ಇಂಗ್ಲೆಂಡ್‌ನಲ್ಲಿ ಬಳಕೆಯಾಗುವ ಡ್ಯೂಕ್ಸ್ ಚೆಂಡಿನ ಇತ್ತೀಚಿನ ಗುಣಮಟ್ಟದ ಬಗ್ಗೆ ಭಾರತೀಯ ಕ್ರಿಕೆಟಿಗರು ಟೀಕಿಸುತ್ತಿರುವ ಹೊತ್ತಲ್ಲೇ, 3ನೇ ಟೆಸ್ಟ್‌ನ 2ನೇ ದಿನವಾದ ಶುಕ್ರವಾರ 2 ಬಾರಿ ಚೆಂಡು ಬದಲಿಸಿದ ಘಟನೆ ನಡೆಯಿತು.
ಇಂಗ್ಲೆಂಡ್‌ನಲ್ಲಿ ಬಳಕೆಯಾಗುವ ಡ್ಯೂಕ್ಸ್ ಚೆಂಡಿನ ಇತ್ತೀಚಿನ ಗುಣಮಟ್ಟದ ಬಗ್ಗೆ ಭಾರತೀಯ ಕ್ರಿಕೆಟಿಗರು ಟೀಕಿಸುತ್ತಿರುವ ಹೊತ್ತಲ್ಲೇ, 3ನೇ ಟೆಸ್ಟ್‌ನ 2ನೇ ದಿನವಾದ ಶುಕ್ರವಾರ 2 ಬಾರಿ ಚೆಂಡು ಬದಲಿಸಿದ ಘಟನೆ ನಡೆಯಿತು. 10 ಓವರ್ ಬಳಕೆಯಾಗಿದ್ದ ಚೆಂಡು ತನ್ನ ರೂಪ ಕಳೆದುಕೊಂಡಿದ್ದರಿಂದ ಅದನ್ನು ಬದಲಿಸಲಾಯಿತು. ಆನಂತರ ಆಯ್ಕೆ ಮಾಡಿಕೊಂಡ ಚೆಂಡು ಕೇವಲ 8 ಓವರ್ ಬಾಳಿಕೆ ಬಂತು. ಪದೇಪದೇ ಚೆಂಡು ಬದಲಿಸಿದ್ದರಿಂದ ಭಾರತದ ನಾಯಕ ಶುಭ್‌ಮನ್ ಗಿಲ್ ಮೈದಾನದಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡ್ಯೂಕ್ಸ್ ಚೆಂಡು ತಯಾರಕ ಸಂಸ್ಥೆಯ ಮಾಲೀಕ ದಿಲೀಪ್ ಜಜೋಡಿಯಾ, ‘ಸೂಪರ್ ಸ್ಟಾರ್‌ಗಳು ಸ್ವಲ್ಪ ತಾಳ್ಮೆಯಿಂದ ವರ್ತಿಸಬೇಕು. ನಾವು ಗುಣಮಟ್ಟದ ಚೆಂಡುಗಳನ್ನು ತಯಾರಿಸಲು ಸಕಲ ಪ್ರಯತ್ನ ನಡೆಸುತ್ತಿದ್ದೇವೆ. ಆಟಗಾರರು ಕೆಟ್ಟ ಶಾಟ್ ಬಾರಿಸಿದಾಗ ನಾನು ಟೀಕೆ ಮಾಡಬಹುದೇ?, ಏನು ಸಮಸ್ಯೆಯಾಗುತ್ತಿದೆ ಎನ್ನುವುದನ್ನು ಪರಿಶೀಲಿಸುತ್ತಿದ್ದೇವೆ’ ಎಂದಿದ್ದಾರೆ.
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.