ಮತ್ತೊಂದು ಮೈಲಿಗಲ್ಲು ತಲುಪಿದ ಭಾರತದ ಸ್ಪಿನ್‌ ಮಾಂತ್ರಿಕ ಅಶ್ವಿನ್‌

KannadaprabhaNewsNetwork |  
Published : Feb 24, 2024, 02:30 AM IST
ಅಶ್ವಿನ್‌ | Kannada Prabha

ಸಾರಾಂಶ

ಅಶ್ವಿನ್ ಪ್ರತಿ ಪಂದ್ಯದಲ್ಲೂ ಹಲವು ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ದಿಗ್ಗಜ ಕ್ರಿಕೆಟಿಗರ ಪಾಲಿಗೆ ಸೇರಿರುವ ಅವರು, ಈಗ ಟೆಸ್ಟ್‌ನಲ್ಲಿ ತಂಡವೊಂದರ ವಿರುದ್ಧ 1000 ರನ್‌, 100 ವಿಕೆಟ್‌ ಸಾಧಕ ಮಾಡಿದ ವಿಶ್ವದ 7ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಾಂಚಿ: ಭಾರತದ ಮಾಂತ್ರಿಕ ಸ್ಪಿನ್ನರ್‌ ಆರ್‌.ಆಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧ 4ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಬೇರ್‌ಸ್ಟೋವ್‌ರನ್ನು ಔಟ್‌ ಮಾಡಿದ ಅಶ್ವಿನ್‌, ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ವಿಕೆಟ್‌ ಗಳಿಕೆಯನ್ನು 100ಕ್ಕೆ ಏರಿಸಿದರು.

ಈ ಮೂಲಕ ಅವರು ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ನಲ್ಲಿ 1000ಕ್ಕೂ ಹೆಚ್ಚು ರನ್‌, 100ಕ್ಕೂ ಹೆಚ್ಚು ವಿಕೆಟ್‌ ಸಾಧನೆ ಮಾಡಿದ ಭಾರತದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಟ್ಟಾರೆ ತಂಡವೊಂದರ ವಿರುದ್ಧ ಈ ಮೈಲಿಗಲ್ಲು ಸಾಧಿಸಿದ ವಿಶ್ವದ 7ನೇ ಆಟಗಾರ. ಈ ಮೊದಲು ಆಸ್ಟ್ರೇಲಿಯಾದ ಜಾರ್ಜ್‌ ಗಿಫೆನ್‌, ಮೋಂಟಿ ನೋಬ್ಲೆ, ಇಂಗ್ಲೆಂಡ್‌ನ ವಿಲ್ಫ್ರೆಡ್‌ ರೋಡ್ಸ್‌, ವೆಸ್ಟ್‌ಇಂಡೀಸ್‌ನ ಗ್ಯಾರಿ ಸೋಬರ್ಸ್‌, ಇಂಗ್ಲೆಂಡ್‌ನ ಇಯಾನ್‌ ಬೋಥಂ, ಸ್ಟುವರ್ಟ್‌ ಬ್ರಾಡ್‌ ಕೂಡಾ ಟೆಸ್ಟ್‌ನಲ್ಲಿ ತಂಡವೊಂದರ ವಿರುದ್ಧ 1000+ ರನ್‌, 100+ ವಿಕೆಟ್‌ ಸಾಧಕ ಮಾಡಿದ್ದಾರೆ.ಜೊತೆಗೆ 2 ತಂಡಗಳ ವಿರುದ್ಧ ಟೆಸ್ಟ್‌ನಲ್ಲಿ 100+ ವಿಕೆಟ್‌ ಕಿತ್ತ ಭಾರತದ ಮೊದಲ ಬೌಲರ್ ಎಂಬ ಖ್ಯಾತಿಗೂ ಅಶ್ವಿನ್‌ ಒಳಗಾಗಿದ್ದಾರೆ. ಅಶ್ವಿನ್‌ ಆಸ್ಟ್ರೇಲಿಯಾ ವಿರುದ್ಧ ಕೂಡಾ ಈ ಸಾಧನೆ ಮಾಡಿದ್ದಾರೆ. ಇನ್ನು, ಅನಿಲ್‌ ಕುಂಬ್ಳೆ ಆಸ್ಟ್ರೇಲಿಯಾ ವಿರುದ್ಧ 100+ ವಿಕೆಟ್‌ ಪಡೆದಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಫೈನಲ್‌ ಟಿಕೆಟ್‌ಗಾಗಿ ಇಂದು ಕಿವೀಸ್‌ vs ದ.ಆಫ್ರಿಕಾ
ಅಂತೂ ಬೆಂಗಳೂರಿಗೆ ಐಪಿಎಲ್‌ ಬಂತು- ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಉದ್ಘಾಟನಾ ಪಂದ್ಯ