6 ವರ್ಷ ಬಳಿಕ ಮಹಿಳಾ ಪ್ರಥಮ ದರ್ಜೆ ಟೂರ್ನಿ ಘೋಷಿಸಿದ ಬಿಸಿಸಿಐ

KannadaprabhaNewsNetwork |  
Published : Mar 02, 2024, 01:46 AM ISTUpdated : Mar 02, 2024, 09:25 AM IST
6 ವರ್ಷ ಬಳಿಕ ಮಹಿಳಾ ಪ್ರಥಮ ದರ್ಜೆ ಟೂರ್ನಿ ಘೋಷಿಸಿದ ಬಿಸಿಸಿಐ | Kannada Prabha

ಸಾರಾಂಶ

6 ವರ್ಷ ಬಳಿಕ ಮಹಿಳಾ ಪ್ರಥಮ ದರ್ಜೆ ಟೂರ್ನಿಯನ್ನು ಆಯೋಜನೆ ಬಿಸಿಸಿಐ ಘೋಷಿಸಿದ್ದು, 6 ತಂಡಗಳು ಭಾಗಿಯಾಗಲಿವೆ. ಟೆಸ್ಟ್‌ ಮಾದರಿಗೆ ಒತ್ತು ನೀಡಲು ಯೋಜನೆ ಬಿಸಿಸಿಐ ಯೋಜನೆ ರೂಪಿಸಿದೆ.

ನವದೆಹಲಿ: ಆರು ವರ್ಷಗಳ ಬಳಿಕ ದೇಶಿಯ ಮಹಿಳಾ ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಿ ಆಯೋಜಿಸುವುದಾಗಿ ಬಿಸಿಸಿಐ ಶುಕ್ರವಾರ ಘೋಷಿಸಿದೆ. ಮಾ.28ರಿಂದ ಪುಣೆಯಲ್ಲಿ ಹಿರಿಯರ ಅಂತರ್‌ ವಲಯ ಟೂರ್ನಿ ಆರಂಭವಾಗಲಿದ್ದು, ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಆತಿಥ್ಯ ವಹಿಸಲಿದೆ. 

ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಕೇಂದ್ರ ಹಾಗೂ ಈಶಾನ್ಯ ವಲಯ ಸೇರಿ ಒಟ್ಟು 6 ತಂಡಗಳು ಭಾಗಿಯಾಗಲಿವೆ.ಪ್ರತಿ ತಂಡ 5 ಪಂದ್ಯಗಳನ್ನಾಡಲಿದ್ದು, ಈ ಬಾರಿ ಪಂದ್ಯ 3 ದಿನಗಳದ್ದಾಗಿರಲಿದೆ. 

2018ರ ಅವೃತ್ತಿಯಲ್ಲಿ ಪಂದ್ಯ 2 ದಿನಕ್ಕೆ ಸೀಮಿತವಾಗಿತ್ತು. ಟೂರ್ನಿಯೂ 28ರಿಂದ ಪೂರ್ವ ವಲಯ ಮತ್ತು ಈಶಾನ್ಯ ವಲಯ, ಪಶ್ಚಿಮ ವಲಯ ಮತ್ತು ಮಧ್ಯ ವಲಯದ ನಡುವಿನ ಕ್ವಾರ್ಟರ್‌ ಫೈನಲ್‌ ಪಂದ್ಯಗಳೊಂದಿಗೆ ಆರಂಭವಾಗಲಿದೆ. ಏ.3ರಂದು ಸೆಮಿಫೈನಲ್‌ ನಿಗದಿಯಾಗಿದೆ. ಫೈನಲ್ ಪಂದ್ಯ ಏ.9ರಿಂದ ಆರಂಭವಾಗಲಿದೆ.

ಬಿಸಿಸಿಐನ ಕ್ರಮ ಸ್ವಾಗತಾರ್ಹ. ರಾಷ್ಟ್ರೀಯ ತಂಡವು ಮತ್ತೆ ಟೆಸ್ಟ್ ಕ್ರಿಕೆಟ್ ಆಡಲು ಪ್ರಾರಂಭಿಸಿದೆ. ಮುಂದಿನ ಪೀಳಿಗೆ ಕ್ರಿಕೆಟಿಗರು ದೇಸೀಯ ಟೆಸ್ಟ್‌ ಕ್ರಿಕೆಟ್ ಆಡುವ ಅಗತ್ಯವಿದೆ ಎಂದು ಭಾರತ ಮಹಿಳಾ ತಂಡದ ಮಾಜಿ ವೇಗಿ ಅಮಿತಾ ಶರ್ಮಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ವಲಯ ಮಟ್ಟದಲ್ಲಿ ಅಷ್ಟೇ ಅಲ್ಲದೆ ರಾಜ್ಯ ಮಟ್ಟದಲ್ಲಿ ಟೆಸ್ಟ್‌ ಕ್ರಿಕೆಟ್‌ ಆಡಬೇಕು ಎಂದಿದ್ದಾರೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ