ಬಾಸ್ಕೆಟ್‌ಬಾಲ್‌ ಪಂದ್ಯಾವಳಿ : ಜೈನ್‌ ವಿವಿಗೆ ಚಾಂಪಿಯನ್‌

KannadaprabhaNewsNetwork | Published : Jan 15, 2024 1:48 AM

ಸಾರಾಂಶ

ಜೈಪುರದಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾಲಯಗಳ ಬಾಸ್ಕೆಟ್‌ ಬಾಲ್‌ ಪಂದ್ಯಾವಳಿಯಲ್ಲಿ ಬೆಂಗಳೂರಿನ ಜೈನ್‌ ವಿಶ್ವವಿದ್ಯಾಲಯ ಪುರುಷರ ತಂಡ ಚಾಂಪಿಯನ್‌ ಆಗಿದೆ.

ಜೈಪುರದಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾಲಯಗಳ ಬಾಸ್ಕೆಟ್‌ ಬಾಲ್‌ ಪಂದ್ಯಾವಳಿಯಲ್ಲಿ ಬೆಂಗಳೂರಿನ ಜೈನ್‌ ವಿಶ್ವವಿದ್ಯಾಲಯ ಪುರುಷರ ತಂಡ ಚಾಂಪಿಯನ್‌ ಆಗಿದೆ.

ಜೈಪುರ: ಇಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾಲಯಗಳ ಬಾಸ್ಕೆಟ್‌ ಬಾಲ್‌ ಪಂದ್ಯಾವಳಿಯಲ್ಲಿ ಬೆಂಗಳೂರಿನ ಜೈನ್‌ ವಿಶ್ವವಿದ್ಯಾಲಯ ಪುರುಷರ ತಂಡ ಚಾಂಪಿಯನ್‌ ಆಗಿದೆ. ಫೈನಲ್‌ ಪಂದ್ಯದಲ್ಲಿ ರಾಜಸ್ತಾನ್‌ ವಿಶ್ವವಿದ್ಯಾಲಯ ತಂಡವನ್ನು 71-48 ಅಂಕಗಳ ಅಂತರದಿಂದ ಸೋಲಿಸಿ ಜೈನ್‌ ವಿವಿ ಪ್ರಶಸ್ತಿ ಪಡೆಯಿತು. ಜೈನ್‌ ವಿವಿ ತಂಡದ ಪರ ಧೀರಜ್‌ ರೆಡ್ಡಿ 24, ಆ್ಯರೋನ್‌ ಬ್ಲೆಸ್ಸನ್‌ 16 ಅಂಕ ಗಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಅತ್ತ ರಾಜಸ್ತಾನ ವಿವಿ ಪರ ಮಹಾವೀರ್‌ ಸಿಂಗ್‌ 22, ಹರ್ಮೀತ್‌ 10 ಅಂಕ ಗಳಿಸಿ ಮಿಂಚಿದರು.ಜೈನ್‌ ವಿಶ್ವ ವಿದ್ಯಾಲಯದ ಗೌತಮ್‌, ಧೀರಜ್‌, ಯಶ್ವಂತ್‌, ನರೇಶ್‌, ಆ್ಯಶ್ಲೆಯ್‌, ತನಯ್‌, ಅರ್ಜುನ್‌, ಪೀಟರ್‌, ಬ್ರಿಜೇಶ್‌, ಶುಭಮ್‌, ಅನಿಶ್‌, ಆ್ಯರೋನ್‌ ಪ್ರಶಸ್ತಿ ಜಯಿಸಿದ ತಂಡದ ಸದಸ್ಯರಾಗಿದ್ದಾರೆ. ಸಹ ಕೋಚ್‌ ಲೋಕೇಶ್ , ಕೋಚ್‌ ಪ್ರಸಾದ , ಕೋಚ್‌ ಪುನಿತ್‌ ಸುರೇಶ್‌ ತಂಡಕ್ಕೆ ಬೆನ್ನೆಲುಬಾಗಿದ್ದರು. ಏಷ್ಯನ್‌ ಶೂಟಿಂಗ್‌: ಚಿನ್ನಗೆದ್ದ ಭಾರತದ ಯೋಗೇಶ್‌ಜಕಾರ್ತ: ಇಲ್ಲಿ ನಡೆಯುತ್ತಿರುವ ಏಷ್ಯಾ ಒಲಿಂಪಿಕ್‌ ಕ್ವಾಲಿಫೈಯರ್‌ ಟೂರ್ನಿಯಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಭಾನುವಾರ ಪುರುಷರ 25 ಮೀ. ವೈಯಕ್ತಿಕ ಸ್ಟಾಂಡರ್ಸ್‌ ಪಿಸ್ತೂಲ್‌ ವಿಭಾಗದಲ್ಲಿ ಯೋಗೇಶ್‌ ಸಿಂಗ್‌ ಚಿನ್ನ ಗೆದ್ದರು. ಅವರು ಫೈನಲ್‌ನಲ್ಲಿ 572 ಅಂಕದೊಂದಿಗೆ ಅಗ್ರಸ್ಥಾನಿಯಾದರು. ಇದೇ ಸ್ಪರ್ಧೆಯಲ್ಲಿ ತಂಡ ವಿಭಾಗದಲ್ಲಿ ಯೋಗೇಶ್ ಅವರು ಅಮಿತ್‌ ಕುಮಾರ್‌(565 ಅಂಕ) ಹಾಗೂ ಓಂ ಪ್ರಕಾಶ್‌(553 ಅಂಕ) ಜೊತೆಗೆ ಬಂಗಾರ ಗೆದ್ದರು. ಕೂಟದಲ್ಲಿ ಭಾರತ 14 ಚಿನ್ನ, 10 ಬೆಳ್ಳಿ ಸೇರಿ 32 ಪದಕ ಗೆದ್ದಿದೆ.

Share this article