ಸೆಮಿಫೈನಲ್‌ ಕದನಕ್ಕೆ ಅಖಾಡ ಸಿದ್ಧ - ಸೆಮಿಫೈನಲ್‌ಗಿದೆ ಮೀಸಲು ದಿನ

Published : Mar 03, 2026, 12:52 PM IST
Cricket

ಸಾರಾಂಶ

10ನೇ ಆವೃತ್ತಿಯ ಟಿ20 ವಿಶ್ವಕಪ್‌ನ ಗುಂಪು ಹಂತ ಹಾಗೂ ಸೂಪರ್‌-8 ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಸೆಮಿಫೈನಲ್‌ ಹಣಾಹಣಿಗೆ ಅಖಾಡ ಸಿದ್ಧವಾಗಿದೆ. ಬುಧವಾರ ಹಾಗೂ ಗುರುವಾರ 2 ಸೆಮಿಫೈನಲ್‌ ಪಂದ್ಯಗಳು ನಡೆಯಲಿವೆ.

ಮುಂಬೈ/ಕೋಲ್ಕತಾ : 10ನೇ ಆವೃತ್ತಿಯ ಟಿ20 ವಿಶ್ವಕಪ್‌ನ ಗುಂಪು ಹಂತ ಹಾಗೂ ಸೂಪರ್‌-8 ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಸೆಮಿಫೈನಲ್‌ ಹಣಾಹಣಿಗೆ ಅಖಾಡ ಸಿದ್ಧವಾಗಿದೆ. ಬುಧವಾರ ಹಾಗೂ ಗುರುವಾರ 2 ಸೆಮಿಫೈನಲ್‌ ಪಂದ್ಯಗಳು ನಡೆಯಲಿವೆ.

20 ತಂಡಗಳಿದ್ದ ಟೂರ್ನಿಯಲ್ಲಿ 16 ತಂಡಗಳು ಹೊರಬಿದ್ದಿವೆ. ಮಾಜಿ ಚಾಂಪಿಯನ್‌ಗಳಾದ ಭಾರತ, ಇಂಗ್ಲೆಂಡ್‌, ಮಾಜಿ ರನ್ನರ್‌-ಅಪ್‌ಗಳಾದ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ ತಂಡಗಳು ಸೆಮೀಸ್‌ನಲ್ಲಿ ಆಡಲಿವೆ. ಮಾ.4ರಂದು ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ದ.ಆಫ್ರಿಕಾ ಹಾಗೂ ಕಿವೀಸ್‌ ಮುಖಾಮುಖಿಯಾಗಲಿವೆ. ಮಾ.5ರಂದು ಮುಂಬೈನ ವಾಂಖೇಡೆಯಲ್ಲಿ ಭಾರತಕ್ಕೆ ಇಂಗ್ಲೆಂಡ್‌ ಸವಾಲು ಎದುರಾಗಲಿದೆ. 2 ದಿನಗಳ ಬಿಡುವಿನ ಬಳಿಕ ಮಾ.8ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ.

2 ಸೆಮಿ, ಫೈನಲ್‌ಗೆ ಇದೆ ಮೀಸಲು ದಿನ

2 ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯ ನಡೆಯುವ ನಗರಗಳಲ್ಲಿ ಸದ್ಯಕ್ಕೆ ಯಾವುದೇ ಮಳೆ ಮುನ್ಸೂಚನೆ ಇಲ್ಲ. ಒಂದು ವೇಳೆ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದರೂ ಮೀಸಲು ದಿನದಂದು ಪಂದ್ಯ ಮುಂದುವರಿಯಲಿವೆ. ನಿಗದಿತ ದಿನದಂದು ಮಳೆಯಿಂದ ಪಂದ್ಯ ಪೂರ್ಣಗೊಳ್ಳದಿದ್ದರೆ, ಮರುದಿನ ಅಲ್ಲಿಂದಲೇ ಪಂದ್ಯ ಆರಂಭಿಸಲಾಗುತ್ತದೆ.

ದಕ್ಷಿಣ ಆಫ್ರಿಕಾ ಮಾತ್ರ ಟೂರ್ನಿಯಲ್ಲಿ ಅಜೇಯ

ಈ ಬಾರಿ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಮಾತ್ರ ಅಜೇಯವಾಗಿದೆ. ತಂಡ ಗುಂಪು ಹಂತದಲ್ಲಿ 4 ಹಾಗೂ ಸೂಪರ್‌-8 ಹಂತದಲ್ಲಿ ಎಲ್ಲಾ 3 ಪಂದ್ಯಗಳಲ್ಲೂ ಗೆದ್ದಿದೆ. ಭಾರತ ಗುಂಪು ಹಂತದಲ್ಲಿ 4 ಪಂದ್ಯದಲ್ಲಿ ಗೆದ್ದಿದ್ದರೂ, ಸೂಪರ್‌-8 ಹಂತದಲ್ಲಿ ದ.ಆಫ್ರಿಕಾ ವಿರುದ್ಧ ಸೋತಿತ್ತು. ಇನ್ನು, ಇಂಗ್ಲೆಂಡ್‌, ಕಿವೀಸ್‌ ತಂಡಗಳು ಗುಂಪು ಹಂತದಲ್ಲೇ ತಲಾ ಒಂದೊಂದು ಪಂದ್ಯದಲ್ಲಿ ಸೋಲನುಭವಿಸಿದ್ದವು.-

ಐಸಿಸಿ ಟೂರ್ನಿಗಳಲ್ಲಿ ಭಾರತಕ್ಕೆ 20ನೇ ಸೆಮಿ:

ವಿಶ್ವದ ಮೊದಲ ತಂಡ

ಐಸಿಸಿ ಟೂರ್ನಿಗಳಲ್ಲಿ ಒಟ್ಟಾರೆ ಭಾರತಕ್ಕೆ ಇದು 20ನೇ ಸೆಮಿಫೈನಲ್‌. ಏಕದಿನ ವಿಶ್ವಕಪ್‌ನಲ್ಲಿ 8, ಚಾಂಪಿಯನ್ಸ್‌ ಟ್ರೋಫಿಯಲ್ಲಿ 8 ಸೆಮಿಫೈನಲ್‌ ಆಡಿರುವ ಭಾರತ, ಟಿ20 ವಿಶ್ವಕಪ್‌ನಲ್ಲಿ 6ನೇ ಸೆಮೀಸ್‌ಗೆ ಸಿದ್ಧವಾಗಿದೆ. ಇನ್ನು, ಐಸಿಸಿ ಟೂರ್ನಿಗಳಲ್ಲಿ ಗರಿಷ್ಠ ಸೆಮಿಫೈನಲ್‌ ಆಡಿದ ಅಥವಾ ಆಡಲಿರುವ ತಂಡಗಳ ಪೈಕಿ ಆಸ್ಟ್ರೇಲಿಯಾ(18), ನ್ಯೂಜಿಲೆಂಡ್‌(18), ಇಂಗ್ಲೆಂಡ್‌(16), ಪಾಕಿಸ್ತಾನ(16) ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

06ನೇ ಬಾರಿ

ಟಿ20 ವಿಶ್ವಕಪ್‌ನಲ್ಲಿ ಭಾರತ, ಇಂಗ್ಲೆಂಡ್‌ಗೆ ಇದು ತಲಾ 6ನೇ ಸೆಮಿಫೈನಲ್‌. ಕಿವೀಸ್‌ಗೆ 5ನೇ, ದ.ಆಫ್ರಿಕಾಗೆ 4ನೇ ಸೆಮಿ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಕ್ರೀಡಾಲೋಕದ ಮೇಲೆ ಯುದ್ಧದ ಕಾರ್ಮೋಡ
ಸಂಜು ಸಾಹಸ : ಭಾರತ ಸೆಮಿಫೈನಲ್‌ಗೆ ಎಂಟ್ರಿ