ಪ್ರೈಮ್ ವಾಲಿಬಾಲ್ ಲೀಗ್‌: ಸೋಲಿನ ಸರಪಳಿ ಕಳಚಿಕೊಂಡ ಬೆಂಗಳೂರು ಟಾರ್ಪೆಡೊಸ್‌

KannadaprabhaNewsNetwork |  
Published : Mar 13, 2024, 02:08 AM ISTUpdated : Mar 13, 2024, 07:24 AM IST
ಬೆಂಗಳೂರು ಟಾರ್ಪಡೊಸ್‌ | Kannada Prabha

ಸಾರಾಂಶ

ಅಹಮದಾಬಾದ್ ಡಿಫೆಂಡರ್ಸ್ ವಿರುದ್ಧ ಅದ್ಭುತ ಗೆಲುವು ಸಾಧಿಸಿದ ಬೆಂಗಳೂರು ಟಾರ್ಪೆಡೊಸ್‌ ಈ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ಚೆನ್ನೈ: ಇಲ್ಲಿನ ಜವಾಹರ್‌ಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಬೆಂಗಳೂರು ಟಾರ್ಪೆಡೊಸ್‌ ತಂಡ ಸೋಲಿನ ಸರಪಳಿಯನ್ನು ಕಳಚಿಕೊಂಡಿದೆ. ಮಂಗಳವಾರ ಅಹಮದಾಬಾದ್ ಡಿಫೆಂಡರ್ಸ್ ತಂಡದ ವಿರುದ್ಧ ಬೆಂಗಳೂರು ಟಾರ್ಪೆಡೊಸ್‌ ಅದ್ಭುತ ಗೆಲುವು ಸಾಧಿಸಿತು. 

ಈ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.ಟಿ.ಆರ್ ಸೇತು ಅವರ ಸರ್ವ್ ಮತ್ತು ಸ್ಮ್ಯಾಶ್‌ಗಳು, ಥಾಮಸ್ ಹೆಪ್ಟಿನ್ಸ್ಟಾಲ್ ಅವರ ಆಕರ್ಷಕ ಆಟ ಗಮನ ಸೆಳೆಯಿತು. ಮೊದಲ ಎರಡು ಸೆಟ್ ಗಳಲ್ಲಿ ಗೆದ್ದು ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಅಹಮಾದಾಬಾದ್ ಡಿಫೆಂಡರ್ಸ್ ಗೆ ಬೆಂಗಳೂರು ತಂಡ ತಕ್ಕ ಪ್ರತ್ಯುತ್ತರ ನೀಡಿತು. 

ಅಹಮಾದಾಬಾದ್ ಡಿಫೆಂಡರ್ಸ್ ವಿರುದ್ಧ ಬೆಂಗಳೂರು ಟ್ರೋಫಿಡೋಸ್‌ 14-16, 7-15, 16-14, 15-19 ಹಾಗೂ 13-15 ಸೆಟ್‌ ಗಳ ಅಂತರದಿಂದ ಗೆಲುವು ಸಾಧಿಸಿತು.ಬೆಂಗಳೂರು ತಂಡದ ಮುಜೀಬ್ ಅದ್ಭುತ ಬ್ಲ್ಯಾಕ್ ಗಳ ಮೂಲಕ ಗಮನ ಸೆಳೆದರು. ಅಹಮದಾಬಾದ್ ಡಿಫೆಂಡರ್ಸ್ ತಂಡದ ಆಟಗಾರರರು ಎಸಗಿದ ಲೋಪ ಬೆಂಗಳೂರಿಗೆ ವರದಾನವಾಯಿತು. ತರಬೇತುದಾರ ಡೇವಿಡ್ ಲೀ ಅವರ ತಂತ್ರಗಳು ಫಲ ನೀಡಿತು.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ