್ನು ಬಳಕೆ ಮಾಡಿ ಆ್ಯಪ್‌ನ ಪ್ರಚಾರ ಮಾಡುತ್ತಿರುವಂತೆ ವಿಡಿಯೋ ಹರಿಬಿಟ್ಟಿದ್ದಾರೆ.
ಕಡಿಮೆ ಹಣ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಗಳಿಸುವ ತಂತ್ರಗಳನ್ನು ವಿರಾಟ್ ಕೊಹ್ಲಿ ಹೇಳುವ ರೀತಿ ವಿಡಿಯೋದಲ್ಲಿ ತೋರಿಸಲಾಗಿದೆ.
ಅಲ್ಲದೆ ಸುದ್ದಿ ಮಾಧ್ಯಮ ನಿರೂಪಕಿಯೊಬ್ಬರ ಶಬ್ಧವನ್ನೂ ಎಡಿಟ್ ಮಾಡಿದ್ದಾರೆ.ಈ ಮೊದಲು ಸಚಿನ್ ಅವರು ಕೂಡಾ ಬೆಟ್ಟಿಂಗ್ ಆ್ಯಪ್ ಬಗ್ಗೆ ಪ್ರಚಾರ ಮಾಡುವ ರೀತಿ ವಿಡಿಯೋ ಹರಿಬಿಡಲಾಗಿತ್ತು.
ಬಳಿಕ ತಂತ್ರಜ್ಞಾನದ ದುರ್ಬಳಕೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದ ಸಚಿನ್, ಡೀಪ್ ಫೇಕ್ ಹಾಗೂ ತಪ್ಪು ಮಾಹಿತಿ ಹರಡುವಿಕೆಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದರು.